Advertisement

ಗೋವಾದಲ್ಲಿ ಒಂದು ಕೆಜಿ ಈರುಳ್ಳಿಗೆ 170 ರೂ.

10:03 AM Dec 07, 2019 | Team Udayavani |

ಪಣಜಿ: ಗೋವಾ ರಾಜಧಾನಿ ಪಣಜಿಯಲ್ಲಿ ಈರುಳ್ಳಿ ದರ 170 ರೂ.ಗೆ ತಲುಪಿದೆ. ಗೋವಾ ಸರ್ಕಾರವು ಫಲೋತ್ಪಾದನ ಮಹಾಮಂಡಳದ ತರಕಾರಿ ಅಂಗಡಿಗಳಲ್ಲಿ ಪ್ರತಿ ಕೇಜಿಗೆ 129 ರೂ.ಗಳಂತೆ ಮಾರಾಟ ಮಾಡಲಾಗುತ್ತಿದೆ. ಇದರಿಂದಾಗಿ ಜನಸಾಮಾನ್ಯರು ಸದ್ಯಕ್ಕಂತೂ ಈರುಳ್ಳಿ ಖರೀದಿಸಲು ಅಸಾಧ್ಯ ಎಂಬ ಮಟ್ಟಕ್ಕೆ ತಲುಪಿದೆ.

Advertisement

ಗೋವಾದಲ್ಲಿ ಈರುಳ್ಳಿ ದರ ಗಗನಕ್ಕೆ ತಲುಪಿದೆ. ಗೋವಾದಲ್ಲಿ ಸರ್ಕರವು ಫಲೋತ್ಪಾದನ ಮಹಾಮಂಡಳದ ತರಕಾರಿ ಅಂಗಡಿಗಳ ಮೂಲಕ ರಾಜ್ಯದ ಜನತೆಗೆ ಸಬ್ಸಿಡಿ ದರದಲ್ಲಿ ತರಕಾರಿ ನೀಡುತ್ತಿದೆ. ಆದರೆ ಈರುಳ್ಳಿ ದರ ಗಗನಕ್ಕೇರಿರುವುದರಿಂದ ಇದಕ್ಕೆ ಹೆಚ್ಚಿನ ಸಬ್ಸಿಡಿ ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ಇದರಿಂದಾಗಿ ರಾಜ್ಯದಲ್ಲಿ ಫಲೋತ್ಪಾದನ ಮಹಾಮಂಡಳದ ಅಂಗಡಿಗಳಲ್ಲಿಯೂ ಈರುಳ್ಳಿ ಬೆಲೆ 129 ರೂ.ಗೆ ತಲುಪಿದೆ. ಸದ್ಯದ ಪರಿಸ್ಥಿತಿ ಗಮನಿಸಿದರೆ ಈರುಳ್ಳಿ ದರ ಪ್ರತಿ ಕೇಜಿಗೆ 200 ರೂ ಗಡಿ ದಾಟಿದರೂ ಆಶ್ಚರ್ಯವಿಲ್ಲ ಎಂದು ತರಕಾರಿ ವ್ಯಾಪಾರಿಗಳು ಅಭಿಪ್ರಾಯಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next