ಚಿಕ್ಕಮಗಳೂರು: ಫೇಸ್ ಬುಕ್ ಮುಖಾಂತರ ಪರಿಚಯವಾಗಿ 20 ವರ್ಷ ವಯಸ್ಸಿನ ಯುವತಿ, 17 ವರ್ಷದ ಬಾಲಕನೊಂದಿಗೆ ಮದುವೆಯಾಗಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಸದ್ಯ ಈ ಮದುವೆ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಯುವತಿ ಮೂಲತಃ ಬೆಂಗಳೂರು ನಿವಾಸಿಯಾಗಿದ್ದು, ಬಾಲಕ ಕಡೂರು ತಾಲ್ಲೂಕಿ ನ ಬ್ರಹ್ಮಸಮುದ್ರದವನು. ಇವರಿಬ್ಬರಿಬ್ಬರಿಗೆ ಫೇಸ್‌ಬುಕ್ ನಲ್ಲಿ ಪರಿಚಯವಾಗಿ, ಪ್ರೇಮವಾಗಿ ಇಬ್ಬರು ಮದುವೆಯಾಗಲು ನಿಶ್ಚಯಿಸಿದ್ದಾರೆ.
ಇದನ್ನೂ ಓದಿ:ಜಮ್ಮು ವಾಯು ಪಡೆ ನಿಲ್ದಾಣದ ಮೇಲೆ ಡ್ರೋನ್ ಬಾಂಬ್ ದಾಳಿ ಶಂಕೆ
ಆಗ ಎರಡು ಕುಟುಂಬಸ್ಥರು ಸೇರಿ ಬಾಲಕನ ಊರಿನಲ್ಲಿ ಜೂ.16ರಂದು ಮದುವೆ ಮಾಡಿದ್ದಾರೆ. ಬಾಲಕನನ್ನು ವಿವಾಹವಾಗಿರುವ ಯುವತಿ ವಿರುದ್ದ ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಬಾಲ್ಯವಿವಾಹ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಬಾಲ್ಯ ವಿವಾಹವಾಗಿರುವ ಸಂಬಂಧ ಜೂ.23ರಂದು ಮಕ್ಕಳ ಸಹಾಯವಾಣಿಗೆ ಕರೆ ಬಂದಿದ್ದು, ಸಖರಾಯಪಟ್ಟಣ ಪೋಲಿಸ್ ಸಿಬ್ಬಂದಿ ಅಂಗನವಾಡಿ ಮೇಲ್ವಿಚಾರಕಿ, ಗ್ರಾ.ಪಂ. ಕಾರ್ಯದರ್ಶಿ, ಮಕ್ಕಳ ಸಹಾಯವಾಣಿ ಸಿಬ್ಬಂದಿ ಯುವತಿಯನ್ನು ವಶಕ್ಕೆ ಪಡೆದಿದ್ದಾರೆ. ಯುವತಿಯನ್ನು ಚಿಕ್ಕಮಗಳೂರು ಸಾಂತ್ವನ ಕೇಂದ್ರದಲ್ಲಿ ಇರಿಸಲಾಗಿದೆ.
ಇದನ್ನೂ ಓದಿ:ಯೋಗೇಶ್ವರ್ ದೆಹಲಿ ಭೇಟಿ ನಿಗೂಢ; ಯಾರನ್ನೂ ಭೇಟಿಯಾಗದೆ ವಾಪಾಸು ಬಂದ ಸಚಿವ
ಬಾಲ್ಯ ವಿವಾಹ ಮತ್ತು ಕೋವಿಡ್ ನಿಯಮ ಉಲ್ಲಂಘನೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.