ಕನ್ನಡ ಚಿತ್ರರಂಗದಲ್ಲಿ ನಾಯಕ ನಟನಾಗಿದ್ದ ಕಿಚ್ಚ ಸುದೀಪ್ ಅವರನ್ನು ನಿರ್ದೇಶಕನಾಗಿ ಪರಿಚಯಿಸಿದ್ದು, “ಮೈ ಆಟೋಗ್ರಾಫ್’ ಸಿನಿಮಾ ಎಂಬುದು ಬಹುತೇಕರಿಗೆ ಗೊತ್ತಿರಬಹುದು.
ಈ ಸಿನಿಮಾದ ಮೂಲಕ ನಟನೆ ಮಾತ್ರವಲ್ಲದೆ, ನಿರ್ದೇಶನದಲ್ಲೂ ಸುದೀಪ್ ಸೈ ಎನಿಸಿಕೊಂಡರು. ಇದೀಗ “ಮೈ ಆಟೋಗ್ರಾಫ್’ ಸಿನಿಮಾದ ನಿರ್ದೇಶನದ ನೆನಪುಗಳನ್ನು ಸುದೀಪ್ ಮೆಲುಕು ಹಾಕಿದ್ದಾರೆ.
ಹೌದು, 2006 ರ ಫೆ. 17 ರಂದು ಬಿಡುಗಡೆಯಾದ “ಮೈ ಆಟೋಗ್ರಾಫ್’ ಸಿನಿಮಾಕ್ಕೆ ಈಗ 17 ವರ್ಷ. ಇದೇ ವೇಳೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ, “ಮೈ ಆಟೋಗ್ರಾಫ್’ ಸಿನಿಮಾದ ಬಗ್ಗೆ ಬರೆದುಕೊಂಡಿರುವ ನಟ ಕಂ ನಿರ್ದೇಶಕ ಸುದೀಪ್, “17 ವರ್ಷಗಳು ನನ್ನನ್ನು ನಿರ್ದೇಶಕನಾಗಿ ಮಾಡಿತು. ನಿರ್ದೇಶಕನ ಕುರ್ಚಿಯಲ್ಲಿ ಕೂತಿದ್ದು ಯಾವಾಗಲೂ ನನಗೊಂದು ಅತ್ಯದ್ಭುತ ಅನುಭವ. ಇದಕ್ಕೆ ಕಾರಣರಾದ ಪ್ರತಿ ಕಲಾವಿದರು, ತಂತ್ರಜ್ಞರು, ಪ್ರೊಡಕ್ಷನ್ ಟೀಮ್, ಸಪೋರ್ಟ್ ಸ್ಟಾಫ್ ಹೀಗೆ ಪ್ರತಿಯೊಬ್ಬರಿಗೂ ಧನ್ಯವಾದಗಳು’ ಎಂದಿದ್ದಾರೆ.