Advertisement

ಕ್ರೈಂ ಶೋ ನೋಡಿ ತಂದೆ ಕೊಂದ

12:40 AM Oct 31, 2020 | mahesh |

ಮಥುರಾ: ಕಿರು ತೆರೆಯಲ್ಲಿ ಪ್ರಸಾರವಾಗುವ ಅಪರಾಧ ಪ್ರಕರಣಗಳನ್ನು ಆಧರಿಸಿದ ಕಾರ್ಯಕ್ರಮ ಮಕ್ಕಳ ಮೇಲೆ ಪ್ರಭಾವ ಬೀರುತ್ತದೆ ಎಂಬ ಆರೋಪ ಸಾಮಾನ್ಯ. ಅದನ್ನೇ ಪುಷ್ಟೀಕರಿಸುವ ಘಟನೆ ಉತ್ತರ ಪ್ರದೇಶದ ಮಥುರಾದಲ್ಲಿ ನಡೆದಿದೆ. ಅದಕ್ಕಾಗಿ ಬಾಲಕ ಮೊಬೈಲ್‌ನಲ್ಲಿ 100 ಬಾರಿ ಅಪರಾಧ ಪ್ರಕರಣ ಆಧರಿಸಿದ ಕಾರ್ಯಕ್ರಮ ನೋಡಿದ್ದ.

Advertisement

ಈ ವರ್ಷದ ಮೇ ನಲ್ಲಿ ಪ್ರಾಪ್ತ ವಯಸ್ಕನಲ್ಲದ ಬಾಲಕ ತಂದೆಯನ್ನು ಕೊಂದು, ಮೃತದೇಹವನ್ನು ಯಾರಿಗೂ ಕಾಣದ ರೀತಿಯಲ್ಲಿ ಎಸೆದಿದ್ದ. ಜತೆಗೆ ಅಪರಾಧ ಕಾರ್ಯಕ್ರಮದಲ್ಲಿ ಪ್ರಸಾರವಾಗಿದ್ದ ದೃಶ್ಯಾವಳಿಯಿಂದ ಸ್ಫೂರ್ತಿ ಗೊಂಡು ಸಾಕ್ಷ್ಯ ನಾಶ ಮಾಡಿದ್ದಾನೆ ಎಂದು ಮಥುರಾದ ಪೊಲೀಸ್‌ ವರಿಷ್ಠಾಧಿಕಾರಿ ಎಸ್‌.ಮಿಶ್ರಾ ಹೇಳಿದ್ದಾರೆ.

ಮನೋಜ್‌ ಮಿಶ್ರಾ ಎಂಬಾತ ತನ್ನ ಪುತ್ರನಿಗೆ ಮತ್ತು ಪುತ್ರಿಗೆ ಥಳಿಸಿದ್ದ. ಇದರಿಂದ ಕ್ರುದ್ಧ ಗೊಂಡ ಬಾಲಕ ರಾಡ್‌ನಿಂದ ತಲೆಗೆ ಬಡಿದಿದ್ದ. ಪ್ರಜ್ಞೆ ತಪ್ಪಿ ಬಿದ್ದಿದ್ದ ತಂದೆಯ ಕೊರಳಿಗೆ ಬಟ್ಟೆ ಸುತ್ತಿ ಅವರನ್ನು ಕೊಂದು ಹಾಕಿದ್ದ. ಅನಂತರ ತಾಯಿ ಸಂಗೀತಾ ಮಿಶ್ರಾ ಸಹಾಯದಿಂದ ಸ್ಕೂಟಿಯಲ್ಲಿ ಖಾಲಿ ಸ್ಥಳಕ್ಕೆ ಮೃತದೇಹ ಕೊಂಡೊಯ್ದು ಸುಟ್ಟು ಹಾಕಿದ್ದ ಎಂದು ಎಸ್‌ಪಿ ತಿಳಿಸಿದ್ದಾರೆ.

ಕೊಲೆಯನ್ನು ಆತ್ಮಹತ್ಯೆ ಎಂದು ಪುಷ್ಟೀಕರಿಸುವ ಸಲುವಾಗಿ ಮೃತ ವ್ಯಕ್ತಿಯ ಕನ್ನಡಕ, ಚಪ್ಪಲಿ ಮತ್ತು ಇತರ ವಸ್ತುಗಳನ್ನು ಸ್ಥಳದಲ್ಲಿ ಎಸೆಯಲಾಗಿತ್ತು. ಮೇ 31ರ ವರೆಗೆ ಕುಟುಂಬ ಸದಸ್ಯರು ದೂರು ದಾಖಲಿಸಿರಲಿಲ್ಲ. ಮತ್ತೂಂದು ಪ್ರಕರಣದ ಬಗ್ಗೆ ತನಿಖೆ ನಡೆಸಿ ದಾಗ ಕುಕೃತ್ಯ ಬಯಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next