Advertisement

ಬರ್ತ್‌ಡೇ ಪಾರ್ಟಿಯಲ್ಲಿ ಸಹಪಾಠಿಯ ಗ್ಯಾಂಗ್‌ರೇಪ್‌;ವಿಡಿಯೋ ಚಿತ್ರೀಕರಣ 

10:40 AM Jul 04, 2017 | |

ಹೈದ್ರಾಬಾದ್‌: ಬರ್ತ್‌ಡೇ ಪಾರ್ಟಿಯೊಂದರಲ್ಲಿ ಭಾಗಿಯಾಗಿದ್ದ ಸಹಪಾಠಿಯೊಬ್ಬಳ ಮೇಲೆ ನಾಲ್ವರು ವಿದ್ಯಾರ್ಥಿಗಳು ಗ್ಯಾಂಗ್‌ರೇಪ್‌ ಎಸಗಿ ವಿಡಿಯೋ ಚಿತ್ರೀಕರಿಸಿದ ಅತ್ಯಂತ ಕಳವಳಕಾರಿ ಘಟನೆ ಖಮ್ಮಂನಲ್ಲಿ ನಡೆದಿದೆ.

Advertisement

ಭಾನುವಾರ ಘಟನೆ ನಡೆದಿದ್ದು, ಬರ್ತ್‌ ಡೇ ಪಾರ್ಟಿಗೆಂದು ತೆರಳಿದ್ದ ವೇಳೆ ನಾಲ್ವರು ಸಹಪಾಠಿಗಳು ಸಾಮೂಹಿಕ ಅತ್ಯಾಚಾರ ಎಸಗಿ ವಿಡಿಯೋ ಚಿತ್ರೀಕರಿಸಿಕೊಂಡಿರುವ ಬಗ್ಗೆ ಖಾಸಗಿ ಕಾಲೇಜಿನ 17 ರ ಹರೆಯದ ವಿದ್ಯಾರ್ಥಿನಿ ಪೊಲೀಸರಿಗೆ ಮಂಗಳವಾರ ದೂರು ನೀಡಿದ್ದಾಳೆ.

ಬಲತ್ಕಾರ ಎಸಗಿ ವಿಡಿಯೋ ಚಿತ್ರೀಕರಿಸಿಕೊಂಡಿದ್ದು,ವಿಷಯ ಬಹಿರಂಗಪಡಿಸಿದರೆ ಎಚ್ಚರಿಕೆ ಎಂದು ಬೆದರಿಕೆ ಹಾಕಿರುವ ಬಗ್ಗೆ ಪೊಲೀಸರು ತಿಳಿಸಿದ್ದಾರೆ.

ಪೋಕ್ಸೋ ಕಾಯಿದೆ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಅರೋಪಿಗಳು ನಾಲ್ವರು  ಡಿಗ್ರಿ ವಿದ್ಯಾರ್ಥಿಗಳಾಗಿದ್ದು 18 ವರ್ಷ ಮೇಲ್ಪಟ್ಟವರಾಗಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next