Advertisement

ರಾಜಸ್ಥಾನ: ಟ್ರಕ್‌ –ಜೀಪ್‌ ಢಿಕ್ಕಿಯಲ್ಲಿ 17 ಮಂದಿಯ ದಾರುಣ ಸಾವು

03:22 PM Mar 03, 2017 | udayavani editorial |

ಜೈಪುರ : ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯಲ್ಲಿ  ಟ್ರಕ್ಕಿಗೆ ಜೀಪ್‌ ಢಿಕ್ಕಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ 17 ಮಂದಿ ಮೃತಪಟ್ಟ ಘಟನೆ ವರದಿಯಾಗಿದೆ.

Advertisement

ಹನುಮಾನ್‌ಗಢ ಟೌನ್‌ ಪೊಲೀಸ್‌ ಸ್ಟೇಶನ್‌ ವ್ಯಾಪ್ತಿಗೆ ಒಳಪಡುವ ರವಾಸ್ತಾರ್‌ – ಹನುಮಾನ್‌ಗಢ ಮೆಗಾ ಹೈವೇ ಯಲ್ಲಿ ಈ ದುರ್ಘ‌ಟನೆ ಸಂಭವಿಸಿದೆ. ಪ್ರಯಾಣಿಕರಿಂದ ತುಂಬಿದ್ದ ಜೀಪ್‌ ಸಮೀಪದ ಪಟ್ಟಣಕ್ಕೆ ಹೋಗುತ್ತಿದ್ದಾಗ ಈ ದಾರುಣ ಅವಘಡ ಸಂಭವಿಸಿತು.

ಮೃತರ ಶವಗಳನ್ನು ಸಮೀಪದ ಸ್ಥಳೀಯ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು ಅವುಗಳ ಅಟಾಪ್ಸಿ ನಡೆಯುತ್ತಿರುವುದಾಗಿ ತಿಳಿದು ಬಂದಿದೆ ಎಂದು ಎಸ್‌ಎಚ್‌ಓ ಅನ್ವರ್‌ ಖಾನ್‌ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next