Advertisement

ದೆಹಲಿಯಲ್ಲಿ ಸಿಲಿಂಡರ್ ಸ್ಫೋಟ: 17 ಮಂದಿಗೆ ಗಾಯ,5 ಮನೆಗಳು ಕುಸಿತ

04:05 PM Nov 14, 2021 | Team Udayavani |

ಹೊಸದೆಹಲಿ: ದೆಹಲಿಯ ಆಜಾದ್‌ಪುರದಲ್ಲಿ ಎಲ್‌ಪಿಜಿ ಸಿಲಿಂಡರ್ ಸ್ಫೋಟಗೊಂಡು 17 ಮಂದಿ ಗಾಯಗೊಂಡಿದ್ದು, ಐದು ಮನೆಗಳು ಕುಸಿದ ಅವಘಡ ಭಾನುವಾರ ಸಂಭವಿಸಿದೆ.

Advertisement

ಸಿಲಿಂಡರ್ ಸ್ಫೋಟದಿಂದ ಆಜಾದ್‌ಪುರದ ಲಾಲ್‌ಬಾಗ್ ಮಸೀದಿ ಬಳಿಯ ಮನೆಯೊಂದರಲ್ಲಿ ಬೆಂಕಿ ಅವಘಡ ಸಂಭವಿಸಿದ ಬಗ್ಗೆ ಬೆಳಿಗ್ಗೆ ಕರೆ ಬಂದಿದೆ ಎಂದು ಆದರ್ಶ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.

17 ಮಂದಿಗೆ ಸುಟ್ಟ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಣ್ಣಪುಟ್ಟ ಸುಟ್ಟ ಗಾಯಗಳೊಂದಿಗೆ 16 ಮಂದಿಯನ್ನು ಬಾಬು ಜಗಜೀವನ್ ರಾಮ್ ಸ್ಮಾರಕ ಆಸ್ಪತ್ರೆಗೆ ದಾಖಲಿಸಿದ್ದರೆ, ಗಂಭೀರ ಗಾಯಾಳು ಒಬ್ಬರನ್ನು ಆರ್ ಎಂಎಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next