Advertisement

ಮೀನಿನ ಸಾರು ಸೇವನೆ: 168 ಮಂದಿ ಆಸ್ಪತ್ರೆಗೆ

11:48 AM Apr 03, 2017 | Team Udayavani |

ತಿರುವನಂತಪುರ: ಕೇರಳ ರಾಜಧಾನಿ ತಿರುವನಂತಪುರದ ಪಲ್ಲಿಪುರಂನಲ್ಲಿರುವ ಸಿಆರ್‌ಪಿಎಫ್ ಕ್ಯಾಂಪ್‌ನ 168 ಸಿಬಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೀನಿನ ಸಾರು ಸೇವನೆ ಬಳಿಕ ಈ ಬೆಳವಣಿಗೆಯಾಗಿದೆ ಎಂದು ಶಂಕಿಸಲಾಗಿದ್ದು, ತನಿಖೆಗಾಗಿ ಸಮಿತಿ ರಚಿಸಲಾಗಿದೆ. ಶನಿವಾರ ರಾತ್ರಿ ಊಟದ ಬಳಿಕ ಸಿಬಂದಿ ಹೊಟ್ಟೆ ನೋವು ಮತ್ತು ಅನಾರೋಗ್ಯದ ಬಗ್ಗೆ ಮಾಹಿತಿ ನೀಡಿದರು. ಕೂಡಲೇ ಅವರನ್ನೆಲ್ಲ ಆಸ್ಪತ್ರೆಗೆ ದಾಖಲಿಸಲಾಯಿತು. ಸುಮಾರು 50 ಮಂದಿಯನ್ನು ಹೊರರೋಗಿಗಳಾಗಿ ಚಿಕಿತ್ಸೆ ನೀಡಿ ಡಿಸ್ಚಾರ್ಜ್‌ ಮಾಡಲಾಗಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next