Advertisement
ಮಂಗಳವಾರ ವಿಧಾನಪರಿಷತ್‌ನಲ್ಲಿ ಬಿಜೆಪಿಯ ಕೆ. ಪ್ರತಾಪ್‌ಸಿಂಹ ನಾಯಕ್ ಕೇಳಿದ ಪ್ರಶ್ನೆಗೆ ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಪರವಾಗಿ ಉತ್ತರಿಸಿದ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ, ರಾಜ್ಯದಲ್ಲಿ ಎಲೆಚುಕ್ಕೆ ಮತ್ತು ಹಳದಿ ಎಲೆ ರೋಗದಿಂದ ಅಡಿಕೆ ಬೆಳೆ ಸಾಕಷ್ಟು ಹಾನಿಯಾಗಿದ್ದು ನಿಜ.
Related Articles
Advertisement
ಪ್ಯಾಕೇಜ್ ಘೋಷಿಸಲು ಆಗ್ರಹಈ ಮೊದಲು ಮಾತನಾ ಡಿದ ಪ್ರತಾಪ್‌ಸಿಂಹ ನಾಯಕ್, ಸರಕಾರದ ಕ್ರಮಗಳು ಬರೀ ರೋಗ ನಿಯಂತ್ರಣ ಮತ್ತು ನಿರ್ವಹಣೆಗೆ ಸೀಮಿತವಾಗಿವೆ. ಶಾಶ್ವತ ಪರಿಹಾರದ ಬಗ್ಗೆ ಗಂಭೀರ ಚಿಂತನೆ ಮಾಡಬೇಕು. ಅದಕ್ಕಿಂತ ಮುಖ್ಯವಾಗಿ ರೈತರಲ್ಲಿ ವಿಶ್ವಾಸ ತುಂಬುವ ದೃಷ್ಟಿಯಿಂದ ಪ್ಯಾಕೇಜ್ ಘೋಷಿಸಬೇಕು ಎಂದು ಆಗ್ರಹಿಸಿದರು. ಪ್ರವಾಸಿ ತಾಣಗಳಲ್ಲಿ ಹೊಸ ಪಾರ್ಕಿಂಗ್ ನೀತಿ
ರಾಜ್ಯಾದ್ಯಂತ ಪ್ರವಾಸಿ ತಾಣಗಳ ಪಾರ್ಕಿಂಗ್ ಸಮ ಸ್ಯೆಗೆ ಪ್ರತ್ಯೇಕ ಸ್ಥಳ ಒದಗಿಸಿ ಅಲ್ಲಿ ಬೂಮ್ ಬ್ಯಾರಿಯರ್ ಮತ್ತು ಡಿಜಿಟಲ್ ಪಾವತಿ ಆಧಾರದ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸುವ ಹೊಸ ನೀತಿಯನ್ನು ಸದ್ಯದಲ್ಲೇ ತರಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಪ್ರಶ್ನೆಗೆ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ಪರವಾಗಿ ಉತ್ತರಿಸಿದ ಅವರು, ಪ್ರವಾಸಿಗರ ಸುರಕ್ಷತೆಗೆ ಈಗಾಗಲೆ ಪ್ರವಾಸಿಮಿತ್ರ ಯೋಜನೆಯಡಿ ಸೂಕ್ತ ಭದ್ರತೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಜನನಿಬಿಡ ಪ್ರವಾಸಿ ತಾಣಗಳಾದ ಮೈಸೂರು, ಚಾಮುಂಡಿ ಬೆಟ್ಟ, ನಂದಿ ಗಿರಿಧಾಮ, ಹಂಪಿ, ಬಾದಾಮಿ, ಬನಶಂಕರಿ, ಕರಾವಳಿ ಪ್ರದೇಶಗಳಲ್ಲಿ ಪಾರ್ಕಿಂಗ್ ಶುಲ್ಕವನ್ನು ಡಿಜಿಟಲ್ ಪಾವತಿ ಆಧಾರದ ಮೇಲೆ ಸಂಗ್ರಹಿಸಲು ಕ್ರಮ ವಹಿಸಲಾಗುವುದು ಎಂದು ವಿವರಿಸಿದರು. ಎಮ್ಮೆಕೆರೆ ಈಜುಕೊಳ ಶೀಘ್ರ ಸೇವೆಗೆ ಮುಕ್ತ
ಮಂಗಳೂರು ಸ್ಮಾರ್ಟ್‌ಸಿಟಿ ಯೋಜನೆಯಡಿ ಅಭಿವೃದ್ಧಿಪಡಿಸಿದ ಎಮ್ಮೆಕೆರೆ ಈಜುಕೊಳ ಪುನಾರಂಭಿಸಲು ಈಗಾಗಲೇ ಅಗತ್ಯ ಕ್ರಮ ಕೈಗೊಂಡಿದ್ದು, ಶೀಘ್ರ ಸೇವೆಗೆ ಮುಕ್ತಗೊಳಿಸಲಾಗುವುದು ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬಿ.ಎಸ್. ಸುರೇಶ್ (ಬೈರತಿ) ವಿಧಾನಪರಿಷತ್‌ನಲ್ಲಿ ತಿಳಿಸಿದರು. ಮಂಗಳವಾರ ಪ್ರಶ್ನೋತ್ತರ ವೇಳೆ ಜೆಡಿಎಸ್‌ನ ಬಿ.ಎಂ. ಫಾರೂಕ್ ವಿಷಯ ಪ್ರಸ್ತಾವಿಸಿ, ಎಮ್ಮೆಕೆರೆಯಲ್ಲಿ ಸುಮಾರು 25 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಈಜುಕೊಳದ ನಿರ್ವಹಣೆಗಾಗಿಯೇ 2.15 ಕೋಟಿ ರೂ. ಮೀಸಲಿಡಲಾಗಿದೆ. ಇಂತಹ ಹೈಟೆಕ್ ಈಜುಕೊಳವನ್ನು ಉದ್ಘಾಟನೆಯಾದ ಬೆನ್ನಲ್ಲೇ ಸ್ಥಗಿತಗೊಳಿಸಲಾಗಿದೆ. ಇಷ್ಟೊಂದು ದುಬಾರಿ ವೆಚ್ಚ ಮತ್ತು ತರಬೇತುದಾರರಿಲ್ಲ ಎಂಬ ಕಾರಣಕ್ಕೆ ಸ್ಥಗಿತಗೊಳಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ಬಗ್ಗೆ ಅಗತ್ಯ ತನಿಖೆ ಆಗಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಸುರೇಶ್, ಉದ್ದೇಶಿತ ಈಜುಕೊಳವನ್ನು ಅಂತಾರಾಷ್ಟ್ರೀಯ ಮಾನದಂಡಗಳ ಪ್ರಕಾರ ನಿರ್ಮಿಸಲಾಗಿದ್ದು, ಅಭ್ಯಾಸ ಕೊಳದ ಆಳವು 2.20 ಮೀಟರ್ ಇದೆ. ಆದ್ದರಿಂದ ಈಜುಕೊಳದ ನಿರ್ವಹಣೆಗೆ ತಜ್ಞರ ಆವಶ್ಯಕತೆ ಇದೆ. ಅದರಂತೆ ಈಜುಕೊಳದ ಬಳಕೆಗೆ ಅನುಮತಿ ನೀಡುವ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ ಎಂದರು.
ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಅನುಷ್ಠಾನ ಸಮಿತಿಯನ್ನೂ ರಚಿಸಲಾಗಿದೆ. ಈ ಸಮಿತಿ ಈಜುಕೊಳದ ನಿರ್ವಹಣೆಗೆ ಕಾರ್ಯಸೂಚಿ ಸಿದ್ಧಪಡಿಸಿ, ಎಮ್ಮೆಕೆರೆ ಈಜುಕೊಳವನ್ನು ರಾಷ್ಟ್ರೀಯ/ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಗೆ, ತರಬೇತಿ ಮತ್ತು ಸಾರ್ವಜನಿಕ ಬಳಕೆಗೆ ಉಪಯೋಗಿಸಲು ಕ್ರಮ ವಹಿಸಲಿದೆ ಎಂದು ಹೇಳಿದರು.