Advertisement

1603 ಕಾರ್ಮಿಕರು ಒಡಿಸ್ಸಾಗೆ

06:29 AM May 30, 2020 | Suhan S |

ಕೊಪ್ಪಳ: ರಾಯಚೂರು, ಕೊಪ್ಪಳ, ಗದಗ ಹಾಗೂ ಬಳ್ಳಾರಿ ಜಿಲ್ಲೆಗಳ ವಿವಿಧ ಇಟ್ಟಿಗೆ ಭಟ್ಟಿ, ಕೈಗಾರಿಕೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಒಡಿಸ್ಸಾ ರಾಜ್ಯದ ಕಾರ್ಮಿಕರನ್ನು ಜಿಲ್ಲಾಡಳಿತ ವಿಶೇಷ ರೈಲಿನ ಮೂಲಕ ಶುಕ್ರವಾರ ತವರು ರಾಜ್ಯಕ್ಕೆ ಬೀಳ್ಕೊಟ್ಟಿತು.

Advertisement

ಓಡಿಸ್ಸಾ, ರಾಜಸ್ಥಾನ ಸೇರಿದಂತೆ ಅನ್ಯ ರಾಜ್ಯಗಳ ನೂರಾರು ಕಾರ್ಮಿಕರು ಜಿಲ್ಲೆಗೆ ದುಡಿಮೆ ಅರಸಿ ಆಗಮಿಸಿದ್ದರು. ಲಾಕ್‌ ಡೌನ್‌ನಿಂದಾಗಿ ಊರಿಗೆ ಹೋಗಲು ತುಂಬ ಪ್ರಯಾಸಪಟ್ಟಿದ್ದರು. ಇಂತಹ ಕಾರ್ಮಿಕರ ಸಮಸ್ಯೆ ಅರಿತ ಸರ್ಕಾರ ಅವರನ್ನು ತವರೂರಿಗೆ ಕಳುಹಿಸಲು ಅನುವು ಮಾಡಿಕೊಟ್ಟಿದೆ. ಶುಕ್ರವಾರ ವಿಶೇಷ ರೈಲಿನಲ್ಲಿ ಓಡಿಸ್ಸಾ ಮೂಲದ ಸುಮಾರು 1603 ಕಾರ್ಮಿಕರನ್ನು ಅವರ ರಾಜ್ಯಕ್ಕೆ ಬೀಳ್ಕೊಡಲಾಯಿತು.

ಕೊಪ್ಪಳ ಜಿಲ್ಲೆಯ 880, ಗದಗ ಜಿಲ್ಲೆಯ 39, ರಾಯಚೂರು ಜಿಲ್ಲೆಯ 246, ಚಿತ್ರದುರ್ಗ ಜಿಲ್ಲೆಯ 138, ಬಳ್ಳಾರಿ ಜಿಲ್ಲೆಯ 166 ಸೇರಿದಂತೆ ಒಟ್ಟು 1469 ಹಾಗೂ 134 ಮಕ್ಕಳು ಸೇರಿದಂತೆ ಒಟ್ಟು 1603 ಜನರು ತವರೂರಿಗೆ ತೆರಳಿದರು. ಕೊಪ್ಪಳ ಜಿಲ್ಲಾಡಳಿತವು ಊರಿಗೆ ತೆರಳುವ ಕಾರ್ಮಿಕರಿಗೆ ಎರಡು ಹೊತ್ತಿನ ಊಟದ ಪ್ಯಾಕೇಟ್‌, ನೀರು ಸೇರಿದಂತೆ ಖಾರದ ತಿನಿಸಿಗಳು ಸೇರಿದಂತೆ ಪ್ರತಿ ಒಬ್ಬ ವ್ಯಕ್ತಿಗೆ ವೆಚ್ಚಕ್ಕೆ 100 ರೂ. ನೀಡಿ ಅವರನ್ನು ಓಡಿಸ್ಸಾ ರಾಜ್ಯಕ್ಕೆ ಉಚಿತವಾಗಿ ಪ್ರಯಾಣ ಮಾಡಲು ಅವಕಾಶ ಕಲ್ಪಿಸಿತು.

ಸಂಸದ ಸಂಗಣ್ಣ ಕರಡಿ, ಜಿಲ್ಲಾಧಿಕಾರಿ ಪಿ. ಸುನೀಲ್‌ ಕುಮಾರ, ಎಸ್‌ಪಿ ಜಿ. ಸಂಗೀತಾ, ಎಸಿ ಸಿ.ಡಿ. ಗೀತಾ ಸೇರಿದಂತೆ ಇತರರು ನಗರದ ರೈಲ್ವೇ ನಿಲ್ದಾಣದಲ್ಲಿ ಕಾರ್ಮಿಕರನ್ನು ಬೀಳ್ಕೊಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next