ಜೆರುಸಲೇಮ್: ಗಾಜಾಪಟ್ಟಿ ಮೇಲೆ ಯುದ್ಧ ಸಾರಿದ ಬಳಿಕ ಇಸ್ರೇಲ್‌ನಲ್ಲಿ ಪ್ಯಾಲೆಸ್ತೀನ್ ನಾಗರಿಕರಿಗೆ ನಿರ್ಬಂಧ ಹೇರಲಾಗಿದೆ.
ಹೀಗಾಗಿ, ಅವರು ಮಾಡಿಕೊಂಡಿದ್ದ ಹಲವು ಉದ್ಯೋಗಗಳನ್ನು ಭಾರತೀಯರು ಮಾಡುತ್ತಿದ್ದಾರೆ. ಕಟ್ಟಡ ನಿರ್ಮಾಣ ಸೇರಿ ಸುಮಾರು 16000 ಭಾರತೀಯರು ಇಸ್ರೇಲ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಹಲವು ಕ್ಷೇತ್ರಗಳಲ್ಲಿ ಇನ್ನೂ ಕಾರ್ಮಿಕರ ಕೊರತೆ ಇದೆ. ಹೀಗಾಗಿ, ಭಾರತದಿಂದ ನೂರಾರು ಮಂದಿ ಕಾರ್ಮಿಕರನ್ನು ಕರೆಯಿಸಿಕೊಳ್ಳಲು ಇಸ್ರೇಲ್ ಮುಂದಾಗಿದ್ದು, ಅದಕ್ಕೆ ಸಂಬಂಧಿಸಿದಂತೆ ನೇಮಕ ಆರಂಭಿಸಿದೆ. ಭಾರತೀಯರೂ ಕೂಡ ಅಲ್ಲಿಗೆ ಉದ್ಯೋಗ ಅರಸಿ ಹೋಗಲು ಮುಂದಾಗಿದ್ದಾರೆ.
ಭಾರತದಲ್ಲಿ ಸಿಗುವ ಸಂಬಳಕ್ಕಿಂತ ಮೂರು ಪಟ್ಟು ಹೆಚ್ಚು ಮೊತ್ತವನ್ನು ಇಸ್ರೇಲ್‌ನಲ್ಲಿ ಒಮ್ಮೆಗೇ ದುಡಿಯಬಹುದು. ಹೀಗಾಗಿ ಭಾರತೀಯರು ಇಸ್ರೇಲ್‌ನತ್ತ ಆಕರ್ಷಿತರಾಗಿದ್ದಾರೆ.
ಹಮಾಸ್ ದಾಳಿಗೂ ಮುನ್ನ ಇಲ್ಲಿ ದುಡಿಯುತ್ತಿದ್ದ 80000 ಪ್ಯಾಲೆಸ್ತೇನಿಯರ ಬದಲಿಗೆ ಈಗ ಭಾರತೀಯರೂ ಸೇರಿ ಸುಮಾರು 30000 ವಿದೇಶಿಗರು ಕೆಲಸ ನಿರ್ವಹಿಸುತ್ತಿದ್ದಾರೆ.