Advertisement
ಪ್ರಕರಣದ ಪ್ರಮುಖ ಆರೋಪಿ ದೆಹಲಿ ಮೂಲದ ಸಂದೇಶ್ ಅಗರ್‌ವಾಲ್, ಡಬಲ್ ಎಯ್r ಕನ್ಸ್‌ಲ್‌ಟೆನ್ಸಿ ಹೆಸರಿನಲ್ಲಿ ನಕಲಿ ಸಂಸ್ಥೆ ನಡೆಸುತ್ತಿದ್ದು, ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಪದವಿ, ಸ್ನಾತಕೋತ್ತರ ಪದವಿಯ ನಕಲಿ ಅಂಕಪಟ್ಟಿಗಳು, ಸಿಬಿಎಸ್‌ಸಿ ನಕಲಿ ಅಂಕಪಟ್ಟಿ, ಕೆಲ ರಾಜ್ಯಗಳ ಪ್ರೌಢಶಿಕ್ಷಣ ಮಂಡಳಿಗಳು ಮತ್ತು ಅಂಕಪಟ್ಟಿ ಹಾಗೂ ಪ್ರಾವಿಷನಲ್ ಪ್ರಮಾಣ ಪತ್ರಗಳನ್ನುಸಿದಟಛಿಪಡಿಸಿ ವಿವಿಧ ರಾಜ್ಯಗಳ 180 ಏಜೆಂಟರ ಮೂಲಕ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
Related Articles
Advertisement
ಈತನ ವಿಚಾರಣೆ ವೇಳೆ ರಾಜ್ಯದ ಏಜೆಂಟ್ ಆಗಿದ್ದ ಹೆಬ್ಟಾಳದಲ್ಲಿ ಪಾರ್ಚೂನ್ ಇನ್ಸಿಟಿಟ್ಯೂಟ್ ನಡೆಸುತ್ತಿರುವಅರುಣಾ ಅವರನ್ನು ಬಂಧಿಸಲಾಯಿತು ಎಂದು ಅವರು ತಿಳಿಸಿದರು. ಆರೋಪಿ ಸಂದೇಶ್ ಅಗರ್‌ವಾಲ್ ಕರ್ನಾಟಕ, ಉತ್ತರ ಪ್ರದೇಶ,ಬಿಹಾರ ಮಾತ್ರವಲ್ಲದೇ, ಜಮ್ಮು ಕಾಶ್ಮೀರದಿಂದ ಕನ್ಯಾಕುಮಾರಿ ವರೆಗಿನ ಎಲ್ಲ ವಿವಿಗಳ ನಕಲಿ ಅಂಕಪಟ್ಟಿ ಸಿದಟಛಿಪಡಿಸುತ್ತಿದ್ದ. ಈತನ ಕಚೇರಿ ಮೇಲೆ ದಾಳಿ ನಡೆಸಿದಾಗ ದೇಶದ 38 ವಿವಿಗಳ 732 ನಕಲಿ ಅಂಕಪಟ್ಟಿಗಳು ಪತ್ತೆಯಾಗಿವೆ. ಹಾಗೆಯೇ 832 ಖಾಲಿ ಅಂಕಪಟ್ಟಿ ಮತ್ತು ಇತರೆ ಪ್ರಮಾಣ ಪತ್ರ ಸಿಕ್ಕಿವೆ.ಜತೆಗೆ ಕೆಲ ವಿವಿ ಅಧಿಕಾರಿಗಳ ರಬ್ಬನ್‌ಸ್ಟಾಂಪ್, ಹೋಲೋಗ್ರಾಂ ಹಾಗೂ ಕಂಪ್ಯೂಟರ್, ಪ್ರಿಂಟರ್‌ಗಳು, ಮುದ್ರಿಸಲು ಬಳಸುವ ಖಾಲಿ ಪ್ರತಿಗಳು ಪತ್ತೆಯಾಗಿವೆ ಎಂದು ತಿಳಿಸಿದರು. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ, ಕರ್ನಾಟಕ ಸ್ಟೇಟ್ ಕೌನ್ಸಿಲ್ ಆಫ್ ಇಂಟರ್ ಮೀಡಿ ಯೆಟ್ ಮತ್ತು ಹೈಯರ್ ಎಜುಕೇಷನ್, ಅಲಹಬಾದ್ ಕೃಷಿ ವಿಶ್ವವಿದ್ಯಾಲಯ, ಅಲಹಬಾದ್ ವಿಶ್ವ ವಿದ್ಯಾಲಯ, ಜಮ್ಮು ಮತ್ತು ಕಾಶ್ಮೀರ ಸ್ಟೇಟ್ ಬೋರ್ಡ್ ಆಫ್ ಸ್ಕೂಲ್ ಎಜುಕೇಷನ್, ನ್ಯಾಷನಲ್ ಇನ್ಸಿಟಿಟ್ಯೂಟ್ ಆಫ್ ರೂರಲ್ ಓಪನ್ ಸ್ಕೂಲಿಂಗ್, ದಿ ತಮಿಳುನಾಡು ಡಾ ಎಂಜಿಆರ್ ಮೆಡಿಕಲ್ ಯೂನಿವರ್ಸಿಟಿ, ಸಂಬಾಲ್‌ಪುರ ಯೂನಿವರ್ಸಿಟಿ, ಆಂಧ್ರಪ್ರದೇಶದ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್, ಡೈರೆಕ್ಟರೇಟ್ ಆಫ್ ಗೌವರ್ನಮೆಂಟ್ ಎಕ್ಸಾಮಿನೇಷನ್, ತಿರುವಳ್ಳುವರ್ ಯೂನಿವರ್ಸಿಟಿ, ಮೋನಾಡ್ ಯೂನಿವರ್ಸಿಟಿ, ಡಾ ಭೀಮ್‌ರಾವ್ ಅಂಬೇಡ್ಕರ್ ವಿವಿ, ದಯಾನಂದ ಆಂಗ್ಲೋ ವೇದಿಕ್ ವಿವಿ, ಛತ್ತಿಸ್‌ಘಡ್‌ನ ಡಾ ಸಿ.ವಿ.ರಾಮನ್ ವಿವಿ, ಗುಜರಾತ್ ಸ್ಟೇಟ್ ಎಕ್ಸಾಮಿನೇಷನ್ ಬೋರ್ಡ್, ಶ್ರೀಧರ್ ವಿವಿ, ಮೀರತ್ ಎಲ್‌ಎಲ್‌ಬಿ ಚೌಧರಿ ಚರಣ್‌ಸಿಂಗ್ ವಿವಿ, ಗೌತಮ್ ಬುದಟಛಿ ಟೆಕ್ನಿಕಲ್ ವಿವಿ, ಶೋಬಿತ್ ವಿವಿ, ಬುಂದೇಲ್‌ಖಂಡ್ ವಿವಿ, ಹಿಮಾಚಲ್ ಪ್ರದೇಶದ ಮಾನವ್ ಭಾರತಿ ವಿವಿ, ರಾಜಸ್ಥಾನ ಓಪಿಜೆಎಸ್ ವಿವಿ, ಸಿಂಘಾಲಿಯಾ ವಿವಿ, ಈಳಂ ವಿವಿ, ಸಿಕ್ಕಿಂ ಯೂನಿವರ್ಸಿಟಿ, ಗ್ರಾμಕೇರ್ ವಿವಿ, ನಾರ್ತ್ ಒಡಿಶಾ ಯೂನಿವರ್ಸಿಟಿ ಆಫ್ ಅಗ್ರಿಕಲ್ಚರ್ ಮತ್ತು ಟೆಕ್ನಾಲಜಿ, ಜೋಧ್‌ಪುರ್ ನ್ಯಾಷನಲ್ ಯೂನಿವರ್ಸಿಟಿ, ವೀರ್‌ಬಹದ್ದೂರ್ ಸಿಂಗ್ ಪೂರ್ವಾಂಚಲ್ ಯೂನಿವರ್ಸಿಟಿ, ಭಾರತ್ ವಿವಿ ಸೇರಿ 38 ವಿಶ್ವವಿದ್ಯಾಲಯಗಳ ಹೆಸರಿನಲ್ಲಿ ನಕಲಿ ಅಂಕಪಟ್ಟಿ ಸಿದಟಛಿತೆ ಮಾಡುತ್ತಿದ್ದರು. ಸಾಮಾಜಿಕ ಜಾಲತಾಣಗಳ ಬಳಕೆ
ಸಾಮಾನ್ಯ ವಿವಿ ಮತ್ತು ಪದವಿಗೆ 50 ಸಾವಿರ ಮತ್ತು ಎಂಬಿಬಿಎಸ್, ಎಂಟೆಕ್ ಪ್ರಮಾಣ ಪತ್ರಕ್ಕೆ 1 ಲಕ್ಷ ರೂ. ನಿಗದಿ ಮಾಡಲಾಗಿತ್ತು. ಸೀಟು ಕೊಡಿಸುವ ಸಮನ್ವಯ ಅಧಿಕಾರಿಗಳ ಹೆಸರಿನಲ್ಲಿ ಕಚೇರಿ, ವೆಬ್‌ಸೈಟ್ ಮತ್ತು ಫೇಸ್‌ಬುಕ್, ಟ್ವಿಟರ್ ಖಾತೆ ತೆರೆದು ವಿದ್ಯಾರ್ಥಿಗಳನ್ನು ಸೆಳೆಯುತ್ತಿದ್ದರು. ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳು ಸಲಹೆ ಪಡೆಯಲು ಬಂದಾಗ ನಕಲಿ ಅಂಕಪಟ್ಟಿ,
ಪ್ರಮಾಣ ಪತ್ರ ಕೊಡುವುದಾಗಿ ಹೇಳಿ ಆರೋಪಿಗಳು ಹಣ ವಸೂಲಿ ಮಾಡುತ್ತಿದ್ದರು. ರಾಜ್ಯದ 400 ವಿದ್ಯಾರ್ಥಿಗಳು
ರಾಜ್ಯದ 400ಕ್ಕೂ ಅಧಿಕ ವಿದ್ಯಾರ್ಥಿಗಳು ನಕಲಿ ಅಂಕಪಟ್ಟಿ ಪಡೆದು ವಿವಿಗಳಲ್ಲಿ ದಾಖಲಾಗಿರುವ ಪ್ರಾಥಮಿಕ ಮಾಹಿತಿ ಇದೆ. ಕಾನೂನು ಬಾಹಿರವಾಗಿ ಸೌಲಭ್ಯ ಪಡೆದ ಆರೋಪದ ಮೇಲೆ ಈ ವಿದ್ಯಾರ್ಥಿಗಳ ಮೇಲೂ ಕೂಡ ಕ್ರಮ ಜರುಗಿಸಲಾಗುವುದು. ಅಲ್ಲದೇ ನಕಲಿ ದಾಖಲೆಗಳನ್ನು ನಂಬಿ ವಿದ್ಯಾರ್ಥಿಗಳಿಗೆ ಸೀಟು ಕೊಟ್ಟ ವಿವಿಗಳ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದು ಡಿಸಿಪಿ ಆನಂದ್ ಕುಮಾರ್ ತಿಳಿಸಿದ್ದಾರೆ. ದೇಶಾವ್ಯಾಪಿ ಹರಡಿರುವ ಈ ದಂಧೆಯ ಬಗ್ಗೆ ಬೇರೆ ರಾಜ್ಯಗಳ ಪೊಲೀಸರು ಮಾಹಿತಿ ಕೇಳಿದರೆ ಪ್ರಕರಣದ ಎಲ್ಲ ವಿಚಾರ ವನ್ನು ವಿನಿಮಯ ಮಾಡಿಕೊಂಡು ಇದರ ಮೂಲ ಜಾಡನ್ನು ಹಿಡಿಯಲು ನೆರವು ನೀಡುತ್ತೇವೆ.
– ಎಚ್.ಡಿ.ಆನಂದ್
ಕುಮಾರ್-ಡಿಸಿಪಿ-2, ಸಿಸಿಬಿ