Advertisement
ಬಸವರಾಜ ಬಾಳಪ್ಪ ಗಡ್ಡಿ ಎಂಬ ಯುವಕ ನ.15ರಂದು ಸಿನಿಮೀಯ ರೀತಿಯಲ್ಲಿ ಹೆತ್ತವರ ಮಡಿಲು ಸೇರಿದ್ದಾನೆ. 2005ರ ಮಾರ್ಚ್ ತಿಂಗಳಲ್ಲಿ ಶ್ರೀಶೈಲ ಪಾದಯಾತ್ರೆಗೆ ಹೋಗಿದ್ದು, ಮರಳಿ ಬಾರದ ಮಗನ ಪತ್ತೆಗಾಗಿ ತಂದೆ-ತಾಯಿ ಇರುವ ಅಲ್ಪ ಸ್ವಲ್ಪ ಆಸ್ತಿ ಅಡವಿಟ್ಟು ಸಾಲ ಮಾಡಿ ಬಾಗಲಕೋಟೆ, ರಾಯಚೂರು ಸೇರಿ ಹಲವೆಡೆ ಹುಡುಕಿದ್ದರು. ಪ್ರಯೋಜನ ಆಗಿರಲಿಲ್ಲ. ಬಾಳಪ್ಪ ಹಾಗೂ ಮಹಾದೇವಿ ದಂಪತಿಗೆ ಒಬ್ಬನೇ ಮಗ ಹಾಗೂ ಮೂವರು ಪುತ್ರಿಯರು. ಅದರಲ್ಲಿ ಓರ್ವ ಪುತ್ರಿ ಅಂಗವಿಕಲೆ. ಅಣ್ಣ ನಾಪತ್ತೆಯಾದ ಹಿನ್ನೆಲೆ ಮನನೊಂದು ಆತನ ಬರುವಿಕೆಗಾಗಿ ಕಾದು ಕಾದು 2007ರಲ್ಲಿ ತೀರಿಕೊಂಡಳು. ಮಗ ನಾಪತ್ತೆ ಹಾಗೂ ಪುತ್ರಿ ಮೃತಪಟ್ಟಿದ್ದರಿಂದ ಮಾನಸಿಕವಾಗಿ ನೊಂದ ತಂದೆ ಬಾಳಪ್ಪ 2015ರಲ್ಲಿ ಮೃತಪಟ್ಟಿದ್ದರು.
Related Articles
Advertisement
ಕುಟುಂಬದವರ ಜತೆ ಪ್ರೀತಿ- ವಿಶ್ವಾಸದಿಂದಿದ್ದ ಎನ್ನಲಾಗಿದೆಕಣ್ಮುಂದೆಯೇ 16 ವರ್ಷದಿಂದ ಮಗನನ್ನು ಕಾಣದೇ ಎಷ್ಟೆಲ್ಲ ನೋವುಗಳು ಆ ಕುಟುಂಬಕ್ಕೆ ಆಗಿರಬೇಕು. ದೇವರ ದಯೆಯಿಂದ ಮುಪ್ಪಿನ ವಯಸ್ಸಿನಲ್ಲಿ ನಾಪತ್ತೆಯಾದ ಮಗ ಮತ್ತೆ ಸಿಕ್ಕಿದ್ದಾನೆ. ಇನ್ನು ಮಗನ ಮದುವೆ ಆಗಿಲ್ಲ, ಹೀಗಿರುವಾಗ ಆದಷ್ಟೂ ಶೀಘ್ರ ಮದುವೆ ಮಾಡಿ ಸೊಸೆ ಕಾಣುವ ಮಂದಹಾಸ ಆ ತಾಯಿ ಮುಖದಲ್ಲಿ ಮೂಡಿದೆ. -ಈರಪ್ಪ ಬನ್ನೂರ, ತಾಯಿ ಸಂಬಂಧಿಕರು