Advertisement
ಹನ್ನೊಂದು ಶಿಬಿರಗಳ ಪೈಕಿ ಐದು ಉಗ್ರ ತರಬೇತಿ ಶಿಬಿರಗಳು ಪಿಓಕೆಯ ಮುಜಫರಾಬಾದ್, ಕೋಟ್‌ಲಿ ಮತ್ತು ಬರ್ನಾಲಾ ಪ್ರದೇಶಗಳಲ್ಲಿವೆ. ಪಾಕಿಸ್ಥಾನದ ಇತರೆಡೆಗಳಲ್ಲಿ ಸಕ್ರಿಯವಾಗಿರುವ ಐದು ಉಗ್ರ ಶಿಬಿರಗಳ ಪೈಕಿ ಎರಡು ಪಾಕ್ ಪಂಜಾಬ್ ಮತ್ತು ಮನ್‌ಶೇರಾದಲ್ಲಿ ಇವೆ ಎಂದು ಗುಪ್ತಚರ ದಳ ಹೇಳಿದೆ.
Related Articles
Advertisement
ಮೂಲಗಳ ಪ್ರಕಾರ ಭಾರತವು ಪಾಕಿಸ್ಥಾನದ ಉಗ್ರರ ಈ ಅಡಗುದಾಣಗಳು ಮತ್ತು ಶಿಬಿರಗಳ ಸೆಟಲೈಟ್ ಇಮೇಜ್ ಗಳನ್ನು ಇತರ ದೇಶಗಳೊಂದಿಗೆ ಹಂಚಿಕೊಂಡು ಆ ಮೂಲಕ ಪಾಕಿಸ್ಥಾನವನ್ನು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಮುಜುಗರಕ್ಕೆ ಗುರಿಪಡಿಸಲು ಯತ್ನಿಸಲಿದೆ ಎಂದು ತಿಳಿದು ಬಂದಿದೆ.
ಭಾರತದ ವಿರುದ್ಧ ಸಮುದ್ರ ಮೂಲಕ ಭಯೋತ್ಪಾದಕ ದಾಳಿ ನಡೆಸಲು ಉಗ್ರರಿಗೆ ತರಬೇತಿ ನೀಡಲಾಗುತ್ತಿದೆ ಎಂದು ಭಾರತೀಯ ನೌಕಾ ಪಡೆ ಮುಖ್ಯಸ್ಥ ಸುನಿಲ್ ಲಾಂಬಾ ಇಂದು ಬೆಳಗ್ಗೆಯಷ್ಟೇ ಎಚ್ಚರಿಸಿದ್ದರು.
ರಾಷ್ಟ್ರ ರಾಜಧಾನಿಯಲ್ಲಿ ಏರ್ಪಡಿಸಲಾಗಿದ್ದ ಇಂಡೋ ಪೆಸಿಫಿಕ್ ರೀಜಿನಲ್ ಡಯಾಲೋಗ್ ಸಮಾವೇಶದಲ್ಲಿ ಮಾತನಾಡುತ್ತಿದ್ದ ನೌಕಾ ಪಡೆ ಮುಖ್ಯಸ್ಥ ಲಾಂಬಾ ಅವರು ಪಾಕ್ ಮೂಲದ ಉಗ್ರರು ಹಿಂದೆ 2008ರಲ್ಲಿ ಮುಂಬಯಿ ಮೇಲೆ ನಡೆಸಿದ್ದ 26/11ರ ಉಗ್ರ ದಾಳಿಯ ರೀತಿ ಸಮುದ್ರ ಮೂಲಕ “ಸಮುಂದರೀ ಜಿಹಾದ್’ ರೂಪದಲ್ಲಿ ಉಗ್ರ ದಾಳಿ ನಡೆಸುವುದಕ್ಕೆ ಭಯೋತ್ಪಾದಕರಿಗೆ ತರಬೇತಿ ನೀಡಲಾಗುತ್ತಿದೆ ಮತ್ತು ಇದು ಅತ್ಯಂತ ಅಪಾಯಕಾರಿಯೂ ಸವಾಲಿನದ್ದೂ ಆಗಿದೆ ಎಂದು ಹೇಳಿದ್ದರು.