Advertisement

ಬಂಟ್ವಾಳದ ಪುದು ಗ್ರಾಮದಲ್ಲಿ ಒಂದೇ ದಿನ 16 ಕೋವಿಡ್ ಸೋಂಕು ಪ್ರಕರಣ

07:41 PM Jul 10, 2020 | keerthan |

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್ 19 ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಜಿಲ್ಲೆಯ ಬಂಟ್ವಾಳ ತಾಲೂಕು ಕೂಡಾ ಕೋವಿಡ್ ಭೀತಿ ಎದುರಿಸುತ್ತಿದೆ. ತಾಲೂಕಿನ ಪುದು ಗ್ರಾಮದಲ್ಲಿ ಇಂದು ಒಂದೇ ದಿನ 16 ಜನರಿಗೆ ಕೋವಿಡ್-19 ಸೋಂಕು ದೃಢವಾಗಿದೆ.

Advertisement

ಗ್ರಾಮದ ಒಂದು ಮನೆಯ 12 ಜನರಿಗೆ ಹಾಗೂ ಇನ್ನೊಂದು ಮನೆಯ ನಾಲ್ಕು ಮಂದಿಗೆ ಸೋಂಕು ದೃಢಪಟ್ಟಿದೆ. ಕಳೆದ ಕೆಲವು ದಿನಗಳ ಹಿಂದೆ ಈ ಎರಡೂ ಮನೆಗಳ ಸದಸ್ಯರಿಗೆ ಸೋಂಕು ದೃಢಪಟ್ಟಿತ್ತು. ಇವರ ಸಂಪರ್ಕದ ಕಾರಣದಿಂದ ಸೋಂಕು ದೃಢವಾಗಿದೆ ಎನ್ನಲಾಗಿದೆ.

ತಾಲೂಕಿನ ಉಳಿದ ಪ್ರಕರಣಗಳ ಮಾಹಿತಿ ಇನ್ನಷ್ಟೇ ಲಭಿಸಬೇಕಿದೆ. ತಾಲೂಕಿನಲ್ಲಿ ಜು. ಎಂಟರಂದು 12, ಜು. ಒಂಬತ್ತರಂದು 26 ಪ್ರಕರಣಗಳು ದೃಢಪಟ್ಟಿತ್ತು.

Advertisement

Udayavani is now on Telegram. Click here to join our channel and stay updated with the latest news.

Next