Advertisement
ಪ್ರಕರಣದ ಹಿನ್ನೆಲೆಮೋಹನ್ಗೆ 2007ರ ಎಪ್ರಿಲ್‌ನಲ್ಲಿ ಉಪ್ಪಳ ಬಸ್ ನಿಲ್ದಾಣದಲ್ಲಿ ಬೇಕೂರಿನ ಅವಿವಾಹಿತ ಯುವತಿಯ ಪರಿಚಯವಾಗಿತ್ತು. ಸಂಗೀತ ಶಿಕ್ಷಕಿಯಾಗಿದ್ದ ಆಕೆಯ ಜತೆ ಮೋಹನ್ ತನ್ನನ್ನು ಸುಧಾರಕ ಆಚಾರ್ಯ, ಅರಣ್ಯ ಇಲಾಖೆಯ ಉದ್ಯೋಗಿ ಎಂದು ಪರಿಚಯಿಸಿಕೊಂಡಿದ್ದ. ಬಳಿಕ ಆಕೆಯನ್ನು ಪುಸಲಾಯಿಸಿ ಪ್ರೀತಿಸುವ ನಾಟಕವಾಡಿ ಮದುವೆ ಆಗುವುದಾಗಿ ನಂಬಿಸಿದ್ದ. ಬಳಿಕ ಆಕೆಯ ಮನೆಗೂ ಹೋಗಿ ಪೋಷಕರ ವಿಶ್ವಾಸ ಗಳಿಸಿದ್ದ.
ಮರುದಿನ ಬೆಳಗ್ಗೆ ಮೋಹನ್ ಯುವತಿ ಬಳಿ “ನಾವಿಬ್ಬರು ಪೂಜೆಗೆ ಹೋಗಿ ಬರೋಣ. ಚಿನ್ನಾಭರಣಗಳನ್ನು ಲಾಡ್ಜ್ನಲ್ಲಿ ಇರಿಸಿ ಹೋಗೋಣ’ ಎಂದು ನಂಬಿಸಿ ಆಕೆಯನ್ನು ಹೊರಗೆ ಕರೆದೊಯ್ದಿದ್ದ. ಅಲ್ಲಿಂದ ಬೆಂಗಳೂರಿನ ಬಸ್ ನಿಲ್ದಾಣಕ್ಕೆ ಹೋಗಿದ್ದು, ಅಲ್ಲಿ ಮೋಹನನು ಯುವತಿಗೆ “ನಿನ್ನೆ ಲೈಂಗಿಕ ಸಂಪರ್ಕ ಮಾಡಿದ ಕಾರಣ ಗರ್ಭ ಧರಿಸುವುದನ್ನು ತಡೆಯಲು ಶೌಚಾಲಯಕ್ಕೆ ಹೋಗಿ ಈ ಮಾತ್ರೆ ಸೇವಿಸು’ ಎಂದು ಸೈನೈಡ್ ನೀಡಿದ್ದ. ಇದನ್ನು ನಂಬಿದ ಮಾತ್ರೆ ಸೇವಿಸಿದ್ದ ಆಕೆ ಕುಸಿದು ಬಿದ್ದಿದ್ದಳು. ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದಾಗ ಮೃತ ಪಟ್ಟಿರುವುದು ತಿಳಿದು ಬಂತು. ಈ ನಡುವೆ ಮೋಹನನು ಲಾಡ್ಜ್ಗೆ ಬಂದು ಚಿನ್ನಾಭರಣ ಸಹಿತ ಪರಾರಿಯಾಗಿದ್ದು, ಬಳಿಕ ಆಭರಣವನ್ನು ಮಂಗಳೂರಿನಲ್ಲಿ ಮಾರಾಟ ಮಾಡಿದ್ದ.
Related Articles
ಯುವತಿಯ ಮನೆಯಲ್ಲಿ ಮತ್ತೂ ಇಬ್ಬರು ಹೆಣ್ಣಕ್ಕಳು ಇದ್ದ ಕಾರಣ ಮರ್ಯಾದೆಗೆ ಅಂಜಿ ನಾಪತ್ತೆ ದೂರು ನೀಡಿರಲಿಲ್ಲ. ಆಕೆಯು ಪ್ರಿಯತಮನೊಂದಿಗೆ ಸುಖವಾಗಿರಬಹುದೆಂದು ಭಾವಿಸಿದ್ದರು. ಆದರೆ 2009ರಲ್ಲಿ ಮೋಹನ್ ಬಂಧನವಾಗಿ ಟಿವಿಯಲ್ಲಿ ಆತನ ಫೋಟೋ ನೋಡಿದ ಬಳಿಕ ಯುವತಿಯ ಸಹೋದರಿ ಬೆಂಗಳೂರಿನ ಉಪ್ಪಾರ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.
Advertisement
2009 ಅ.26ರಂದು ಬರಿಮಾರಿನ ಯುವತಿ ಕೊಲೆ ಪ್ರಕರಣದ ತನಿಖೆ ನಡೆಸುತ್ತಿದ್ದಾಗ ಮೋಹನನು ಮಂಜೇಶ್ವರದ ಯುವತಿಯನ್ನು ಕೊಂದುದನ್ನು ತಿಳಿ ದ್ದ. ಮಂಗಳೂರಿನಲ್ಲಿ ಆತ ಮಾರಿದ್ದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಉಪ್ಪಾರ ಪೇಟೆ ಪೊಲೀಸ್ ಠಾಣೆಯ ಸಿಐ ಲೋಕೇಶ್ವರ್ ಮತು ಎಸ್‌ಐ ನಾಗರಾಜ್ ತನಿಖಾಧಿಕಾರಿ ಆಗಿದ್ದರು. ಸಿಒಡಿ ಡಿವೈಎಸ್ಪಿ ಶಿವಶರಣಪ್ಪ ಪಾಟೀಲ್ ಆರೋಪಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಸಯಿ ದುನ್ನೀಸಾ ಅವರು 38 ಸಾಕ್ಷಿಗಳ ವಿಚಾರಣೆ ನಡೆಸಿ, 49 ದಾಖಲೆ ಪರಿಗಣಿಸಿ ಅಪರಾಧ ಸಾಬೀತಾಗಿದೆ ಎಂದು ತೀರ್ಮಾನಿಸಿದರು. ಸರಕಾರದ ಪರ ಪಬ್ಲಿಕ್ ಪ್ರಾಸಿಕ್ಯೂಟರ್ ಜುಡಿತ್ ಒ.ಎಂ. ಕ್ರಾಸ್ತಾ ವಾದಿಸಿದ್ದರು. ಮೋಹನ್ ವಿರುದ್ಧ ಒಟ್ಟು 20 ಪ್ರಕರಣಗಳಿದ್ದು, ಈಗಾ ಗ ಲೇ 16 ಪ್ರಕರಣಗಳ ವಿಚಾರಣೆ ಮುಗಿದಿದ್ದು, ಎಲ್ಲ ಪ್ರಕರಣಗಳಲ್ಲೂ ಶಿಕ್ಷೆಯಾಗಿದೆ.
ಸಾಬೀತಾದ ಆರೋಪಗಳುಈ ಪ್ರಕರಣದಲ್ಲಿ ಮೋಹನ್ ವಿರುದ್ಧ ದಾಖಲಿಸ ಲಾಗಿದ್ದ ಐಪಿಸಿ ಸೆಕ್ಷನ್ 302 (ಕೊಲೆ), ಸೆಕ್ಷನ್ 328 (ವಿಷ ಉಣಿಸಿದ್ದು), ಸೆಕ್ಷನ್ 392 (ಚಿನ್ನಾಭರಣ ಸುಲಿಗೆ), ಸೆಕ್ಷನ್ 394 (ವಿಷ (ಸಯನೈಡ್)ಪ್ರಾಶನ), ಸೆಕ್ಷನ್ 417 (ಮದುವೆ ಆಗುವುದಾಗಿ ವಂಚನೆ), ಸೆಕ್ಷನ್ 207 (ಸಾಕ್ಷ್ಯನಾಶ)ರ ಅಪರಾಧಗಳು ಸಾಬೀ ತಾಗಿವೆ ಎಂದು ನ್ಯಾಯಾಲಯ ತೀರ್ಪು ನೀಡಿದೆ.