Advertisement

ಚಾರ್‌ಕೋಪ್‌ ಕನ್ನಡಿಗರ ಬಳಗದ 15 ನೇ ವಾರ್ಷಿಕ ಮಹಾಸಭೆ

04:14 PM Dec 19, 2018 | |

ಮುಂಬಯಿ: ಸಂಸ್ಥೆ ಬೆಳೆಯುತ್ತಿದ್ದಂತೆ ಸಂಸ್ಥೆಯ ಕಾರ್ಯ ಕರ್ತರ ಜವಾಬ್ದಾರಿ ಹೆಚ್ಚಾಗುತ್ತದೆ. ಸಂಘಟನೆಯ ಮೂಲಕ ಸಂಸ್ಥೆಯನ್ನು ಭವಿಷ್ಯತ್ತಿನೆಡೆಗೆ ಕೊಂಡೊ ಯ್ಯಲು ಪದಾಧಿಕಾರಿಗಳು, ಸದಸ್ಯರು ಉತ್ಸುಕತೆಯಿಂದ ಕ್ರಿಯಾ ಶೀಲರಾಗಬೇಕು. ಆಗ ಮಾತ್ರ ಸಂಸ್ಥೆ ಗುಣಮಟ್ಟದ ಸಂಸ್ಥೆಯಾಗಿ ಬೆಳೆಯಲು ಸಾಧ್ಯ ಎಂದು ಚಾರ್‌ಕೋಪ್‌ ಕನ್ನಡಿಗರ ಬಳಗದ ಗೌರವಾಧ್ಯಕ್ಷ, ಸಂಸದ ಗೋಪಾಲ್‌ ಸಿ. ಶೆಟ್ಟಿ ಅವರು ನುಡಿದರು.

Advertisement

ಡಿ. 15ರಂದು ಪೊಯಿಸರ್‌ ಜಿಮಾVನದ ಸಭಾಗೃಹದಲ್ಲಿ ನಡೆದ ಚಾರ್‌ಕೋಪ್‌ ಕನ್ನಡಿಗರ ಬಳಗದ 15ನೇ ವಾರ್ಷಿಕ ಮಹಾ ಸಭೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದ ಅವರು, ಸಂಸ್ಥೆಯನ್ನು ಬೆಳವಣಿಗೆಯತ್ತ ಕೊಂಡೊಯ್ಯುವಾಗ ಸಂಸ್ಥೆಯಲ್ಲಿ ಕೆಲವು ಬದಲಾವಣೆಗಳು ಅನಿವಾರ್ಯ. ಆ ದೃಷ್ಟಿಯಿಂದ ಬಳಗದಲ್ಲಿ ಮಹಿಳಾ ವಿಭಾಗ, ಯುವ ವಿಭಾಗವನ್ನು ಸ್ಥಾಪಿಸಿ ಹೆಚ್ಚಿನ ಕಾರ್ಯಕ್ರಮಗಳಿಗೆ ಅನುವು ಮಾಡಿಕೊಡಬೇಕು. ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಅಭಿಮಾನ ಪ್ರತಿಯೊಬ್ಬರಿಗೂ ಇರಬೇಕು. ಜತೆಗೆ ಸಂಘದ ಕಾರ್ಯಕ್ರಮಗಳನ್ನು ನಿರ್ದಿಷ್ಟ ಸಮಯದೊಳಗೆ ಮುಗಿಸುವ ಮನೋಭಾವ ಕಾರ್ಯಕರ್ತರು ಹೊಂದಿರಬೇಕು ಎಂದು ಕಿವಿಮಾತು ಹೇಳಿದರು.

ಬಳಗದ ವಿಶ್ವಸ್ತರಾದ ಭಾಸ್ಕರ ಸರಪಾಡಿ ಅವರು ಮಾತನಾಡಿ, ಕಾರ್ಯಕಾರಿ ಸಮಿತಿಯ ಸದಸ್ಯರು ಪದವಿಗೆ ಗೌರವ ನೀಡಿ, ನಿಗದಿತ ಸಮಯದಲ್ಲಿ ಜರಗುವ ಸಭೆ, ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಬದ್ಧರಾಗಿರಬೇಕು. ಬರೇ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳಲ್ಲದೆ, ಸಾಹಿತ್ಯಕವಾಗಿಯೂ ನಾವು ಬೆಳೆಯಬೇಕು. ಈ ಮೊದಲು ಅಧ್ಯಕ್ಷ ರಾಗಿದ್ದ ಮಂಜುನಾಥ ಬನ್ನೂರು ಅವರು ಬಳಗಕ್ಕಾಗಿ ನೀಡಿದ ಸೇವೆ ಅಪಾರವಾಗಿದೆ ಎಂದರು.

ವಿಶ್ವಸ್ಥರಾದ ಎಂ. ಎಸ್‌. ರಾವ್‌, ಜಯ ಸಿ. ಶೆಟ್ಟಿ ಅವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ, ಬಳಗವನ್ನು ಯಾವ ರೀತಿಯಲ್ಲಿ ಸುದೃಢಗೊಳಿಸಬಹುದು ಎಂಬುವು ದರ ಬಗ್ಗೆ ವಿವರ ನೀಡಿದರು. ಸಭಿಕರ ಪರವಾಗಿ ನಾರಾಯಣ ರಾವ್‌, ಉಮೇಶ್‌ ಸಾಲ್ಯಾನ್‌, ಎಂ. ಜಿ. ಭಟ್‌, ಮನೋಜ್‌ ಸಾಲ್ಯಾನ್‌, ಪ್ರವೀಣ್‌ ಶೆಟ್ಟಿ ಶಿಮಂತೂರು, ವಿಜಯ ಡಿ. ಪೂಜಾರಿ, ಯಶೋದಾ ಶೆಟ್ಟಿ, ಮಹೇಂದ್ರ ಕಾಂಚನ್‌ ಅವರು ಸಲಹೆ ಸೂಚನೆಗಳನ್ನು ನೀಡಿದರು.

ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರವನ್ನಿತ್ತು ಗೌರವಿಸಲಾಯಿತು. ಅಲ್ಲದೆ ಸಂಘದ ವಿವಿಧ ಸ್ಪರ್ಧೆಗಳ ವಿಜೇತರನ್ನು ಬಹು ಮಾನವನ್ನಿತ್ತು ಅಭಿನಂದಿ ಸಲಾಯಿತು. ಪುರೋಹಿತ ನಾಗೇಶ್‌ ಭಟ್‌ ಅವರು ದೀಪಪ್ರಜ್ವಲಿಸಿ ಮಹಾಸಭೆಗೆ ಚಾಲನೆ ನೀಡಿದರು. ವಾರ್ಷಿಕ ವರದಿಯನ್ನು ಸಭೆಯಲ್ಲಿ ಅನುಮೋದಿಸ ಲಾಯಿತು. ಗೌರವ ಕೋಶಾಧಿಕಾರಿ ಗೌರಿ ಡಿ. ಪಣಿಯಾಡಿ ವಾರ್ಷಿಕ ಲೆಕ್ಕಪತ್ರವನ್ನು ಮಂಡಿಸಿದರು. ಆಂತರಿಕ ಲೆಕ್ಕಪರಿಶೋಧಕರಾಗಿ ಸದಾಶಿವ ಸಿ. ಪೂಜಾರಿ ಮತ್ತು ಲೆಕ್ಕ ಪರಿಶೋಧಕರಾಗಿ ವಿನಯ ಸಂಜಯ್‌ ಅಸೋಸಿಯೇಟ್ಸ್‌ ಅವರನ್ನು ನೇಮಿಸಲಾಯಿತು.

Advertisement

ಜತೆ ಕೋಶಾಧಿಕಾರಿ ಲತಾ ಬಂಗೇರ ಅವರು ಪ್ರತಿಭಾವಂತ ವಿದ್ಯಾರ್ಥಿಗಳ ಯಾದಿಯನ್ನು ಓದಿದರು. ಮಹಿಳಾ ವಿಭಾಗದ ಶಾಂತಾ ಭಟ್‌ ಬಳಗದ ವತಿಯಿಂದ ನಡೆದ ವಿವಿಧ ಸ್ಪರ್ಧೆಗಳ ವಿಜೇತರ ಹೆಸರನ್ನು ಘೋಷಿಸಿದರು. ಬಳಗದ ಗೌರವ ಕಾರ್ಯದರ್ಶಿ ರಘುನಾಥ ಎನ್‌. ಶೆಟ್ಟಿ ಅವರು ವಾರ್ಷಿಕ ವರದಿ ಮಂಡಿಸಿ ಕಾರ್ಯಕ್ರಮ ನಿರ್ವಹಿಸಿ ಸಂಸ್ಥೆಯ ಸಿದ್ಧಿ-ಸಾಧನೆಗಳನ್ನು ವಿವರಿಸಿ ವಂದಿಸಿದರು. ಬಳಗದ ಉಪಾಧ್ಯಕ್ಷ ಕೃಷ್ಣ ಟಿ. ಅಮೀನ್‌  ಉಪಸ್ಥಿತರಿದ್ದರು. ಸದಸ್ಯರು, ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. 

ಚಿತ್ರ-ವರದಿ : ರಮೇಶ್‌ ಉದ್ಯಾವರ

Advertisement

Udayavani is now on Telegram. Click here to join our channel and stay updated with the latest news.

Next