Advertisement

30 ದಿನಗಳಲ್ಲಿ 157 ಯೋಜನೆ

12:30 AM Mar 11, 2019 | Team Udayavani |

ಹೊಸದಿಲ್ಲಿ: ಲೋಕಸಭೆ ಚುನಾವಣೆ ಘೋಷಣೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಒಟ್ಟು 157 ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಕಳೆದ 30 ದಿನಗಳಲ್ಲಿ ದೇಶಾದ್ಯಂತ 28 ಕಡೆ ಪ್ರಯಾಣಿಸಿರುವ ಅವರು, ಫೆಬ್ರವರಿ 8-9 ರಿಂದಲೇ ಈ ಯೋಜನೆಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನಡೆಸಲು ಆರಂಭಿಸಿದ್ದರು.  ಹೆದ್ದಾರಿಗಳು, ರೈಲ್ವೇ ಮಾರ್ಗಗಳು, ವೈದ್ಯಕೀಯ ಕಾಲೇಜುಗಳು, ಆಸ್ಪತ್ರೆಗಳು, ಶಾಲೆಗಳು, ಗ್ಯಾಸ್‌ ಪೈಪ್‌ಲೈನ್‌, ವಿಮಾನ ನಿಲ್ದಾಣ, ನೀರಿನ ಸಂಪರ್ಕ, ಚರಂಡಿ ಸಂಪರ್ಕ, ವಿದ್ಯುತ್‌ ಘಟಕ ಹಾಗೂ ಇತರ ಹಲವು ಯೋಜನೆಗಳಿಗೆ ಶಂಕುಸ್ಥಾಪನೆ ಅಥವಾ ಉದ್ಘಾಟನೆ ಮಾಡಿದ್ದಾರೆ. ಈ ಪೈಕಿ ಸುಮಾರು 17 ಯೋಜನೆಗಳನ್ನು ರಿಮೋಟ್‌ ಕಂಟ್ರೋಲ್‌ ಮೂಲಕ ಜಾರಿಗೊಳಿಸಿದ್ದಾರೆ. ಜನವರಿ 8ರಿಂದ ಫೆಬ್ರವರಿ 7ರ ವರೆಗೆ 57 ಯೋಜನೆಗಳನ್ನು ಮೋದಿ ಜಾರಿಗೊಳಿಸಿದ್ದರು. 2014 ರಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಗೂ ಮುನ್ನ ಒಂದು ತಿಂಗಳ ಅವಧಿಯಲ್ಲಿ ಪ್ರಧಾನಿ ಮನಮೋಹನ ಸಿಂಗ್‌ ಯಾವ ಯೋಜನೆಯನ್ನೂ ಜಾರಿಗೊಳಿಸಿರಲಿಲ್ಲ.
 

Advertisement
Advertisement

Udayavani is now on Telegram. Click here to join our channel and stay updated with the latest news.

Next