Advertisement

ಭೈರವನದುರ್ಗದ ಬೆಟ್ಟದ ತುದಿಯಲ್ಲಿ 157 ಅಡಿ ಕನ್ನಡ ಧ್ವಜ

04:58 PM Nov 01, 2019 | Suhan S |

ಕುದೂರು: ಕನ್ನಡಕ್ಕಾಗಿ ದುಡಿದು ಮಡಿದು ಅಮರರಾದವರನ್ನು ನಾವುಗಳು ಆದರ್ಶವಾಗಿಸಿ ಕೊಳ್ಳಬೇಕು. ನಾಡಿನ ನೆಲ-ಜಲ ಭಾಷೆಯ ಅಭಿಮಾನಕ್ಕೆ ಕೊಂಚವೂ ದಕ್ಕೆಯಾಗದಂತೆ ಸ್ವಾಭಿಮಾನಿ ಬದುಕನ್ನುರೂಢಿಸಿಕೊಳ್ಳ ಬೇಕಿದೆ ಎಂದು ಡಾ.ರಾಜ್‌ಕುಮಾರ್‌ ಅಭಿಮಾನಿ ಸಂಘದ ಅಧ್ಯಕ್ಷ ನಾಗೇಶ್‌ ತಿಳಿಸಿದರು.

Advertisement

ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಭೈರವನದುರ್ಗದ ಬೆಟ್ಟದ ತುದಿಯ ಮೇಲೆ 157 ಅಡಿ ಅಗಲದ ಭಾವುಟವನ್ನು 20 ಅಡಿ ಎತ್ತರದ ಧ್ವಜಸ್ತಂಭದ ಮೇಲೆ ಆರೋಹಣ ಮಾಡಿ ಮಾತನಾಡಿದರು. ಬೈರವನದುರ್ಗ ಐತಿಹಾಸಿಕ ತಾಣವಾಗಿದೆ. ರಾಜ್ಯೋತ್ಸವ ಎಂದರೆ ಬರೀ ಭಾವುಟ ಹಾರಿಸುವುದು ಮಾತ್ರವಲ್ಲ. ಇಲ್ಲಿನ ನೆಲ-ಜಲ, ಭಾಷೆ, ಸಂಸ್ಕೃತಿ , ಬೆಟ್ಟ -ಗುಡ್ಡಗಳನ್ನು ಕಾಪಾಡಿಕೊಳ್ಳಬೇಕು. ಇದೊಂದು ಪ್ರವಾಸಿ ತಾಣವಾಗಬೇಕು. ಭೈರವನದುರ್ಗ ಕುದೂರು ಗ್ರಾಮದ ಅತಿದೊಡ್ಡ ಸಂಪತ್ತಾಗಿದೆ. ಆದರೆ ಅದರ ಮಹತ್ವ ಗೊತ್ತಿಲ್ಲದೆ ಇಂದು ದುರ್ಗದಲ್ಲಿ ಮರಗಳ ಮಾರಣ ಹೋಮ ನೆಡೆಯುತ್ತಿದೆ. ಹಾಡುಹಗಲೇ ಅಲ್ಲಿನ ಮರಗಳ್ಳತನ ಯಾರ ಭಯವಿಲ್ಲದೆ ನೆಡೆಯುತ್ತಿದೆ. ಇಂತಹ ಬೆಟ್ಟವನ್ನು ಉಳಿಸಿಕೊಳ್ಳಬೇಕು. ಅದಕ್ಕಾಗಿ ಪ್ರಯೋಗಿಕವಾಗಿ ಬೆಟ್ಟದ ತುದಿಯಲ್ಲಿ ಕನ್ನಡದ ಭಾವುಟವನ್ನು ಹಾರಿಸಿ. ದುರ್ಗವನ್ನು ಉಳಿಸಿ ಎಂಬ ಸಂದೇಶವನ್ನು ಜಿಲ್ಲಾ ಆಡಳಿತಕ್ಕೆ ನೀಡುತ್ತಿದ್ದೇವೆ ಎಂದು ತಿಳಿಸಿದರು.

ಸಂಘದ ಸದಸ್ಯ ಜಗದೀಶ್‌ ಮಾತನಾಡಿ. ಕನ್ನಡದ ಕೀರ್ತಿ ಜಗತ್ತಿನ ಎಲ್ಲಾ ಕಡೆಗಳಲ್ಲಿ ಹಬ್ಬಬೇಕು. ಎತ್ತರದಲ್ಲಿ ಧ್ವಜ ಹಾರಿಸಿ ಎತ್ತರದ ಭಾವನೆಗಳನ್ನು ಎದೆಯಲ್ಲಿಟ್ಟುಕೊಂಡು ಕರುನಾಡಿನ ಜನರು ನಮ್ಮವರು ಎಂದು ಇಂದಿನ ತಲೆಮಾರಿನ ಜನರಲ್ಲಿ ಭಾವನೆಗಳನ್ನು ತುಂಬುವ ಕೆಲಸವನ್ನು ಮಾಡುತ್ತಿದ್ದೇವೆ ಎಂದರು.

ಕರ್ನಾಟಕ ರಾಜ್ಯೋತ್ಸವದ ಹಿಂದಿನ ದಿನ ಬೆಟ್ಟದ ಮೇಲೆ ಹಾಜರಿದ್ದು ಮುಂಜಾನೆಯ ಸೂರ್ಯನ ಕಿರಣಗಳೊಂದಿಗೆ ಕನ್ನಡ ಭಾವುಟ ಕಂಗೊಳಿಸುವ ಕೆಲಸವನ್ನು ಸುಮಾರು 13 ವರ್ಷಗಳಿಂದ ಡಾ.ರಾಜ್‌ ಕುಮಾರ್‌ ಅಭಿಮಾನಿಗಳ ಸಂಘದ ಸದಸ್ಯರುಗಳು ಮಾಡುತ್ತಿರುವುದಕ್ಕೆ ಗ್ರಾಮಸ್ಥರು ಅಭಿನಂದಿಸಿದ್ದಾರೆ. ಈ ಭಾವುಟ ಸುತ್ತಮುತ್ತ ಹದಿನೈದು ಕೀಮಿ ದೂರದವರೆಗೂ ಕಾಣಬಹುದು ಎಂದು ಹೇಳಿದರು.

ಸಂಘದ ಸದಸ್ಯರುಗಳಾದ ಬೆಳ್ಳಿ ಕೃಷ್ಣ, ಜಗದೀಶ್‌, ಕೆಂಪ, ಸುರೇಶ್‌, ರೋಹಿತ್‌ , ಸಿದ್ದರಾಜು, ಚಂದ್ರುಶೇಖರ್‌, ಮಹೇಶ್‌ ಬಾಬು, ಲೋಕೇಶ್‌, ದೀಲೀಪ್‌, ಶಶಿಕುಮಾರ್‌, ದೇವರಾಜ, ಲಕ್ಷ್ಮೀಕಾಂತ, ಮಂಜುನಾಥ, ಮೂರ್ತಪ್ಪ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next