ನವದೆಹಲಿ: ಸರ್ವರ್ ಸಮಸ್ಯೆಯಿಂದಾಗಿ ಚೆನ್ನೈ ವಿಮಾನ ನಿಲ್ದಾಣದಿಂದ ಹೊರಡಬೇಕಿದ್ದ ಅಂತರರಾಷ್ಟ್ರೀಯ ವಿಮಾನದಲ್ಲಿ ವ್ಯತ್ಯಯ ಉಂಟಾಗಿ ಪ್ರಯಾಣಿಕರು ಪರದಾಡಿದ ಘಟನೆ ನಡೆದಿದೆ.
ಇಂದು (ಬುಧವಾರ) ಬೆಳಿಗ್ಗೆ ಚೆನ್ನೈ ವಿಮಾನ ನಿಲ್ದಾಣದಲ್ಲಿ ಸರ್ವರ್ ಸಮಸ್ಯೆ ತಲೆದೋರಿದ ಹಿನ್ನೆಲೆಯಲ್ಲಿ ವಿಮಾನ ಸಂಚಾರದಲ್ಲಿ ಸುಮಾರು ಮೂರು ಗಂಟೆಗಳ ಕಾಲ ವ್ಯತ್ಯಯ ಉಂಟಾಗಿದೆ ಪರಿಣಾಮ ವಿಮಾನ ನಿಲ್ದಾಣಕ್ಕೆ ಬಂದಿದ್ದ ಸುಮಾರು 1,500 ಕ್ಕೂ ಹೆಚ್ಚು ಪ್ರಯಾಣಿಕರು ಚೆನ್ನೈನ ವಿಮಾನ ನಿಲ್ದಾಣದಲ್ಲಿ ಕಾಯುವ ಸ್ಥಿತಿ ನಿರ್ಮಾಣವಾಗಿದೆ ಎಂದು ಸುದ್ದಿ ಸಂಸ್ಥೆ ಇಂಡಿಯಾ ಟುಡೇ ತಿಳಿಸಿವೆ.
ಬೋರ್ಡಿಂಗ್ ಪಾಸ್‌ಗಳನ್ನು ಮುದ್ರಿಸುವಲ್ಲಿ ಮತ್ತು ಸಾಮಾನು ಸರಂಜಾಮು ನಿರ್ವಹಣೆಯಲ್ಲಿನ ಅಡಚಣೆಯಿಂದಾಗಿ ಅಂತರರಾಷ್ಟ್ರೀಯ ನಿರ್ಗಮನದ ಮೇಲೆ ಮಾತ್ರ ಪರಿಣಾಮ ಬೀರಿತು. ತಾಂತ್ರಿಕ ಸಮಸ್ಯೆಯಿಂದಾಗಿ ದುಬೈ, ಪ್ಯಾರಿಸ್, ಬ್ಯಾಂಕಾಕ್ ಮತ್ತು ಕೊಲಂಬೊಗೆ ತೆರಳಬೇಕಿದ್ದ ಒಂಬತ್ತು ವಿಮಾನಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ ಎಂದು ಹೇಳಲಾಗಿದೆ.
ಸರ್ವರ್ ಸಮಸ್ಯೆ ನಿರ್ವಹಣೆ ಬಳಿಕ ವಿಮಾನ ಸಂಚಾರ ಸುಗಮವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Amazon: ಅಕ್ಟೋಬರ್ 8ರಿಂದ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್