Advertisement

1500 ಮೀ. ಕೆಳಗೆ ಭಾರತೀಯರ ವಾಸ!

02:08 AM Jan 22, 2019 | Team Udayavani |

ಕೋಲ್ಕತಾ: ಭಾರತೀಯರು 6.5 ಕೋಟಿ ವರ್ಷಗಳ ಹಿಂದೆ ಭೂ ಮಟ್ಟಕ್ಕಿಂತ 1500 ಮೀ. ಕೆಳಗೆ ವಾಸಿಸುತ್ತಿದ್ದರು ಎಂದು ಐಐಟಿ ಖರಗ್‌ಪುರ ಸಂಶೋಧಕರು ಕಂಡುಕೊಂಡಿದ್ದಾರೆ. ವಿಜ್ಞಾನಿಗಳು ಇಷ್ಟು ಆಳದಲ್ಲಿ ಸೂಕ್ಷ್ಮಾಣು ಜೀವಿಗಳನ್ನು ಕಂಡುಕೊಂಡಿದ್ದಾರೆ. ದಕ್ಷಿಣ ಮತ್ತು ಪಶ್ಚಿಮ ಭಾರತದ ಡೆಕ್ಕನ್‌ ಟ್ರ್ಯಾಪ್‌ಗ್ಳಲ್ಲಿ ಈ ಸೂಕ್ಷ್ಮಾಣು ಜೀವಿಗಳು ಕಂಡುಬಂದಿವೆ. ಸುಮಾರು 6.5 ಕೋಟಿ ವರ್ಷಗಳ ಹಿಂದೆ ಜ್ವಾಲಾಮುಖಿಯಿಂದಾಗಿ ಈ ಡೆಕ್ಕನ್‌ ಟ್ರ್ಯಾಪ್‌ಗ್ಳು ನಿರ್ಮಾಣಗೊಂಡಿದ್ದು, ಇವು ನಮ್ಮ ಭೂಮಿಯ ಮೇಲೆ ಜೀವಿಗಳ ನಾಶಕ್ಕೆ ಕಾರಣವಾಗಿತ್ತು ಎಂದು ನಂಬಲಾಗಿದೆ. 1 ಕಿ.ಮೀ ಗಿಂತ ಆಳದಲ್ಲಿಯೂ ಬ್ಯಾಕ್ಟೀರಿಯಾಗಳು ಕಂಡುಬಂದಿರುವುದು ವಿಜ್ಞಾನಿಗಳಿಗೆ ಅಚ್ಚರಿ ಉಂಟು ಮಾಡಿದೆ. ಇಲ್ಲಿ ಅತ್ಯಂತ ದುರ್ಗಮ ಕಲ್ಲುಗಳಿದ್ದು, ಬ್ಯಾಕ್ಟೀರಿಯಾಗಳು ಜೀವಿಸಲು ಸಾಕಷ್ಟು ಪೋಷಕಾಂಶಗಳು ಇರುವುದಿಲ್ಲ. ಹೀಗಾಗಿ ವಿಜ್ಞಾನಿಗಳು ಇನ್ನೂ ಹೆಚ್ಚಿನ ಅಧ್ಯಯನ ನಡೆಸಿ, ಈ ಭಾಗದಲ್ಲಿ ಹಿಂದೊಂದು ಕಾಲದಲ್ಲ ಜೀವಿಗಳಿದ್ದವು ಎಂದು ಕಂಡುಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next