Advertisement

Mangaluru ಪ್ರತಿ ಟನ್ ಗೆ 150 ರೂ. ಬಾಡಿಗೆ ಏರಿಕೆ ಭರವಸೆ: ಮುಷ್ಕರ ಹಿಂತೆಗೆದ ಲಾರಿ ಯೂನಿಯನ್

04:20 PM Sep 29, 2023 | Team Udayavani |

ಮಂಗಳೂರು : ಕಲ್ಲಿದ್ದಲು ಬಾಡಿಗೆ ದರ ಹೆಚ್ಚಿಸುವಂತೆ ಬಹುಕಾಲದ ಬೇಡಿಕೆಯನ್ನು ಮುಂದಿಟ್ಟು ಲಾರಿ ಯೂನಿಯನ್ ನಡೆಸುತ್ತಿದ್ದ ಮುಷ್ಕರವನ್ನು ಹಿಂತೆಗೆದುಕೊಳ್ಳಲಾಗಿದೆ.

Advertisement

ಈ ಬಗ್ಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೆ.29 ರಂದು ಡಿಸಿ ಮುಲ್ಲೈ ಮುಗಿಲನ್ ಎಂ.ಪಿ. ಅವರ ನೇತೃತ್ವದಲ್ಲಿ ನಡೆದ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಲಾರಿ ಯೂನಿಯನ್ ಹಾಗೂ ಟ್ರಾನ್ಸ್‌ಪೋರ್ಟರ್ಸ್ ನಡುವೆ ನಡೆದ ಸಂಧಾನ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ದಕ್ಷಿಣ ಕನ್ನಡ ಟ್ರಕ್ ಓನರ್ಸ್ ಅಸೋಸಿಯೇಷನ್ (ರಿ.) ಇದರ ಅಧ್ಯಕ್ಷ ಸುಶಾಂತ್ ಶೆಟ್ಟಿ ಈ ಬಗ್ಗೆ ಮಾತನಾಡಿ ‘ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ದರ ಏರಿಕೆ ಬಗ್ಗೆ ಬೇಡಿಕೆಗಳಿದ್ದರೂ ಲಾರಿ ಮಾಲಕರಿಗೆ ನ್ಯಾಯ ದೊರಕಿರಲಿಲ್ಲ. ಮುಷ್ಕರ ಘೋಷಿಸುವ ಸಂದರ್ಭ ತಲಾ 100 ರೂ. ಹೆಚ್ಚಿಸುವ ಭರವಸೆಯನ್ನು ಟ್ರಾನ್ಸ್‌ಪೋರ್ಟರ್ಸ್ ನೀಡಿದ್ದರು’.

‘ಇಂದು ಬೆಳಿಗ್ಗೆ ನಡೆದ ಸಭೆಯಲ್ಲಿ ಡಿಸಿ ಅವರು ಸಂಧಾನ ಸಭೆ ನಡೆಸಿ 150 ರೂ. ಏರಿಕೆಗೆ ಸೂಚಿಸಿದ್ದಾರೆ. ಬಾಡಿಗೆ ದರವನ್ನು ಮುಂದಿನ 3 ದಿನಗಳಲ್ಲಿ ಏರಿಸುವ ಭರವಸೆ ಸಿಕ್ಕಿದೆ. ಹೀಗಾಗಿ ಮುಷ್ಕರ ಕೈಬಿಟ್ಟಿದ್ದೇವೆ’. ಎಂದರು.

‘ಕೊಪ್ಪಳ ಭಾಗಕ್ಕೆ ಪ್ರತಿ ಟನ್ ಗೆ ಕನಿಷ್ಠ ಸಾಗಾಟ ಬಾಡಿಗೆಯು 1050 ರೂ. ಹಾಗೂ ಬಳ್ಳಾರಿ ಕಡೆಗೆ 1100 ರೂ. ಆಗಿದ್ದು, ಈ ಬಾಡಿಗೆಗೆ ಇದೀಗ ತಲಾ 150 ರೂ. ಏರಿಸಲಾಗುತ್ತದೆ. ಇದರಿಂದ ಲಾರಿ ಮಾಲಕರಿಗೆ ನ್ಯಾಯ ದೊರಕಿಸಿದಂತಾಗುತ್ತದೆ’ ಎಂದರು.

Advertisement

ಇದನ್ನೂ ಓದಿ:ICC World Cup 2023; ಎಲ್ಲಾ ಹತ್ತು ತಂಡಗಳ ಆಟಗಾರರ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ 

ಸಭೆಯಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ, ಪೊಲೀಸ್ ಆಯುಕ್ತರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಡಿಸಿಪಿ ಮಂಗಳೂರು ಹಾಗೂ ಪಣಂಬೂರು ಪೊಲೀಸ್ ಉಪ ಆಯುಕ್ತರು ಹಾಗೂ ಪಣಂಬೂರು ಹಾಗೂ ಸುರತ್ಕಲ್ ಎಸ್ ಐ ಭಾಗವಹಿಸಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next