Advertisement

ತ.ನಾ.ಕರಾವಳಿಯಲ್ಲಿ 150 ಕೆಜಿ ಗಾಂಜಾ ವಶ; ಓರ್ವ ಅರೆಸ್ಟ್‌

03:24 PM Dec 18, 2017 | Team Udayavani |

ರಾಮೇಶ್ವರಂ, ತಮಿಳು ನಾಡು : ರಾಮನಾಥಪುರಂ ಗೆ ಸಮೀಪದ ನೋಚಿ ಊರಾನಿ ಕರಾವಳಿ ಪ್ರದೇಶದಲ್ಲಿ ಲಂಕೆಗೆ ಕಳ್ಳಸಾಗಣೆಯಾಗಲಿದ್ದ ಸುಮಾರು 150 ಕೆಜಿ ಗಾಂಜಾವನ್ನು ಕಸ್ಟಮ್ಸ್‌ ಅಧಿಕಾರಿಗಳು ವಶಪಡಿಸಿಕೊಂಡು ಒಬ್ಬ ವ್ಯಕ್ತಿಯನ್ನು ಬಂಧಿಸಿದರು.

Advertisement

ಖಚಿತ ಸುಳಿವು ಪಡೆದ ಕಸ್ಟಮ್ಸ್‌ ಅಧಿಕಾರಿಗಳು ಒಡನೆಯೇ ಕಾರ್ಯಾಚರಿಸಿ ಮಾರುಕಟ್ಟೆಯಲ್ಲಿ ಸುಮಾರು 10 ಲಕ್ಷ ರೂ. ಬೆಲೆ ಬಾಳುವ 150 ಕೆಜಿ ಗಾಂಜಾವನ್ನು ವಶಪಡಿಸಿಕೊಂಡರು. 

ಗಾಂಜಾ ಕಳ್ಳಸಾಗಣೆಯಲ್ಲಿ ಶಾಮೀಲಾಗಿರುವ ಇತರ ಮೂವರು ಶಂಕಿತರು ತಲೆ ಮರೆಸಿಕೊಂಡಿದ್ದು ಅವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next