Advertisement

ಜಿಲ್ಲೆಯಲ್ಲಿ 15ಪಿಂಕ್‌ ಮತಗಟ್ಟೆ

04:05 PM May 03, 2018 | Team Udayavani |

ರಾಮನಗರ: ಮೇ 12ರಂದು ನಡೆಯಲಿರುವ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಮತದಾರರು ಮತದಾನಕ್ಕೆ ಮುಂದಾಗಬೇಕು ಎಂದು ಜಿಲ್ಲಾ ಸ್ವೀಪ್‌ ಸಮಿತಿ ಮತ್ತು ಆಯೋಗ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಮಹಿಳಾ ಮತದಾರರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ಪ್ರೇರೇಪಿಸುವ ಉದ್ದೇಶದಿಂದ ಜಿಲ್ಲೆಯ 15 ಕಡೆ ಪಿಂಕ್‌ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ.

Advertisement

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಇಂತಹ ವಿಶೇಷ ಮತಗಟ್ಟೆಗಳನ್ನು ಪರಿಚಯಿಸುತ್ತಿರುವುದು ಇದೇ ಮೊದಲು.
ಸಂಪೂರ್ಣ ಮಹಿಳಾ ಸಿಬ್ಬಂದಿ ಈ ಮತಗಟ್ಟೆಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಪಿಂಕ್‌ ಮತಗಟ್ಟೆಗಳನ್ನು “ಸಖೀ” ಅಂತಲೂ ಗುರುತಿಸಲಾಗುತ್ತಿದೆ. ರಾಜ್ಯಾದ್ಯಂತ 450 ಪಿಂಕ್‌ ಮತಗಟ್ಟೆಗಳನ್ನು ಆಯೋಗ ಸ್ಥಾಪಿಸುತ್ತಿದ್ದು, ಜಿಲ್ಲೆಯ ನಾಲ್ಕೂ ವಿಧಾನಸಭಾ ಕ್ಷೇತ್ರಗಳಲ್ಲಿ 15 ಮತಗಟ್ಟೆಗಳನ್ನು ಸ್ಥಾಪಿಸುತ್ತಿದೆ. 

ವಿಶೇಷತೆ ಏನು?: “ಸಖೀ’ ಅಥವಾ ಪಿಂಕ್‌ ಮತಗಟ್ಟೆಯಲ್ಲಿ ಮತಗಟ್ಟೆ ಅಧಿಕಾರಿ ಸೇರಿದಂತೆ ಪೊಲೀಸ್‌ ಸಿಬ್ಬಂದಿ ಸಹ
ಮಹಿಳೆಯರೇ ಆಗಿರುತ್ತಾರೆ. ಈ ಮತಗಟ್ಟೆಗಳು ಅನ್ಯ ಮತಗಟ್ಟೆಗಳಿಗಿಂತ ಕೊಂಚ ವಿಶೇಷತೆಗಳನ್ನು ಅಳವಡಸಿಕೊಳ್ಳಲಿದೆ. ಮತಗಟ್ಟೆಯ ಮುಂಭಾಗ, ಬಾಗಿಲುಗಳಿಗೆ ಪಿಂಕ್‌ (ಗುಲಾಬಿ) ಬಣ್ಣ ಬಳಿಯಲಾಗಿರುತ್ತದೆ. ಮತಗಟ್ಟೆ ಒಳಗೆ ಮತಗಟ್ಟೆ ಅಧಿಕಾರಿಗಳು, ಸಿಬ್ಬಂದಿ ಬಳಸುವ ಟೇಬಲ್‌ಗ‌ಳ ಮೇಲೆ ಗುಲಾಬಿ ಬಣ್ಣದ ಬಟ್ಟೆಯನ್ನು ಹಾಸಲಾಗಿರುತ್ತದೆ. ಈ ಮತಗಟ್ಟೆಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು, ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿ ಮಹಿಳೆಯರೇ ಆಗಿದ್ದು, ಅವರೆಲ್ಲ ಪಿಂಕ್‌ ಬಣ್ಣದ ವಸ್ತ್ರಗಳನ್ನು ಧರಿಸಲಿದ್ದಾರೆ.

ಇದು ಈ ಮತಗಟ್ಟೆಯ ವಿಶೇಷತೆ. ಇನ್ನುಳಿದಂತೆ ಎಲ್ಲಾ ಮತಗಟ್ಟೆಗಳಲ್ಲಿ ಇರುವಂತೆ ಇಲ್ಲಿಯೂ ಕುಡಿಯುವ ನೀರಿನ
ವ್ಯವಸ್ಥೆ, ವಿಕಲಚೇತರಿಗೆ ರ್‍ಯಾಂಪ್‌ ವ್ಯವಸ್ಥೆ, ವೀಲ್‌ ಚೇರ್‌ ವ್ಯವಸ್ಥೆ ಮತ್ತು ಸಹಾಯಕರ ವ್ಯವಸ್ಥೆ, ಪ್ರಥಮ ಚಿಕಿತ್ಸಾ ವ್ಯವಸ್ಥೆ ಇಲ್ಲಿರಲಿದೆ. ಈ ಮತಗಟ್ಟೆಗೆ ಸಂಬಂಧಿಸಿದ ಮತದಾರರು ಇಲ್ಲಿಯೇ ಮತಚಲಾಯಿಸಬೇಕು. 

ಗುಲಾಬಿ (ಪಿಂಕ್‌) ಮತಗಟ್ಟೆ  ಎಲ್ಲೆಲ್ಲಿ?
ಮಾಗಡಿ: ಪುರಸಭೆ ಕಚೇರಿ ಕೊಠಡಿ ಸಂಖ್ಯೆ 1 ಮತ್ತು 2 ರಾಮನಗರ: ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕೊಠಡಿ ಸಂಖ್ಯೆ 5, ಬಾಲಕರ ಸರ್ಕಾರಿ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ, ಬಿಇಒ ಕಚೇರಿ ಹತ್ತಿರ-ಕೊಠಡಿ ಸಂಖ್ಯೆ 1, ಯಾರಬ್‌ ನಗರದ ಮರಿಯಮ್‌ ಇಂಗ್ಲಿಷ್‌ ಮಾಧ್ಯಮ ಶಾಲೆಯ ಕೊಠಡಿ ಸಂಖ್ಯೆ 1, ಮಲ್ಲೇಶ್ವರ ಬಡಾವಣೆಯಲ್ಲಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕೊಠಡಿ ಸಂಖ್ಯೆ 1, ಅರ್ಚಕರಹಳ್ಳಿ ಸರ್ಕಾರಿ ರಿಯ ಪ್ರಾಥುಮಿಕ ಶಾಲೆ. 

Advertisement

ಕನಕಪುರ: ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಗೋಪಸಂದ್ರ, ಸರ್ಕಾರಿ ಉಪಕರಣ ಮತ್ತು ತರಬೇತಿ ಕೇಂದ್ರದ ಕೊಠಡಿ ಸಂಖ್ಯೆ 1 ಮತ್ತು 2, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹೊಸದೊಡ್ಡಿ.

ಚನ್ನಪಟ್ಟಣ: ಸಂತ ಜೋಸೆಫ್ ಹಿರಿಯ ಪ್ರಾಥುಕ ಶಾಲೆಯ ಕೊಠಡಿ ಸಂಖ್ಯೆ 1, ಹಳೆ ನಗರಸಭೆ ಕಚೇರಿ, ಬಿ.ಎಂ.
ರಸ್ತೆಯಲ್ಲಿನ ಸರ್ಕಾರಿ ಉರ್ದು ಹಿರಿಯ ಪ್ರಾಥುಕ ಶಾಲೆಯ ಎಡಬದಿಯ ಕೊಠಡಿ ಸಂಖ್ಯೆ 1 ಹಾಗೂ ಬಲಬದಿಯಲ್ಲಿನ ಕೊಠಡಿ ಸಂಖ್ಯೆ 1ರಲ್ಲಿ ಪಿಂಕ್‌ ಮತಗಟ್ಟೆ ಸ್ಥಾಪಿಸಲಾಗುತ್ತಿದೆ.

ಚುನಾವಣಾ ಅಯೋಗದ ಸೂಚನೆಯ ಪ್ರಕಾರ ಜಿಲ್ಲೆಯಲ್ಲಿ 15 ಮತಗಟ್ಟೆ ಸ್ಥಾಪಿಸಲಾಗುತ್ತಿದೆ. ಹಾಲಿ ಇರುವ ಮತಗಟ್ಟೆಗಳ ಪೈಕಿ 15 ಗುರುತಿಸಿ ಪಿಂಕ್‌ ಮತಗಟ್ಟೆಗಳನ್ನಾಗಿ ಪರಿವರ್ತಿಸಲಾಗುವುದು. ಪಿಂಕ್‌ ಮತಗಟ್ಟೆ ವಿಶೇಷವಾಗಿ ಮಹಿಳಾ ಮತದಾರರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯುವ ಉದ್ದೇಶದಿಂದ ಎಲ್ಲಾ ಮಹಿಳಾ ಸಿಬ್ಬಂದಿಯನ್ನೇ ಒಳಗೊಂಡಿರುತ್ತಾರೆ.
ಡಾ.ಪ್ರಶಾಂತ್‌, ಅಪರ ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next