ಬೆಂಗಳೂರು: ಕೋವಿಡ್ 19 ವೈರಸ್ ಸೋಂಕಿತನಾಗಿದ್ದ ನಗರದ ಹೋಟೆಲೊಂದರ ಸಹಾಯಕ ಸಿಬ್ಬಂದಿಯಿಂದ (ಪಿ -653) ಭಾನುವಾರ ಮತ್ತೆ 15 ಮಂದಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ. ಇದರೊಂದಿಗೆ ಬೆಂಗಳೂರಿ ನ ಒಟ್ಟಾರೆ ಸೋಂಕು ಪ್ರಕರಣಗಳ ಸಂಖ್ಯೆ 231ಕ್ಕೆ ಏರಿಕೆಯಾಗಿದೆ.
ಶಿವಾಜಿನಗರದ ಹೋಟೆಲ್‌ನಲ್ಲಿ ಹೌಸ್ ಕೀಪಿಂಗ್ ಮಾಡುತ್ತಿದ್ದ ಅಸ್ಸಾಂ ಮೂಲದ 34 ವರ್ಷದ ಪುರುಷನಿಗೆ ಮೇ 5ರಂದು ಸೋಂಕು ದೃಢಪಟ್ಟಿತ್ತು. ಹೀಗಾಗಿ, ಆತನ ಪ್ರಾಥಮಿಕ ಸಂಪರ್ಕದಲ್ಲಿದ್ದ, ವಾಸವಿದ್ದ ವಸತಿ ಸಮುತ್ಛಯ ದಲ್ಲಿ 73 ಮಂದಿಯನ್ನು ಕರೆತಂದು ಸರ್ಕಾರದ ಸಾಮೂಹಿಕ ಕ್ವಾರಂಟೈನ್‌ನಲ್ಲಿ ಇಡಲಾಗಿತ್ತು.
ಆರೋಗ್ಯ ಇಲಾಖೆ ಮಾರ್ಗ ಸೂಚಿ ಯಂತೆ ಕ್ವಾರಂಟೈನ್ ನಲ್ಲಿರುವವರ ಸೋಂಕು ಪರೀಕ್ಷೆ ನಡೆಸಿ ದಾಗ ಭಾನವಾರ 15 ಮಂದಿ ಸೇರಿ ಒಟ್ಟು 45 ಮಂದಿಗೆ ಸೋಂಕು ತಗುಲಿದೆ. ಶಿವಾಜಿ ನಗರದಲ್ಲಿ ಈವರೆಗೂ 46 ಸೋಂಕು ಪ್ರಕರಣ ಪತ್ತೆಯಾಗಿವೆ. ಎಲ್ಲಾ ಸೋಂಕಿ ತರನ್ನು ಕ್ವಾರಂಟೈನ್‌ನಿಂದ ನಗರದ ಕೋವಿಡ್ 19 ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಬಿಬಿಎಂಪಿ ವೈದ್ಯಾಧಿಕಾರಿ ಗಳು ಮಾಹಿತಿ ನೀಡಿದರು.
7 ಮಂದಿ ಗುಣಮುಖ: ನಗರದ ಒಟ್ಟಾರೆ ಸೋಂಕಿತರ ಪೈಕಿ ಭಾನುವಾರ ಒಬ್ಬ ಬಾಲಕ, ಒಬ್ಬ ಬಾಲಕಿ ಸೇರಿದಂತೆ 7 ಮಂದಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿ ದ್ದಾರೆ. ಬಾಕಿ 101 ಮಂದಿ ನಗರದ ವಿವಿಧ ಕೋವಿಡ್ 19 ಚಿಕಿತ್ಸಾ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪಾದರಾಯನಪುರ ಪರೀಕ್ಷೆ ರಜೆ: ಹಾಟ್‌ಸ್ಪಾಟ್ ಆದ ಪಾದರಾಯನಪುರ ವಾರ್ಡ್‌ನ ಎಲ್ಲರಿಗೂ ಸೋಂಕು ಪರೀ ಕ್ಷೆಗೆ ಬಿಬಿಎಂಪಿ ನಿರ್ಧರಿಸಿತ್ತು. ಆದರೆ, ಭಾನುವಾರ ಹಿನ್ನೆಲೆ ಸೋಂಕು ಪರೀಕ್ಷೆ ಗಂಟಲು ದ್ರವ ಸಂಗ್ರಹ ಶಿಬಿರ ನಡೆದಿಲ್ಲ. ಶನಿವಾರ 68 ಮಂದಿ ಗಂಟಲು ದ್ರವ ಸಂಗ್ರಹಿಸಲಾಗಿತ್ತು. ಇನ್ನು ಸೋಮವಾರ ದಿಂದ ಎಂದಿನಂತೆ ಜೆಜೆಆರ್ ನಗರದ ಪೊಲೀಸ್ ನಿಲ್ದಾಣ ಬಳಿ ಹಾಗೂ ಜೆಜೆಆರ್ ನಗರ ಆಸ್ಪತ್ರೆ ಬಳಿ ಶಿಬಿರ ನಡೆಯಲಿದೆ ಎಂದು ಬಿಬಿಎಂಪಿ ಆರೋಗ್ಯಾಧಿಕಾರಿಗಳು ತಿಳಿಸಿದರು.
ಇಂದು ಪರೀಕ್ಷಾ ವರದಿ: ವಿದೇಶದಲ್ಲಿ ಸಿಲುಕಿರುವ ಕನ್ನಡಿಗರು ವಂದೇ ಮಾತರಂ ಮಿಷನ್‌ನಡಿ ಅಮೇರಿಕಾ ಹಾಗೂ ಸಿಂಗಾಪುರದಿಂದ ಬೆಂಗಳೂರಿಗೆ ಬಂದಿದ್ದ 200ಕ್ಕೂ ಹೆಚ್ಚು ಮಂದಿಯ ಮೊದಲ ಸೋಂಕು ಪರೀಕ್ಷಾ ವರದಿ ಸೋಮವಾರ ಬರಲಿದೆ.
ಸದ್ಯ ಎಲ್ಲರೂ ನಗರದ ಹೋಟೆಲ್ ಕ್ವಾರಂಟೈನ್‌ನಲ್ಲಿದ್ದಾರೆ. ಈ ಹಿಂದೆ ಲಂಡನ್‌ನಿಂದ ಬಂದಿದ್ದ 323 ಮಂದಿ ಪೈಕಿ ಒಬ್ಬರಿಗೆ ಸೋಂಕು ದೃಢಪಟ್ಟಿತ್ತು. ಇನ್ನು ವಂದೇ ಮಾತರಂ ಮಿಷನ್‌ನಡಿ ಕನ್ನಡಿಗರನ್ನು ಹೊತ್ತ ಮುಂದಿನ ವಿಮಾನ ಕೌಲಾಲಂಪುರದಿಂದ ಮೇ 19 (ಮಂಗಳವಾರ) ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಲಿದೆ.