Advertisement
ನಾವುಂದ ನಿವಾಸಿಗಳಾದ ನಾಗೇಶ ಖಾರ್ವಿ(22), ಮಧುಕರ ಖಾರ್ವಿ (25) ಆರೋಪಿಗಳು.ಬೈಕ್‌ನಲ್ಲಿ 15 ಕಿ.ಮೀ. ಬೆನ್ನಟ್ಟಿ ಬಂಧನ ಆರೋಪಿಗಳು ಸೋಮವಾರ ರಾತ್ರಿ ಪಲ್ಸರ್ ಬೈಕ್‌ನಲ್ಲಿ ಬಂದು ಸಾಲಿಗ್ರಾಮ ಸಮೀಪ ಕಾರ್ಕಡ ಹಿ.ಪ್ರಾ. ಶಾಲೆ ಹತ್ತಿರ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೋರ್ವಳ ಕುತ್ತಿಗೆಯಿಂದ ಸರ ಅಪಹರಿಸಲು ಪ್ರಯತ್ನಿಸಿದ್ದು, ಈ ಸಂದರ್ಭ ಆಕೆ ಜೋರಾಗಿ ಕೂಗಿಕೊಂಡಿದ್ದರು. ಆಗ ಸಮೀಪ ಕರ್ತವ್ಯ ನಿರತರಾಗಿದ್ದ ಕೋಟ ಠಾಣೆಯ ಹೆಡ್ ಕಾನ್‌ಸ್ಟೆಬಲ್ ಪ್ರದೀಪ್ ನಾಯಕ್ ಬೈಕ್‌ನಲ್ಲಿ ಅವರನ್ನು ಬೆನ್ನಟ್ಟಿದ್ದು, ಆರೋಪಿಧಿಗಳು ಬೈಕಿನಲ್ಲಿ ಬ್ರಹ್ಮಾವರ ಕಡೆಗೆ ವೇಗವಾಗಿ ಸಾಗಿದರು. ಅನಂತರ ಬ್ರಹ್ಮಾವರ ಆಕಾಶವಾಣಿ ಸರ್ಕಲ್‌ನಿಂದ ಬಾಕೂìರು ರಸ್ತೆಯ ಮೂಲಕ ಪರಾರಿಯಾಗಲು ಯತ್ನಿಸಿದಾಗ ಪ್ರದೀಪ್ ನಾಯಕ್ ಕೂಡ ಅಷ್ಟೇ ವೇಗದಲ್ಲಿ ಅವರನ್ನು ಬೆನ್ನಟ್ಟಿ ಘಟನೆ ಈ ಕುರಿತು ಸ್ಥಳೀಯರಿಗೆ ಹಾಗೂ ಉನ್ನತ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ಮಧುಕರ ಪದವಿ ಶಿಕ್ಷಣವನ್ನು ಅರ್ಧದಲ್ಲೇ ಮೊಟಕು ಗೊಳಿಸಿದ್ದು, ನಾಗೇಶ್ ಎಸೆಸೆಲ್ಸಿ ಮುಗಿಸಿದ್ದ. ಅವರಿಬ್ಬರು ಸಹೋದರ ಸಂಬಂಧಿಗಳಾಗಿದ್ದು ದೋಣಿಯಲ್ಲಿ ಕೆಲಸ ಮಾಡುತ್ತಿದ್ದರು. ಸಾಲವನ್ನು ತೀರಿಸಲು ಕಳ್ಳತನ ನಡೆಸುತ್ತಿದ್ದರು. ಕದ್ದ ಚಿನ್ನವನ್ನು ಮಂಗಳೂರಿನ ಖಾಸಗಿ ಜುವೆಲರಿಯೊಂದರಲ್ಲಿ ಮಾರಾಟ ಮಾಡುತ್ತಿದ್ದರು ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ.
Related Articles
Advertisement
ಸಿಬಂದಿಯ ಸಾಹಸಕ್ಕೆ ಪ್ರಶಂಸೆಸುಮಾರು 15 ಕಿ.ಮೀ. ವರೆಗೆ ಬೆನ್ನಟ್ಟಿ, ಆರೋಪಿಗಳನ್ನು ಬಂಧಿಸಿದ ಹೆಡ್ ಕಾನ್‌ಸ್ಟೆಬಲ್ ಪ್ರದೀಪ್ ನಾಯಕ್ ಅವರ ಸಾಹಸಕ್ಕೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದ್ದು, ಸಾಹಸ ಮೆರೆದ ಅವರಿಗೆ ಸೂಕ್ತ ಗೌರವ ನೀಡಬೇಕು ಎನ್ನುವ ಆಗ್ರಹ ಕೇಳಿಬಂದಿದೆ.