Advertisement

AIADMK ಗೆ ಶಾಕ್! ಅಣ್ಣಾಮಲೈ ಸಮ್ಮುಖದಲ್ಲಿ ಬಿಜೆಪಿ ಸೇರಿದ 15 ಮಾಜಿ ನಾಯಕರು

01:57 PM Feb 07, 2024 | Team Udayavani |

ನವದೆಹಲಿ: ಲೋಕಸಭೆ ಚುನಾವಣೆಗೂ ಮುನ್ನ ತಮಿಳುನಾಡಿನಲ್ಲಿ ಬಿಜೆಪಿಯ ಅಬ್ಬರ ಜೋರಾಗಿದ್ದು ಅದರ ಪರಿಣಾಮವಾಗಿ 15 ಮಾಜಿ ಶಾಸಕರು ಮತ್ತು ಓರ್ವ ಮಾಜಿ ಸಂಸದ ಇಂದು ಬಿಜೆಪಿ ಸೇರಿದರು.

Advertisement

ಇಂದು ದೆಹಲಿಯಲ್ಲಿ ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ ಅಣ್ಣಾಮಲೈ ಸಮ್ಮುಖದಲ್ಲಿ ಎಲ್ಲಾ ನಾಯಕರು ಬಿಜೆಪಿಗೆ ಸೇರ್ಪಡೆಯಾದರು. ಮಾಜಿ ಶಾಸಕರನ್ನು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರು ಪಕ್ಷದ ಶಾಲು ಹಾಕಿ ನಾಯಕರನ್ನು ಸ್ವಾಗತಿಸಿದರು. ಇದರೊಂದಿಗೆ ಲೋಕಸಭೆ ಚುನಾವಣೆಯಲ್ಲಿ ಈ ಬಾರಿ ಬಿಜೆಪಿ 370 ಮತ್ತು ಎನ್‌ಡಿಎ 400 ಸ್ಥಾನಗಳನ್ನು ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಾಯಕರನ್ನು ಸ್ವಾಗತಿಸಿದ ಅಣ್ಣಾಮಲೈ ಅವರು ಬಿಜೆಪಿಗೆ ಸೇರಿದ ಮಾಜಿ ನಾಯಕರು ಅನುಭವದ ಸಂಪತ್ತನ್ನೇ ಹೊತ್ತು ತಂದಿದ್ದಾರೆ ಜೊತೆಗೆ ಮೂರನೇ ಬಾರಿಗೆ ಮತ್ತೆ ಅಧಿಕಾರಕ್ಕೆ ಬರುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕೈಗಳನ್ನು ಬಲಪಡಿಸಲು ಬಯಸುತ್ತಾರೆ ಎಂದು ಹೇಳಿದರು

ಪಕ್ಷ ಸೇರಿದವರ ವಿವರ:
ಬಿಜೆಪಿ ಸೇರ್ಪಡೆಯಾದವರ ಪಟ್ಟಿ ಬಹಿರಂಗವಾಗಿದೆ.ಎಡಿಎಂಕೆ ಮಾಜಿ ಶಾಸಕ ಕೆ.ವಡಿವೇಲ್, ಚಾಲೆಂಜರ್ ದುರಾಸಾಮಿ, ಪಿ.ಎಸ್.ಕಂದಸಾಮಿ, ಆರ್.ಚಿನ್ನಸಾಮಿ, ಮಾಜಿ ಸಚಿವ ಗೋಮತಿ ಶ್ರೀವಾಸನ್, ವಿ.ಆರ್.ಜಯರಾಮನ್, ಎಸ್.ಎಂ.ವಾಸನ್, ಪಿ.ಎಸ್.ಅರುಳ್, ಎಸ್.ಗುರುನಾಥನ್, ಆರ್.ರಾಜೇಂದ್ರನ್, ಸೆಲ್ವಿ. ಮುರುಗೇಶನ್., ಎ ರೋಕಿಣಿ, ಕೆ ತಮಿಳಗನ್, ಎಸ್‌ಇ ವೆಂಕಟಾಚಲಂ, ಮುತ್ತು ಕೃಷ್ಣನ್ ಮತ್ತು ಡಿಎಂಕೆ ಮಾಜಿ ಸಂಸದ ವಿ ಕುಲಂದೈವೇಲು.

ದಕ್ಷಿಣ ಭಾರತದಲ್ಲಿ ಬಲಿಷ್ಠಗೊಳ್ಳುತ್ತಿದೆ ಬಿಜೆಪಿ:
ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದೆ, ಇಂತಹ ಪರಿಸ್ಥಿತಿಯಲ್ಲಿ ಮಾಜಿ ಶಾಸಕರು ಮತ್ತು ಸಂಸದರು ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಸೇರಿರುವುದು ದಕ್ಷಿಣದಲ್ಲಿ ಪಕ್ಷದ ಹೆಚ್ಚುತ್ತಿರುವ ವಿಶ್ವಾಸಾರ್ಹತೆಯನ್ನು ತೋರಿಸುತ್ತದೆ. ಈ ಸಂದರ್ಭದಲ್ಲಿ ಕೇಂದ್ರ ಸಚಿವ ರಾಜೀವ್ ಚಂದಶೇಖರ್ ಸಂತಸ ವ್ಯಕ್ತಪಡಿಸಿ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 370 ಸ್ಥಾನ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು. ಪಕ್ಷದ ಎಲ್ಲ ಮುಖಂಡರಿಗೆ ಭವ್ಯ ಸ್ವಾಗತ ಕೋರಿದರು.

Advertisement

ಇದನ್ನೂ ಓದಿ: Protest: BJP ರಾಜ್ಯಾಧ್ಯಕ್ಷ ವಿಜಯೇಂದ್ರ ಮನೆಗೆ ಮುತ್ತಿಗೆ ಯತ್ನ… NSUI ಕಾರ್ಯಕರ್ತರ ಬಂಧನ

Advertisement

Udayavani is now on Telegram. Click here to join our channel and stay updated with the latest news.

Next