15 ದಿನ ದಲಿತರು ಬ್ರಾಹ್ಮಣರಾಗಿ ಪೂಜೆ ಮಾಡುತ್ತಾರೆ!
● ಕೆ.ಎನ್.ಲೋಕೇಶ್
ಇಂತಹ ವಿನೂತನ ಆಚರಣೆ ತಾಲೂಕಿನ ಹುಲಿಯೂರುದುರ್ಗ ಹೋಬಳಿ ಉಜ್ಜನಿ ಗ್ರಾಮದಲ್ಲಿ ನಡೆಯುತ್ತದೆ. ಗ್ರಾಮ ದೇವತೆ ಶ್ರೀ ಚೌಡೇಶ್ವರಿ ಅಮ್ಮನ ಹಬ್ಬ ಸುತ್ತಮುತ್ತಲ 15 ಹಳ್ಳಿಗಳಲ್ಲಿ ಪ್ರತಿ ವರ್ಷ ನಡೆಯತ್ತದೆ.
ವಿಶಿಷ್ಠ ಜಾತ್ರೆ:ಅಗ್ನಿಕೊಂಡ ಹಾಯುವ ಹೆಬ್ಟಾರೆ ಗುಡ್ಡರು ಎಂದು ಕರೆಸಿಕೊಳ್ಳುವ 6 ಮಂದಿ ಹರಿಜನರು ಜನಿವಾರ ತೊಟ್ಟು ಪೂಜೆಯಲ್ಲಿ ತೊಡಗುತ್ತಾರೆ. ಹಬ್ಬ ಮುಗಿಯವರೆಗೂ ಊರಿನಲ್ಲಿ ಸಂಬಾರಿಗೆ ಒಗ್ಗರಣೆ ಹಾಕುವಂತಿಲ್ಲ. ಕಂಟು ಮಾಡುವಂತಿಲ್ಲ. ಹಬ್ಬಕ್ಕೆ ಕಂಬ ನೆಟ್ಟ ದಿನದಿಂದ ಊರಿನಲ್ಲಿ ಯಾರೂ ಕಂಟು ಹಾಕುವಂತಿಲ್ಲ. ಮೆಣಸಿನಕಾಯಿ ಸುಡುವಂತಿಲ್ಲ. ಇದು ಊರಿನ ಕಟ್ಟುನಿಟ್ಟಿನ ಸಂಪ್ರದಾಯ. ಸುತ್ತ-ಮುತ್ತಲ ಹತ್ತಾರು ಗ್ರಾಮಗಳು ಸೇರಿ ಆಚರಿಸುವ ಈ ಚಾಡೇಶ್ವರಿ ಜಾತ್ರೆಗೆ 850 ಹೆಚ್ಚು ವರ್ಷಗಳ ಐತಿಹಾಸಿಕ ಹಿನ್ನೆಲೆ ಇದೆ.
ಕಠಿಣ ನಿಯಮ:ಜನಿವಾರ ಧರಿಸಿದವರು ಮನೆಗೆ ಹೋಗು ವಂತಿಲ್ಲ. ದೇವಸ್ಥಾನದ ಕೋಣೆಯೊಂ ದರಲ್ಲಿ ಅಡುಗೆ ಮಾಡಿ ಊಟ ಮಾಡುತ್ತಾರೆ. ಯಾವುದೇ ಕಾರಣಕ್ಕೂ ‘ಮೈಲಿಗೆ’ ಆಗುವಂತಿಲ್ಲ. ಹಬ್ಬದಲ್ಲಿ ಪೂಜೆ, ಪುನಸ್ಕಾರ ಎಲ್ಲವೂ ಇವರದ್ದೇ.
Advertisement
ಕುಣಿಗಲ್: ಹಬ್ಬ ಆಚರಣೆ ಮೂಲಕ ಐಕ್ಯತೆ ಮತ್ತು ಸಾಮರಸ್ಯಕ್ಕೆ ಈ ಊರು ರಾಜ್ಯಕ್ಕೆ ಮಾದರಿ. ಈ ಊರಿನ ಹಬ್ಬವೇ ವಿಶಿಷ್ಟ. ಅದೆಷ್ಟೋ ದೇವಸ್ಥಾನ ಗಳಲ್ಲಿ ಹರಿಜನರಿಗೆ ಪ್ರವೇಶವೇ ಇಲ್ಲದಿರುವ ಇಂದಿನ ಸಂದರ್ಭಗಳಲ್ಲೂ ಹರಿಜನರು ಜನಿವಾರ ಧರಿಸಿ ಪೂಜೆ ಮಾಡುವ ಮೂಲಕ ಹಬ್ಬದ ಕೇಂದ್ರ ಬಿಂದುವಾಗುತ್ತಾರೆ ಎಂದರೆ ನಂಬಲೇ ಬೇಕು.
Related Articles
Advertisement
ಆಚರಣೆ: ಪ್ರತಿ ವರ್ಷ 15 ದಿನ ಚೌಡೇಶ್ವರಿ ಹಬ್ಬ ನಡೆಯುತ್ತದೆ. ಹಬ್ಬಕ್ಕೆಂದೇ ಮುಂಚಿತವಾಗಿ ಕಂಭ ಹಾಕಲಾಗುತ್ತದೆ. ಕಂಭ ಹಾಕಿದ ದಿನದಿಂದಲೇ ಹೆಬ್ಟಾರೆ ಅಮ್ಮನ ಕರಗ ಹೊರುವ ಸಲುವಾಗಿ ‘ಹೆಬ್ಟಾರೆ ಗುಡ್ಡರು’ ಎಂದು ಕರೆಸಿಕೊಳ್ಳುವ ಆರು ಮಂದಿ ಹರಿಜನರು ಬಿಳಿ ಕಚ್ಚೆ ಧರಿಸಿ ಚೌಡಮ್ಮನ ಪೂಜಾರಿಯಿಂದ ಹೋಮ ಮಾಡಿದ ತೀರ್ಥ ಸ್ವೀಕರಿಸಿ ಜನಿವಾರ ಧರಿಸುತ್ತಾರೆ. ಆ ದಿನದಿಂದಲೇ ಅವರು ಬ್ರಾಹ್ಮಣರಾಗುತ್ತಾರೆ.
ಜಾತ್ರೆ ಶುರು:ಏ.22 ರಿಂದ 26 ವರೆಗೆ ನಡೆಯುವ ವಿಜೃಂಭಣೆ ಜಾತ್ರೆ ಕಳೆಗಟ್ಟುವುದು ಈ ಬ್ರಾಹ್ಮಣರಿಂದ. ಏ.23 ರಂದು ಅಗ್ನಿಕೊಂಡ ನಡೆಯಲಿದೆ.
ಕಾರಣವಿದು: ಈ ಹಿಂದೆ, ಅದೇ ಗ್ರಾಮದ ಹರಿಜನ ಯುವಕನೊಬ್ಬ ತಾನು ಬ್ರಾಹ್ಮಣ ಜಾತಿಯವನು ಎಂದು ಹೇಳಿ ಬ್ರಾಹ್ಮಣ ಕನ್ಯೆಯನ್ನು ಮದುವೆ ಯಾಗಿದ್ದನಂತೆ. ಆ ದಂಪತಿಗಳಿಗೆ ಐವರು ಗಂಡು ಮಕ್ಕಳು ಇದ್ದರೆಂದೂ, ನಂತರ ಗಂಡನ ಜಾತಿ ತಿಳಿದು ಆಕೆ ಅಗ್ನಿಪ್ರವೇಶ ಮಾಡಿದಳಂತೆ ಎಂಬ ಪ್ರತೀತಿ ಇದೆ. ಇದರಿಂದ ಆಕೆಯನ್ನು ಸಂತೈಸಲಿಕ್ಕಾಗಿ ಐವರು ಮಕ್ಕಳು,ತಂದೆ ಸೇರಿ 6ಮಂದಿ ಪ್ರತೀ ವರ್ಷ ಹಬ್ಬದ ವೇಳೆ 15 ದಿನಗಳ ಮಟ್ಟಿಗೆ ಬ್ರಾಹ್ಮಣರಾ ಗುತ್ತಾರೆ. ಪೂಜೆ ಸಲ್ಲಿಸುತ್ತಾರೆ ಎಂಬ ಪ್ರತೀತಿ ಇದೆ.
ಹರಿಕೆ ಹೊತ್ತ ಮಹಿಳೆಯರು ಬಾಯಿಬೀಗ ಚುಚ್ಚಿಸಿಕೊಂಡು ದೇವಿಗೆ ಭಕ್ತಿ ಮೆರೆಯುತ್ತಾರೆ. ಚೌಡೇಶ್ವರಿ ದೇವಿ ಕಂಭ ಹಾಕುವ ದಿನ ಬೆಳ್ಳಿ ಕಂಕಣ ತೊಡುವ ಪೂಜಾರಿ ಹಬ್ಬ ಮುಗಿಯುವವರೆಗೂ ಮನೆಯಲ್ಲಿ ಊಟ ಮಾಡುವಂತಿಲ್ಲ. ಆತನೇ ಅಡುಗೆ ತಯಾರಿಸಿಕೊಳ್ಳಬೇಕು. ಅಗ್ನಿಕೊಂಡದ ದಿನ ಉಜ್ಜನಿ ಗ್ರಾಮದಲ್ಲಿ ಜನಸಾಗರವೇ ನೆರೆಯು ತ್ತದೆ. ಏ.24 ರಂದು ಚೌಡೇಶ್ವರಿ ತೇರು, 25 ಮುತ್ತಿನ ಪಲ್ಲಕ್ಕಿ, 26 ಪುಷ್ಪಾಲಂಕಾರ ಉತ್ಸವ ನಡೆಯಲಿದೆ.
ಅಗ್ನಿಕೊಂಡ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಕೊಂಡ ಹಾಯುವ ಭಕ್ತಾದಿಗಳಿಗೆ ಷರತ್ತು ವಿಧಿಸಿದೆ. ಹೆಸರು ನೋಂದಣಿ ಮಾಡಿಸಿಕೊಳ್ಳುವುದು, ಮಕ್ಕಳು-ಮಹಿಳೆಯರು ಕೊಂಡ ಹಾಯುವುದನ್ನು ಈ ಬಾರಿ ನಿಷೇಧಿಸಿದೆ