Advertisement

ಕೌಂಟ್ ಡೌನ್ ಶುರು; ಶನಿವಾರ ವಿಶ್ವಾಸಮತ ಪ್ರಕ್ರಿಯೆ ಹೇಗೆ ನಡೆಯುತ್ತೆ?

05:53 PM May 18, 2018 | Sharanya Alva |

ಬೆಂಗಳೂರು: ರಾಜ್ಯಪಾಲರ ಆದೇಶದಂತೆ ವಿಧಾನಸಭೆಯಲ್ಲಿ ಶನಿವಾರ ಬೆಳಗ್ಗೆ 11ಗಂಟೆಯಿಂದ ಅಧಿವೇಶನ ಆರಂಭವಾಗಲಿದೆ. ರಾಷ್ಟ್ರಗೀತೆ ಹಾಡುವ ಮೂಲಕ ಕಲಾಪ ಆರಂಭವಾಗಲಿದ್ದು, ಎಲ್ಲಾ ಶಾಸಕರು ಕಡ್ಡಾಯವಾಗಿ ಹಾಜರಿರಬೇಕೆಂದು ಸೂಚಿಸಲಾಗಿದೆ ಎಂದು ವಿಧಾನಸಭೆ ಕಾರ್ಯದರ್ಶಿ ಎಸ್ ಮೂರ್ತಿ ತಿಳಿಸಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಅವರು ನಾಳೆ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಹೇಗೆ ನಡೆಯಲಿದೆ ಎಂಬ ವಿವರವನ್ನು ನೀಡಿದರು.

ವಿಶ್ವಾಸಮತ ಪ್ರಕ್ರಿಯೆ ಹೇಗೆ ನಡೆಯುತ್ತದೆ?

*ಬೆಳಗ್ಗೆ 11ಗಂಟೆಯಿಂದ ರಾಷ್ಟ್ರಗೀತೆ ಹಾಡುವ ಮೂಲಕ ಅಧಿವೇಶನ ಆರಂಭ.

* ನೂತನ ಸದಸ್ಯರಿಗೆ ಹಂಗಾಮಿ ಸ್ಪೀಕರ್ ಬೋಪಯ್ಯ ಅವರಿಂದ ಪ್ರಮಾಣವಚನ ಬೋಧನೆ.

Advertisement

*. ಪ್ರಮಾಣವಚನದ ಬಳಿಕ ಶಾಸಕರ ಶಾಸಕತ್ವ ಅಧಿಕೃತವಾಗುತ್ತದೆ.

* ನಂತರ ಆಯಾ ಪಕ್ಷದ ಶಾಸಕರಿಗೆ ವಿಪ್ ಜಾರಿಯಾಗುತ್ತದೆ. ಮಧ್ಯಾಹ್ನ ಊಟದ ನಂತರ ಕಲಾಪ ಮುಂದುವರಿಕೆ

* ವಿಪ್ ಅಧಿಕೃತವಾದ ನಂತರ ಆಯಾ ಪಕ್ಷದ ಶಾಸಕರಿಗೆ ವಿಪ್ ಅಧಿಕೃತವಾಗಲಿದೆ.

* ಹಂಗಾಮಿ ಸ್ಪೀಕರ್ ಬೋಪಯ್ಯ 4ಗಂಟೆಗೆ ಸೂಚನೆ ಮೇರೆಗೆ ವಿಶ್ವಾಸಮತ ಯಾಚನೆಗೆ ಸೂಚನೆ

* ವಿಶ್ವಾಸಮತ ಯಾಚನೆಗೂ ಮುನ್ನ ಬಾಗಿಲು ಬಂದ್

* ಸಿಎಂ ಯಡಿಯೂರಪ್ಪ ವಿಶ್ವಾಸಮತ ಯಾಚನೆಯ ಪ್ರಸ್ತಾಪ ಮಾಡುತ್ತಾರೆ

* ಬಂದ್ ಪ್ರಸ್ತಾವಕ್ಕೆ ಒಪ್ಪಿಗೆ ಇರುವವರನ್ನು ಎದ್ದು ನಿಲ್ಲಲು ಸೂಚನೆ

*ನಂತರ ಪ್ರಸ್ತಾಪಕ್ಕೆ ವಿರೋಧ ಇರುವವರಿಗೆ ಎದ್ದು ನಿಲ್ಲಲು ಸೂಚನೆ

*ನಂತರ ತಲೆ ಎಣಿಕೆ ನಡೆಯಲಿದೆ, ಅಂತಿಮವಾಗಿ ಸಂಖ್ಯಾಬಲದ ಲೆಕ್ಕಹಾಕಲಾಗುತ್ತದೆ.

*ಅದರಲ್ಲಿ ಬಹುಮತ ಬಂದಿದ್ದರೆ ಸಿಎಂ ಯಡಿಯೂರಪ್ಪ ಸಿಎಂ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ.

*ಬಹುಮತ ಬಾರದಿದ್ದಲ್ಲಿ ಯಡಿಯೂರಪ್ಪ ಸಿಎಂ ಸ್ಥಾನವನ್ನು ಕಳೆದುಕೊಳ್ಳಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next