Advertisement

15 ಕಂಪನಿಗಳ ಔಷಧ ನಿಷೇಧ

06:00 AM Dec 12, 2018 | |

ಬೆಂಗಳೂರು: ಔಷಧಿ ಪರೀಕ್ಷಾ ಪ್ರಯೋಗಾಲಯ, ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯು ಗುಣಮಟ್ಟ ಕಾಯ್ದುಕೊಳ್ಳದ 15 ಕಂಪನಿಗಳ ಔಷಧಗಳನ್ನು ನಿಷೇಧಿಸಿದ್ದು, ಅವುಗಳನ್ನುವ್ಯಾಪಾರಿಗಳು ಮಾರಾಟ ಮಾಡದಂತೆ ಹಾಗೂ ಸಾರ್ವಜನಿಕರು
ಉಪಯೋಗಿಸದಂತೆ ಸೂಚಿಸಿದೆ. 15 ಕಂಪನಿಗಳ ಔಷಧಗಳ ದಾಸ್ತಾನು ಹಾಗೂ ಮಾರಾಟವನ್ನು ನಿಷೇಧಿಸಿ ಈ ಔಷಧಗಳನ್ನು ಸಗಟು ಔಷಧ ಮಾರಾಟಗಾರರು, ವೈದ್ಯರು, ಆಸ್ಪತ್ರೆ ಮತ್ತು ನರ್ಸಿಂಗ್‌ ಹೋಂಗಳನ್ನು ಒಳಗೊಂಡಂತೆ ಯಾವುದೇ ಔಷಧ ವ್ಯಾಪಾರಿಗಳು ಮಾರಾಟ ಹಾಗೂ ದಾಸ್ತಾನು ಹೊಂದಬಾರದು. ಒಂದು ವೇಳೆ ಯಾ ರಾದರೂ ಈ ಔಷಧ ಮಾರಾಟ
ಮಾಡುತ್ತಿರುವುದು ಕಂಡು ಬಂದರೆ ಕೂಡಲೇ ಔಷಧ ಪರಿವೀಕ್ಷಕರ ಗಮನಕ್ಕೆ ತರಲು ಸೂಚಿಸಲಾಗಿದೆ.

Advertisement

ನಿಷೇಧಿತ ಔಷಧಗಳು: ಚೆನ್ನೈನ ಕೌಷಿಕ್‌ ತೆರಾಪಿಯೋಟಿಕ್ಸ್‌ ಪ್ರೈವೇಟ್‌ ಲಿ. ಸಿದ್ಧಪಡಿಸುವ ಮೈಮಿ ಡಿ ಅಲ್ಫಾ ಲಿಪೋಯಿಕ್‌ ಆಸಿಡ್‌, ಪೈರಿಡೋಕ್ಸೆ„ನ್‌ ಹೈಡ್ರೋ ಕ್ಲೋರೈಡ್‌, ಮೈತೆಲ್‌ ಕೊಬಾಲಮಿನ್‌, ಫೋಲಿಕ್‌ ಆಸಿಡ್‌ ಮತ್ತು ವಿಟಮಿನ್‌ ಡಿ3 ಟ್ಯಾಬ್ಲೆಟ್‌. ಹರಿದ್ವಾರದ ಮೆಡಿಕಮೆನ್‌ ಬಯೋಟೆಕ್‌ ಲಿ. ತಯಾರಿಸುವ ಲೋಡನ್‌ ಟ್ಯಾಬ್ಲೆಟ್‌(ಅಸೆಕ್ಲೋಫೆನಾಕ್‌ ಮತ್ತು ಪ್ಯಾರಸಿಟಮೊಲ್‌ ), ಹರಿದ್ವಾರದ ಫ್ರಾನ್ಸಿಸ್‌ ರೆಮಿಡೀಸ್‌ (ಇಂಡಿಯಾ) ಪ್ರೈ.ಲಿ.ನ ಅಸಕೇರ್‌-ಪಿ (ಅಸೆಕ್ಲೋಫೆನಾಕ್‌ ಮತ್ತು ಪ್ಯಾರಾಸಿಟಮೊಲ್‌ ), ಉತ್ತರ ಪ್ರದೇಶದ ಸಿಸ್ಟೋಕೆಮ್‌ ಲ್ಯಾಬೊರೇಟರಿಸ್‌ ಲಿ.ನ ಇರೋ ಸಕ್‌ ಇಂಜೆಕ್ಷನ್‌ ಐರನ್‌ ಸಕ್ರೋಸ್‌ ಇಂಜೆಕ್ಷನ್‌ ಯುಎಸ್‌ಪಿ. ಅನೋನ್‌ದಿತಾ ಹೆಲ್ತ್‌ಕೇರ್‌ನ ವಿಗೋರಾ (ಮಲ್ಟಿ ಟೆಕ್ಸರ್‌ ಕಾಂಡಮ್ಸ್‌), ಬೆಂಗಳೂರಿನ ಕರ್ನಾಟಕ ಆಂಟಿ ಬಯೋಟಿಕ್‌ ಮತ್ತು ಫಾರ್ಮಾಸಿಟಿಕಲ್‌ ಲಿ.ನ ಆಕ್ಸಿಟೋಸಿನ್‌ ಇಂಜೆಕ್ಷನ್‌ ಐಪಿ (5ಐಯು), ಹಿಮಾಚಲ ಪ್ರದೇಶದ ಆಲಿಯನ್ಸ್‌ ಬಯೋಟೆಕ್‌ನ ಎನ್‌ -ಪಾರ್‌ ಟ್ಯಾಬ್ಲೆಟ್ಸ್‌ (ನಿಮೊಸೂಲೈಡ್‌ ಅಂಡ್‌ ಪ್ಯಾರಾಸಿಟಿಮೊಲ್‌ ). ಹಿಮಾಚಲ ಪ್ರದೇಶದ ಜಿ.ಜಿ. ನ್ಯೂಟ್ರಿಷನ್‌ ಲಿ. ಲಾರೆ ಪೋಡ್‌ -ಸಿಎಲ್‌ (ಸೆಫ್‌ಪೋಡೋಕ್ಸೆ„ನ್‌ ಅಂಡ್‌ ಪೊಟಾಸಿಯಮ್‌ ಕ್ಲಾವುಲನೇಟ್‌)ಹಾಗೂ ಲೈಫ್‌ ವಿಷನ್‌ ಹೆಲ್ತ್‌ ಕೇರ್‌ನ ಪಿಡಾಕ್ಸ್‌ -ಎಝಡ್‌(ಸೆಫ್‌ಪೋಡೋಕ್ಸೆ„ನ್‌ 200 ಎಂಜಿ ಮತ್ತು ಅಜಿತ್ರೋಮೈಸಿನ್‌ 250 ಎಂಜಿ ), ವೆನಾಸ್‌ ಬಯೋಸೈನ್ಸಸ್‌ ಪ್ರೈ. ಲಿ. 
ಅಜಿತ್ರೋಮೈಸಿನ್‌ ಟ್ಯಾಬ್ಲೆಟ್‌ ಐ.ಪಿ. 500 ಎಂಜಿ (ಎಜಡ್‌ ಐಟಿ-500), ಶ್ರೀ ಸಾಯಿ ಬಾಲಾಜಿ ಫಾರ್ಮಸಿಟಿಕಲ್ಸ್‌ ಪ್ರೈ.ಲಿ.ನ
ಅಮೋಕ್ಸಿಲಿನ್‌ ಮತ್ತು ಪೊಟಾಸಿಯಮ್‌ ಕ್ಲಾವುಲನೇಟ್‌ ಟ್ಯಾಬ್ಲೆಟ್‌ ಐಪಿ (ಜೋಮೋಕ್ಸ್‌-ಸಿವಿ 625), ಆಸೆ ಜೆನರಿಕ್ಸ್‌ ಎಲ್‌ ಎಲ್‌ಪಿ.ನ
ರಿಯಾಕ್ಸಿನ್‌ 50 (ಡೈಕ್ಲೋಫೆನಾಕ್‌ ಸೋಡಿಯಮ್‌ ಟ್ಯಾಬ್ಲೆಟ್‌ ಐಪಿ 50 ಎಂಜಿ), ತಮಿಳುನಾಡಿನ ಗೋಮಾತಿ ಶಂಕರ್‌ ಸರ್ಜಿಕಲ್ಸ್‌ನ
ರೋಲರ್‌ ಬ್ಯಾಂಡೆಜ್‌ ಸ್ಕೆಡ್ನೂಲ್‌ ಎಫ್‌, ಹಿಮಾಚಲಪ್ರದೇಶದ ಅಲ್ಟ್ರಾ ಡ್ರಗ್ಸ್‌ ಪ್ರೈ. ಲಿ.ನ ಸೆಫೂrಡೋಕ್ಸೆ„ಮ್‌ ಅಂಡ್‌ ಫೋಕ್ಯಾಸಿನ್‌
ಟ್ಯಾಬ್ಲೆಟ್ಸ್‌ (ಪೋಡೋಕ್ಸಿಲ್‌-ಒ), ಉತ್ತರಕಾಂಡದ ಸೆನೇಟ್‌ ಲ್ಯಾಬೋರೇಟರಿಸ್‌ನ ಜೆನಿಕ್ಸಿಮ್‌-200 ಟ್ಯಾಬ್ಲೆಟ್‌ (ಸೆಕ್ಸೆ„ಮ್‌ 
ಟ್ರೈಹೈಡ್ರೇಟ್‌ ಮತ್ತು ಲ್ಯಾಕ್‌ಟಿಕ್‌ ಆ್ಯಸಿಡ್‌ ಬಸಿಲಸ್‌ ಟ್ಯಾಬ್ಲೆಟ್‌) ಔಷಧಗಳನ್ನು ನಿಷೇಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next