Advertisement

14,933 ಹೊಸ ಪ್ರಕರಣಗಳು: ದೇಶದಲ್ಲಿ 4.40 ಲಕ್ಷ ತಲುಪಿದ ಕೋವಿಡ್-19 ಸೋಂಕಿತರ ಸಂಖ್ಯೆ

03:20 PM Jun 23, 2020 | Mithun PG |

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 14,933 ಜನರಿಗೆ ಹೊಸದಾಗಿ ಸೊಂಕು ತಗುಲಿದ್ದು, ಒಟ್ಟಾರೆ ವೈರಾಣು ಪೀಡಿತರ ಸಂಖ್ಯೆ 4,40,215 ಕ್ಕೆ ತಲುಪಿದೆ. ಮಾತ್ರವಲ್ಲದೆ ಒಂದೇ ದಿನ 312 ಜನರು ಮೃತಪಟ್ಟಿದ್ದು ಸಾವಿನ ಪ್ರಮಾಣ 14,000 ದ ಗಡಿ ದಾಟಿದೆ.

Advertisement

ಆರೋಗ್ಯ ಸಚಿವಾಲಯ ಇಂದು ನೀಡಿದ ವರದಿಯ ಪ್ರಕಾರ (23-06-2020) ದೇಶದಲ್ಲಿ 4,40,215 ವೈರಸ್ ಸೋಂಕಿತ ಪ್ರಕರಣಗಳು  ದಾಖಲಾಗಿದ್ದು, ಇದರಲ್ಲಿ 1,78,014 ಸಕ್ರೀಯ ಪ್ರಕರಣಗಳಿವೆ ಮತ್ತು  ಸುಮಾರು 2,48,190 ಜನರು ಸೋಂಕಿನಿಂದ ಮುಕ್ತರಾಗಿದ್ದಾರೆ ಎಂದು ತಿಳಿದುಬಂದಿದೆ.

ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಜನರು ವೈರಾಣು ಪೀಡಿತರಾಗಿದ್ದು, ಸುಮಾರು 1,35,796 ಜನರು ಸೋಂಕಿಗೆ ಭಾಧಿತರಾಗಿದ್ದಾರೆ. ಇದರಲ್ಲಿ 61,807 ಸಕ್ರೀಯ ಪ್ರಕರಣಗಳು ಮತ್ತು 6,283 ಜನರು ಮೃತರಾಗಿದ್ದಾರೆ.67,706 ಜನರು ಗುಣಮುಖರಾಗಿದ್ದಾರೆ.

ದೆಹಲಿಯಲ್ಲಿ ಕೂಡ ಈ ಮಹಾಮಾರಿ ಅಟ್ಟಹಾಸ ಮೆರೆಯುತ್ತಿದ್ದು, ಸುಮಾರು 62,655 ಜನರು ವೈರಾಣುವಿಗೆ ತುತ್ತಾಗಿದ್ದಾರೆ. ಈ ರಾಜ್ಯದಲ್ಲಿ ಸುಮಾರು 2,333 ಜನರು ಸೋಂಕಿನ ಕಾರಣದಿಂದ ಮೃತಪಟ್ಟಿದ್ದಾರೆ. ತಮಿಳುನಾಡುವಿನಲ್ಲೂ ಈ ವೈರಸ್ ಪ್ರಾಣಭೀತಿಯನ್ನು ಹೆಚ್ಚಿಸಿದ್ದು ಸುಮಾರು 62 ಸಾವಿರ ಮಂದಿ ಸೋಂಕಿಗೆ ಒಳಗಾಗಿದ್ದಾರೆ.\

Advertisement

ಕೋವಿಡ್ 19 ವೈರಸ್ ಪತ್ತೆ ಪರೀಕ್ಷೆ ನಡೆಸುವ ಲ್ಯಾಬ್ ಗಳ ಸಂಖ್ಯೆಯನ್ನು ಹೆಚ್ಚು ಮಾಡುವ ಕುರಿತು ಯೋಜನೆ ರೂಪಿಸಲಾಗುತ್ತಿದ್ದು, ಈಗಾಗಲೇ 722 ಸರ್ಕಾರಿ ಲ್ಯಾಬೋರೇಟರಿ ಮತ್ತು 259 ಖಾಸಗಿ ಲ್ಯಾಬ್ ಗಳು ದೇಶದಲ್ಲಿ ಕಾರ್ಯನಿರ್ವಹಿಸುತ್ತಿದೆ. ಒಟ್ಟಾರೆಯಾಗಿ 981 ಕೋವಿಡ್ ಪತ್ತೆ ಪರೀಕ್ಷಾ ಲ್ಯಾಬ್ ಗಳಿವೆ ಎಂದು ಆರೋಗ್ಯ ಸಚಿವಾಲಾಯ ದೃಢಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next