Advertisement
ಈ ಶಾಲೆಯು ಯಾವುದೋ ಕುಗ್ರಾಮದಲ್ಲಿಲ್ಲ, ಬದಲಿಗೆ ತಾಲೂಕಿನ ಬನಹಟ್ಟಿಯ ಹೃದಯ ಭಾಗದಲ್ಲಿದೆ. ಅದರಲ್ಲಿಯೂ ದಿನಂಪ್ರತಿ ಸಾವಿರಾರು ವಿದ್ಯಾರ್ಥಿಗಳು ಈ ಶಾಲೆಯ ಪಕ್ಕದಲ್ಲಿಯೇ ಇತರೆ ಶಾಲೆಗಳಿಗೆ ತೆರಳುತ್ತಾರೆ. ಇಷ್ಟಾದರೂ ಈ ಶಾಲೆಗೆ ವಿದ್ಯಾರ್ಥಿ/ ವಿದ್ಯಾರ್ಥಿನಿಯರ ಕೊರತೆ ಎದ್ದು ಕಾಣುತ್ತಿದೆ.
Related Articles
Advertisement
ಖಾಸಗಿ ಶಾಲೆ ಆರ್ಭಟ: ಇತ್ತೀಚಿನ ದಿನಗಳಲ್ಲಿ ಆಂಗ್ಲ ಮಾಧ್ಯಮ, ಸಿಬಿಎಸ್‌ಇ ಸೇರಿದಂತೆ ಖಾಸಗಿ ಶಾಲೆಗಳ ಭರಾಟೆ ಹೆಚ್ಚಾಗಿರುವುದರಿಂದ ಸರ್ಕಾರಿ ಶಾಲೆಯೆಂದರೆ ಮೂಗು ಮುರಿಯುವವರೇ ಹೆಚ್ಚು. 2004 ರಲ್ಲಿ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಹೊಂದಿದ ಈ ಸರ್ಕಾರಿ ಶಾಲೆಯಲ್ಲೀಗ 147 ಕ್ಕೆ ಇಳಿಕೆ ಕಂಡಿರುವುದೇ ವಿಚಿತ್ರ.
ಕಾಯಕಲ್ಪವಾಗಬೇಕು: ಪಟ್ಟಣದ ಮಧ್ಯಭಾಗದಲ್ಲಿರುವ ಈ ಶಾಲೆಯ ಸುತ್ತ ಕಾಂಪೌಂಡ್ ಇಲ್ಲದ ಕಾರಣ ಶಾಲಾ ರಜೆ ದಿನಗಳಲ್ಲಿ ಅನೈತಿಕ ಚಟುವಟಿಕೆಗಳಿಗೆ ಅವಕಾಶವಾಗಿದೆ. ಶಾಲಾ ಆವರಣದ ಹೊರಗಡೆ ಬೀದಿ ವ್ಯಾಪಾರಿಗಳಿಂದ ತೊಂದರೆ ಅನುಭವಿಸುವಂತಾಗಿದೆ. ಇವೆಲ್ಲದರ ಬಗ್ಗೆ ಗಮನಿಸಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳಕ್ಕೆ ಶಿಕ್ಷಕರು ಹಾಗು ಶಾಲಾ ಸುಧಾರಣಾ ಸಮಿತಿ ಹೆಚ್ಚಿನ ಗಮನ ಹರಿಸಬೇಕಿದೆ.
ಈ ಶಾಲೆಯ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಒದಗಿಸಿದೆ. ಮನೆ ಮನೆಗೆ ತೆರಳಿ ಶಾಲೆ ಬಗ್ಗೆ ತಿಳಿಹೇಳಲಾಗಿದೆ. ಪಾಲಕರ ಸ್ವಚ್ಛೆಯಿಂದ ಮಗುವನ್ನು ಸರ್ಕಾರಿ ಶಾಲೆಗೆ ಕಳಿಸುವಂತಾಗಬೇಕು’.-ಅಶೋಕ ಬಸನ್ನವರ, ಕ್ಷೇತ್ರ ಶಿಕ್ಷಣಾಧಿಕಾರಿ, ಜಮಖಂಡಿ. ಮೂಲಭೂತ ಸೌಕರ್ಯ ಒದಗಿಸಿ, ಪೂರ್ಣ ಪ್ರಮಾಣದಲ್ಲಿ ಶಿಕ್ಷಕರಿದ್ದಾರೆ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳಕ್ಕೆ ಇತರೆ ಚಟುವಟಿಕೆಗಳಿಂದ ಕಾರ್ಯಪ್ರವೃತರಾಗುವಲ್ಲಿ ಕಾಳಜಿ ವಹಿಸುತ್ತೇವೆ.’
-ಎಸ್.ಪಿ. ಬುರ್ಲಿ, ಶಿಕ್ಷಣ ಸಂಯೋಜಕರು, ರಬಕವಿ ಬನಹಟ್ಟಿ. -ಕಿರಣ ಶ್ರೀಶೈಲ ಆಳಗಿ