Advertisement

14,581 ಕೋಟಿ ರೂ. ಪೂರಕ ಅಂದಾಜಿಗೆ ಒಪ್ಪಿಗೆ

01:37 AM Feb 15, 2019 | |

ಬೆಂಗಳೂರು: ಪ್ರಸಕ್ತ ಹಣಕಾಸು ವರ್ಷಕ್ಕೆ ಸಂಬಂಧಪಟ್ಟಂತೆ ಹೆಚ್ಚುವರಿಯಾಗಿ 14,581.43 ಕೋ. ರೂ. ಮೊತ್ತಕ್ಕೆ ಪೂರಕ ಅಂದಾಜು (ಎರಡನೇ ಕಂತು) ಮಂಡಿಸಿ ಗುರುವಾರ ಉಭಯ ಸದನಗಳಲ್ಲಿ ಅನುಮೋದನೆ ಪಡೆಯಲಾಯಿತು.

Advertisement

ವಾಣಿಜ್ಯ ಬ್ಯಾಂಕ್‌ಗಳಲ್ಲಿನ ರೈತರ ಸಾಲ ಮನ್ನಾಗೆ 2,500 ಕೋ. ರೂ., ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ವಿತರಣೆಗೆ 280.22 ಕೋ. ರೂ., ಮುಂದಿನ ಲೋಕಸಭಾ ಚುನಾವಣೆ ಪೂರ್ವ ಸಿದ್ಧತೆಗಾಗಿ 15 ಕೋ. ರೂ. ಸಹಿತ ಇತರ ಪೂರಕ ಅಂದಾಜುಗಳಿಗೆ ಒಪ್ಪಿಗೆ ನೀಡಲಾಗಿದೆ.

ಪೂರಕ ಅಂದಾಜುಗಳಲ್ಲಿ ಸೇರ್ಪಡೆಯಾಗಿರುವ ಒಟ್ಟು 14,581 ಕೋ. ರೂ.ಗಳಲ್ಲಿ 142.22 ಕೋ. ರೂ. ಪ್ರಭೃತ ವೆಚ್ಚ ಮತ್ತು 14,439.21 ಕೋ. ರೂ. ಪರಿಷ್ಕೃತ ವೆಚ್ಚ ಸೇರ್ಪಡೆಯಾಗಿದೆ. ಸಂಚಿತ ನಿಧಿಯಿಂದ 14,056.21 ಕೋ. ರೂ. ಹೋಗಲಿದ್ದು, ಇದರಲ್ಲಿ 402.66 ಕೋ. ರೂ. ಕೇಂದ್ರ ಸರಕಾರದ ಸಹಾಯಕ್ಕೆ ಸಂಬಂಧಪಟ್ಟದ್ದಾಗಿದ್ದರೆ, 27.88 ಕೋ. ರೂ. ಲೆಕ್ಕ ಹೊಂದಾಣಿಕೆಗೆ ಸಂಬಂಧಿಸಿದೆ. ಹಾಗಾಗಿ ಹೊರ ಹೋಗುವ ನಿವ್ವಳ ನಗದು ಮೊತ್ತ 13,625 ಕೋ. ರೂ.ಗಳನ್ನು ವೆಚ್ಚದ ಸೂಕ್ತ ಪರಿಷ್ಕೃತ ಆದ್ಯತೆ ಮೇರೆಗೆ ಭರಿಸುವುದಾಗಿ ತಿಳಿಸಲಾಗಿದೆ.
ಲೋಕಸಭಾ ಚುನಾವಣೆ ಪೂರ್ವಸಿದ್ಧತೆಗಾಗಿ ರಹಸ್ಯ ಸೇವೆಗಳ ವೆಚ್ಚ ಭರಿಸಲು 5 ಕೋ. ರೂ. ಮತ್ತು ಸಾರಿಗೆ ವೆಚ್ಚಗಳಿಗೆ 8 ಕೋ. ರೂ. ನೀಡಲಾಗಿದೆ. ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್‌ ಬಾಬಿ¤ಗೆ ಸಾರಿಗೆ ಇಲಾಖೆಗೆ 51.7 ಕೋ. ರೂ. ಮತ್ತು ಬಿಎಂಟಿಸಿಗೆ 7.14 ಕೋ. ರೂ. ಅನುದಾನ ಕಲ್ಪಿಸಲಾಗಿದೆ.

ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ಕೂಲಿ ಪಾವತಿಗಾಗಿ ಕೇಂದ್ರ ಸರಕಾರದ ಅನುದಾನ ನಿರೀಕ್ಷಿಸಿ 500 ಕೋ. ರೂ. ಮುಂಗಡವಾಗಿ ಪಾವತಿಸಲು ಅನುದಾನ ಕಲ್ಪಿಸಲಾಗಿದೆ. ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಗೆ ಎಸ್‌ಸಿಪಿಟಿಎಸ್‌ಪಿ ಕಾರ್ಯಕ್ರಮದಡಿ ಒಟ್ಟು 150 ಕೋ. ರೂ. ಒದಗಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next