Advertisement

ರೈಲಿನಲ್ಲಿ ಹೊರ ರಾಜ್ಯಗಳ 1,440 ಕಾರ್ಮಿಕರ ಪಯಣ

06:36 AM May 18, 2020 | Lakshmi GovindaRaj |

ಹಾಸನ: ಜಿಲ್ಲೆಯಲ್ಲಿದ್ದ ಹೊರ ರಾಜ್ಯಗಳ 1,440 ಕಾರ್ಮಿಕರನ್ನು ಭಾನುವಾರ ಪೊಲೀಸ್‌ ಬಿಗಿ ಭದ್ರತೆಯಲ್ಲಿ ರೈಲಿನಲ್ಲಿ ಕಳುಹಿಸಲಾಯಿತು. ಲಾಕ್‌ಡೌನ್‌ ಜಾರಿಯಾದ ನಂತರ ಕೆಲಸವಿಲ್ಲದೇ ವಲಸೆ ಕಾರ್ಮಿಕರ ಶಿಬಿರ ದಲ್ಲಿದ್ದವರೂ  ಸೇರಿ ಒಟ್ಟು 1,440ಜನರನ್ನು ಹಾಸನ ರೈಲು ನಿಲ್ದಾಣದಿಂದ ವಿವಿಧ ರಾಜ್ಯಗಳಿಗೆ ವಿಶೇಷ ರೈಲಿನಲ್ಲಿ ಕಳುಹಿಸಲಾಯಿತು.

Advertisement

ರೈಲಿನಲ್ಲಿ ಹೊರಟ ಕಾರ್ಮಿಕರಿಗೆ ಜಿಲ್ಲಾಡಳಿತವು ಉಚಿತವಾಗಿ ತಪಾಸಣೆ, ಸ್ಯಾನಿಟೈಸರ್‌, ಮಾಸ್ಕ್, ಉಪಾಹಾರದೊಂದಿಗೆ  ಎಲ್ಲಾ ಸೌಕರ್ಯ ವನ್ನು ಮಾಡಲಾಗಿದೆ. ಹೊರ ರಾಜ್ಯದವರು ತಮ್ಮೂರಿಗೆ ಹೋಗಲು ಅನೇಕ ದಿನಗಳಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದರು. ಈ ಸಂಬಂಧ ಜಿಲ್ಲಾಡಳಿತ ಆಯಾ ರಾಜ್ಯದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.

ಸರ್ಕಾರದ ಸೂಚನೆಯಂತೆ  ಜಿಲ್ಲಾಡಳಿತ ಹಾಸನ ರೈಲು ನಿಲ್ದಾಣದಿಂದ ಬಿಹಾರ, ಅಸ್ಸಾಂ, ಜಾರ್ಖಂಡ್‌ ಸೇರಿದಂತೆ ವಿವಿಧ ಭಾಗಗಳಿಗೆ ಹೋಗುವ ಕಾರ್ಮಿಕರಿಗೆ ರೈಲು ಪ್ರಯಾಣಕ್ಕೆ ವ್ಯವಸ್ಥೆ ಮಾಡಿತ್ತು. ರೈಲಿನಲ್ಲಿ ಪ್ರಯಾಣ ಮಾಡುವ  ಕಾರ್ಮಿಕರ ಪೂರ್ಣ ವಿವರವನ್ನು ಪಡೆದು ಮುಂಬೈನ ದಾದರ್‌ ಮೂಲಕ ಸಂಚರಿಸುವ ರೈಲಿನಲ್ಲಿ ಕಳುಹಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next