Advertisement

 ಹಿಜಾಬ್ -ಕೇಸರಿ ವಿವಾದ : ಕೊಪ್ಪಳ ನಗರ ಪ್ರದೇಶದಲ್ಲಿ ಐದು ದಿನ 144 ನಿಷೇಧಾಜ್ಞೆ

08:32 PM Feb 15, 2022 | Team Udayavani |

ಕೊಪ್ಪಳ : ರಾಜ್ಯಾದ್ಯಂತ ಶಾಲಾ ಕಾಲೇಜುಗಳಲ್ಲಿ ಹಿಜಾಬ್ -ಕೇಸರಿ ವಿವಾದ ಬುಗಿಲೆದ್ದಿದ್ದು, ಈ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಯ ಕೆಲವು ಕಡೆಯೂ ಇಂತಹ ಘಟನೆ ಬೆಳಕಿಗೆ ಬಂದಿದ್ದು, ಆ ಪ್ರಯುಕ್ತ ಮಂಗಳವಾರದಿಂದ ಜಿಲ್ಲೆಯಾದ್ಯಂತ ನಗರ ಪ್ರದೇಶದಲ್ಲಿ ಐದು ದಿನಗಳ ಕಾಲ 144 ಕಲಂ ನಿಷೇಧಾಜ್ಞೆ ಜಾರಿಗೊಳಿಸಿ ಡಿಸಿ ವಿಕಾಸ್ ಕಿಶೋರ್ ಅವರು ಆದೇಶ ಹೊರಡಿಸಿದ್ದಾರೆ.

Advertisement

ಕೊಪ್ಪಳ ನಗರ, ಗಂಗಾವತಿ ನಗರ, ಕಾರಟಗಿ, ಕನಕಗಿರಿ, ಕುಷ್ಟಗಿ ತಾಲೂಕಗಳು ಕೋಮು ವಿಚಾರದಲ್ಲಿ ಸೂಕ್ಷ್ಮ ಪ್ರದೇಶಗಳಾಗಿದ್ದು, ಜಿಲ್ಲೆಯಾದ್ಯಂತ ಕೆಲವು ಪ್ರದೇಶಗಳಲ್ಲಿ ಅಹಿತಕರ ಘಟನೆಗಳು ನಡೆಯುತ್ತಿದ್ದು, ಫೆ.14 ರಿಂದ ಸಂಜೆ 6 ರಿಂದ ಫೆ.20ರ ರಾತ್ರಿ 11.45ರ ವರೆಗೂ ಜಿಲ್ಲೆಯಾದ್ಯಾಂತ ನಿಷೇದಾಜ್ಞೆ ಜಾರಿಗೊಳಿಸಲು ಎಸ್ಪಿ ಅವರು ಪ್ರಸ್ತಾವನೆ ಸಲ್ಲಿಸಿದ್ದು, ಜಿಲ್ಲೆಯಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗೃತಾ ಕ್ರಮ ತಗೆದುಕೊಳ್ಳುವುದು ಅಗತ್ಯವಾದ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಹಾಗೂ ಸಾರ್ವಜನಿಕ ಸಾರ್ವಜನಿಕ ಆಸ್ತಿ ರಕ್ಷಣೆ, ಶಾಂತಿ ಪಾಲನೆ, ಕಾಪಾಡುವ ದೃಷ್ಟಿಯಿಂದ, ಮುಂಜಾಗೃತಾ ಕ್ರಮ ತೆಗೆದುಕೊಳ್ಳುವುದು ಅಗತ್ಯವಿರುವುದರಿಂದ ಕೊಪ್ಪಳ, ಗಂಗಾವತಿ, ಕುಷ್ಟಗಿ, ಯಲಬುರ್ಗಾ, ಕುಕನೂರು, ಕಾರಟಗಿ, ಕನಕಗಿರಿ ನಗರ ಪ್ರದೇಶದ ವ್ಯಾಪ್ತಿಯಲ್ಲಿ ಫೆ.15 ರ ಸಂಜೆ 6 ರಿಂದ ಫೆ.20ರ ರಾತ್ರಿ 11.45ರ ವರೆಗೂ ಅಹಿತಕರ ಘಟನೆ ನಡೆಯದಂತೆ ನಿಷೇದಾಜ್ಞೆ ಜಾರಿಗೊಳಿಸಿದೆ.

ಈ ವೇಳೆ ಐದಕ್ಕಿಂತ ಹೆಚ್ಚು ಜನರು ಗುಂಪು ಸೇರುವುದು ನಿರ್ಬಂಧಿಸಿದೆ. ಯಾವುದೇ ವ್ಯಕ್ತಿಯ ಜಾತಿ, ಧರ್ಮ, ಕೋಮು, ಪಂಥಗಳಿಗೆ ಅಥವಾ ಸಾರ್ವಜನಿಕ ನೈತಿಕತೆಗೆ ಬಾಧಕ ಉಂಟು ಮಾಡುವ ಚಟುವಟಿಕೆಗಳನ್ನು ನಿಷೇಧಿಸಿದೆ. ಸರ್ಕಾರಿ ಸಂಸ್ಥೆಗಳು, ಸಂಘಟನೆಗಳು, ನಿಂಧಿಸುವಂತಹ, ಅವಹೇಳನಕಾರಿಯಾದ ಯಾವುದೇ ಶಬ್ದಗಳ ಬಳಕೆ ನಿಷೇಧಿಸಿದೆ. ಪಟಾಕಿಗಳನ್ನು ಸಿಡಿಸುವುದು, ಸ್ಫೋಟಕ ಸಾಗಾಟ ನಿಷೇಧಿಸಿದೆ. ಪ್ರತಿಭಟನೆ, ವಿಜಯೋತ್ಸವ, ಮೆರವಣಿಗೆ ರ‍್ಯಾಲಿ, ರಾಜಕೀಯ ಸಭೆ, ಸಮಾರಂಭ ನಿಷೇಧಿಸಿದೆ. ಪ್ರತಿಕೃತಿಗಳ ಪ್ರದರ್ಶನ ಮಾಡುವುದನ್ನು ನಿಷೇಧಿಸಿದೆ. ರಾಜ್ಯದ ಭದ್ರತೆ ಕುಗ್ಗಿಸುವಂತ ಅಪರಾಧವನ್ನು ಪ್ರಚೋದಿಸುವ ಬಹಿರಂಗ ಘೋಷಣೆ, ಹಾಡು, ಭಾಷಣ, ನಿರೂಪಣೆ ನಿಷೇಧಗೊಳಿಸಿ ಡಿಸಿ ವಿಕಾಸ್ ಕಿಶೋರ್ ಅವರು ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ : ಅಧಿವೇಶನದ ಬಳಿಕ ಕೊಡಗು ಜಿಲ್ಲೆಗೆ ಭೇಟಿ, ಕಾಡು ಪ್ರಾಣಿಗಳ ಹಾವಳಿ ತಡೆಗೆ ಕ್ರಮ : ಉಮೇಶ್ ಕತ್ತಿ

Advertisement

Udayavani is now on Telegram. Click here to join our channel and stay updated with the latest news.

Next