Advertisement

ಕೋವಿಡ್ : ರಾಜ್ಯದಲ್ಲಿಂದು 1431 ಪ್ರಕರಣ ಪತ್ತೆ|1611 ಸೋಂಕಿತರು ಗುಣಮುಖ

07:31 PM Aug 15, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಹೊಸದಾಗಿ 1431 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ ಹಾಗೂ 21 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು ಸಂಜೆ ಬಿಡುಗಡೆ ಮಾಡಿರುವ ವರದಿಗಳು ತಿಳಿಸಿವೆ.

Advertisement

1611 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಇದುವರೆಗೆ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 2869962ಕ್ಕೆ ತಲುಪಿದೆ.

ರಾಜ್ಯದಲ್ಲಿ ಸದ್ಯ ಒಟ್ಟು ಸಕ್ರಿಯ ಪ್ರಕರಣಗಳ ಸಂಖ‍್ಯೆ 22497 ಇದೆ. ಸೋಂಕಿತ ಖಚಿತ ಪ್ರಕರಣಗಳ ಶೇಕಡಾವಾರು ಪ್ರಮಾಣ 0.93 % ಹಾಗೂ ಮೃತ ಪಟ್ಟವರ ಶೇಕಡಾವಾರು ಪ್ರಮಾಣ 1.46 % ಇದೆ.

ಜಿಲ್ಲಾವಾರು ಪ್ರಕರಣಗಳ ಸಂಖ್ಯೆ :

ಬಾಗಲಕೋಟೆ-2, ಬಳ್ಳಾರಿ-5, ಬೆಳಗಾವಿ-28, ಬೆಂಗಳೂರು ಗ್ರಾಮಾಂತರ-17, ಬೆಂಗಳೂರು ನಗರ-305, ಬೀದರ್-3, ಚಾಮರಾಜನಗರ-10, ಚಿಕ್ಕಬಳ್ಳಾಪುರ-5, ಚಿಕ್ಕಮಗಳೂರು-45, ಚಿತ್ರದುರ್ಗ-20, ದಕ್ಷಿಣ ಕನ್ನಡ-311, ದಾವಣಗೆರೆ-3, ಧಾರವಾಡ-15, ಗದಗ-4, ಹಾಸನ-87, ಹಾವೇರಿ-3, ಕಲಬುರಗಿ-3, ಕೊಡಗು-82, ಕೋಲಾರ-23, ಕೊಪ್ಪಳ-1, ಮಂಡ್ಯ-32, ಮೈಸೂರು-83, ರಾಯಚೂರು-4, ರಾಮನಗರ-6, ಶಿವಮೊಗ್ಗ-41, ತುಮಕೂರು-51, ಉಡುಪಿ-177, ಉತ್ತರ ಕನ್ನಡ-64, ವಿಜಯಪುರ-1, ಯಾದಗಿರಿ-0.

Advertisement
Advertisement

Udayavani is now on Telegram. Click here to join our channel and stay updated with the latest news.

Next