Advertisement

ಅಕ್ಟೋಬರ್‌ನಲ್ಲಿ 1,400 ಕೋಟಿ ರೂ. ಮೌಲ್ಯದ ಸ್ಟಾರ್ಟ್‌ಅಪ್‌ ಗಳು!

01:14 AM Dec 06, 2021 | Team Udayavani |

ಹೊಸದಿಲ್ಲಿ: ಅತ್ಯಾಧುನಿಕ ವೈಜ್ಞಾನಿಕ ಪರಿಕರಗಳನ್ನು ನಿರ್ಮಿಸುವ ಉದ್ದೇಶ ಹೊಂದಿರುವ ಸುಮಾರು 1,400 ಕೋಟಿ ರೂ. ಮೌಲ್ಯದ 94 ಸ್ಟಾರ್ಟ್‌ಅಪ್‌ಗಳನ್ನು ಐಐಟಿ ಮದ್ರಾಸ್‌ ಸಂಸ್ಥೆ, ಈ ವರ್ಷದ ಅಕ್ಟೋಬರ್‌ ತಿಂಗಳಲ್ಲಿ ಹುಟ್ಟುಹಾಕಿದೆ.

Advertisement

ಈ ಸಂಸ್ಥೆಗಳಲ್ಲಿ ಕೆಲವು “ಹೈಬ್ರಿàಡ್‌ ಏರಿಯಲ್‌ ವೆಹಿಕಲ್ಸ್‌’ (ಡ್ರೋನ್‌ ಮಾದರಿಯ ಹಾರಾಡುವ ಸಾಧನಗಳು) ತಯಾರಿಸುವ ಉದ್ದೇಶ ಹೊಂದಿದ್ದರೆ, ಇನ್ನೂ ಕೆಲವು ನಗರ ತ್ಯಾಜ್ಯಗಳನ್ನು ಕಚ್ಚಾ ತೈಲವ ನ್ನಾಗಿ ಪರಿವರ್ತಿಸುವ ತಂತ್ರಜ್ಞಾನ ಆವಿಷ್ಕಾರಕ್ಕಾಗಿ ಹುಟ್ಟುಹಾಕಲಾಗಿರುವ ಸ್ಟಾರ್ಟ್‌ಅಪ್‌ಗಳಾಗಿವೆ. ಇನ್ನೂ ಕೆಲವು ಅಡೆತಡೆಯಿಲ್ಲದ ನೀರು ಸರಬರಾಜು ವ್ಯವಸ್ಥೆ ಕಲ್ಪಿಸುವ ತಂತ್ರಜ್ಞಾನ ರೂಪಿಸಲೆಂದು ಸ್ಥಾಪಿಸಲಾಗಿರುವ ಕಂಪೆನಿಗಳಾಗಿವೆ.

ಇದನ್ನೂ ಓದಿ:ದೇಶೀಯ ಡ್ರೋನ್‌ ತಂತ್ರಜ್ಞಾನ ಶೀಘ್ರ: ಗೃಹ ಸಚಿವ ಅಮಿತ್‌ ಶಾ ಘೋಷಣೆ

ಇವೂ ಸೇರಿದಂತೆ, ಕಳೆದೊಂದು ದಶಕದಲ್ಲಿ ಐಐಟಿ ಮದ್ರಾಸ್‌ನ ಬೋಧಕ ವರ್ಗವು, ಈವರೆಗೆ 240 ಸ್ಟಾರ್ಟ್‌ಅಪ್‌ಗಳನ್ನು ಶುರು ಮಾಡಿದ್ದು ಅವುಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಇವು ಹಾಗೂ ಇತ್ತೀಚೆಗೆ ಶುರು ಮಾಡಲಾಗಿರುವ 94 ಸ್ಟಾರ್ಟ್‌ಅಪ್‌ಗಳು ಮೌಲ್ಯ ಒಟ್ಟಾರೆ 11,500 ಕೋಟಿ ರೂ. ಎಂದು ಅಂದಾಜಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next