Advertisement

ಕೆ.ಜಿ.ಹಳ್ಳಿ: ನಿರ್ಮಾಣದ ಹಂತದ ಕಟ್ಟಡದ ಸಂಪ್ ಗೆ ಬಿದ್ದು 14 ವರ್ಷದ ಬಾಲಕ ಸಾವು

05:29 PM Oct 19, 2021 | Team Udayavani |

ಬೆಂಗಳೂರು: ನಿರ್ಮಾಣದ ಹಂತದ ಕಟ್ಟಡ ಸಂಪ್ ಗೆ ಬಿದ್ದು ಬಾಲಕನೊಬ್ಬ ಸಾವನ್ನಪ್ಪಿರುವ ಘಟನೆ ಹೆಚ್ ಬಿಆರ್ ಲೇಔಟ್ ನಡೆದಿದೆ.

Advertisement

ಚಂದ್ರ (14) ಮೃತ ಬಾಲಕ. ನಗರದಲ್ಲಿನ ಸತತ ಮಳೆಯಿಂದಾಗಿ ನಿರ್ಮಾಣ ಹಂತದ ಕಟ್ಟಡದ ಗ್ರೌಂಡ್ ಪ್ಲೋರ್ ನಲ್ಲಿದ್ದ ಸಂಪ್ ನಲ್ಲಿ ನೀರು ನಿಂತಿತ್ತು. ಕಟ್ಟಡದ ಮುಂದೆ ಆಟದ ಮೈದಾನದಲ್ಲಿ ಆಡುತ್ತಿದ್ದ ವೇಳೆ ಚೆಂಡು ಕಟ್ಟಡದ ಒಳಗೆ ಹೋಗಿತ್ತು. ಚೆಂಡು ತರಲು ಹೋಗಿದ್ದ ಇಬ್ಬರು ಮಕ್ಕಳಲ್ಲಿ ಆಯತಪ್ಪಿ ಚಂದ್ರ ಸಂಪ್ ನೊಳಗೆ ಬಿದ್ದಿದ್ದಾನೆ.

ಇನ್ನೊಂದು ಮಗುಗಾಗಿ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಅಂಬೇಡ್ಕರ್ ಆಸ್ಪತ್ರೆಗೆ ಮೃತ ದೇಹವನ್ನು ಸ್ಥಳಾಂತರಿಸಲಾಗಿದೆ.  ಕೆ.ಜಿ. ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ .

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

More
Next