Advertisement

Assam: ಟ್ರಕ್‌, ಬಸ್ ನಡುವೆ ಭೀಕರ ಅಪಘಾತ: 14 ಮಂದಿ ಸ್ಥಳದಲ್ಲೇ ಮೃತ್ಯು, 27 ಮಂದಿಗೆ ಗಾಯ

09:21 AM Jan 03, 2024 | Team Udayavani |

ದಿಸ್ಪುರ: 45 ಜನರನ್ನು ಹೊತ್ತೊಯ್ಯುತ್ತಿದ್ದ ಬಸ್ಸೊಂದು ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 14 ಜನರು ಮೃತಪಟ್ಟಿದ್ದು ಮತ್ತು 27 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಅಸ್ಸಾಂನ ದೇರ್ಗಾಂವ್‌ನಲ್ಲಿ ಬುಧವಾರ ಮುಂಜಾನೆ 5 ಗಂಟೆ ಸುಮಾರಿಗೆ ಸಂಭವಿಸಿದೆ.

Advertisement

ತಿನ್ಸುಕಿಯಾದ ತಿಲಿಂಗ ಮಂದಿರಕ್ಕೆ 45 ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಪ್ರವಾಸಿ ಬಸ್ ದೇರ್ಗಾಂವ್‌ನಲ್ಲಿ ಟ್ರಕ್‌ಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮುಂಜಾನೆ ಮೂರೂ ಗಂಟೆಗೆ ಪ್ರವಾಸಿಗರನ್ನು ಹೊತ್ತು ಬಸ್ ಹೊರಟಿತ್ತು ಈ ವೇಳೆ ಮಾರ್ಗರಿಟಾದಿಂದ ಕಲ್ಲಿದ್ದಲು ಹೇರಿಕೊಂಡು ಬರುತ್ತಿದ್ದ ಟ್ರಕ್ ಗೆ ಬಸ್‌ ಮುಖಾಮುಖಿ ಡಿಕ್ಕಿ ಹೊಡೆದಿದೆ ಎಂದು ಹೇಳಿದ್ದಾರೆ ಘಟನೆ ಸಂಭವಿಸಿದ ವಿಷಯ ತಿಳಿಯುತ್ತಲೇ ಪೊಲೀಸರು ಸ್ಥಳಕ್ಕೆ ಧಾವಿಸಿ ಗಾಯಗೊಂಡ ಪ್ರಯಾಣಿಕರನ್ನು ರಕ್ಷಿಸಿ ಜೋರ್ಹತ್ ವೈದ್ಯಕೀಯ ಕಾಲೇಜಿಗೆ ದಾಖಲಿಸಿದ್ದಾರೆ. ಗಾಯಗೊಂಡಿರುವ ಹಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ.

14 ಪ್ರಯಾಣಿಕರ ಶವಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಘಟನೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Illegal Mining: ಜಾರ್ಖಂಡ್ ಸಿಎಂ ಆಪ್ತ ಸೇರಿದಂತೆ ಹಲವು ಅಧಿಕಾರಿಗಳ ನಿವಾಸದ ಮೇಲೆ ಇಡಿ ದಾಳಿ

Advertisement
Advertisement

Udayavani is now on Telegram. Click here to join our channel and stay updated with the latest news.

Next