ಮುಂಬಯಿ, ಡಿ. 14: ಮಾಥೆರನ್ ನ್ಯಾರೋ ಗೇಜ್ ಹಿಲ್ ರೈಲು 30 ದಿನಗಳಲ್ಲಿ 20,000ಕ್ಕೂ ಹೆಚ್ಚು ಪ್ರಯಾಣಿಕರನ್ನು ಗಳಿಸುವುದರೊಂದಿಗೆ ಸುಮಾರು 14,73,503 ರೂ. ಗಳ ಆದಾಯವನ್ನು ಗಳಿಸಿದೆ ಎಂದು ಮಧ್ಯ ರೈಲ್ವೇ ಮೂಲಗಳು ತಿಳಿಸಿವೆ. ಈ ಯಶಸ್ಸಿನಿಂದ ನೇರಲ್ ಮತ್ತು ಮಾಥೆ ರನ್ ನಡುವಿನ ಸಂಪೂರ್ಣ ವಿಸ್ತಾರದಲ್ಲಿ ಕಾರ್ಯಾಚರಣೆಯನ್ನು ಪುನರಾರಂಭಿಸಲು ಮಾಥೆ ರನ್ ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ಕೇಂದ್ರ ರೈಲ್ವೇಗೆ ಪತ್ರ ಬರೆದಿದ್ದಾರೆ.
ಅಸುರಕ್ಷಿತ ಪರಿಸ್ಥಿತಿಗಳಿಂದಾಗಿ ಹಳಿಯನ್ನು ಸ್ವಲ್ಪ ಸಮಯದವರೆಗೆ ಮುಚ್ಚ ಲಾಗಿದ್ದು, ದಸ್ತೂರಿ ನಾಕಾ ಮತ್ತು ಮಾಥೆರನ್ ನಡುವೆ ಸಣ್ಣ ವಿಸ್ತಾರ ಮಾತ್ರ ಕಾರ್ಯ ನಿರ್ವ ಹಿಸುತ್ತಿದೆ. ಕುದುರೆಗಳು ಮತ್ತು ಕೈ ರಿಕ್ಷಾಗಳು ಅಲ್ಲಿನ ಸಾರಿಗೆ ಸಾಧನವಾಗಿರುವುದರಿಂದ ದಸ್ತೂರಿ ನಾಕಾ ಮತ್ತು ಮಾಥೆರನ್ ಪಟ್ಟಣದ ನಡುವಿನ ಮಿನಿ ರೈಲು ನೌಕೆ ಸೇವೆ ಪುನರಾರಂಭಗೊಳ್ಳಬೇಕೆಂದು ಮಾಥೆರನ್ ಮುನ್ಸಿಪಲ್ ಕೌನ್ಸಿಲ್ ವಿನಂತಿಸಿದೆ.
ಇದರ ಬೆನ್ನಲ್ಲೇ ಮಹಾರಾಷ್ಟ್ರ ಸರಕಾರವು ದಸ್ತೂರಿ ನಾಕಾ ಮತ್ತು ಮಾಥೆರನ್ ಪಟ್ಟಣದ ನಡುವೆ ಮಾತ್ರ ಮಿನಿ ರೈಲು ಸೇವೆಗಳನ್ನು ನಡೆಸಲು ಅನುಮತಿ ನೀಡಿ, ಕೇಂದ್ರ ರೈಲ್ವೇಗೆ ನಿರ್ದೇಶನಗಳನ್ನು ನೀಡಿತು. ಇದು ನ. 4ರಿಂದ ಡಿ. 9ರ ವರೆಗೆ ಪುನರಾರಂಭಗೊಂಡಾಗಿನಿಂದ ಒಟ್ಟು 23,414 ಪ್ರಯಾಣಿಕರು ದಸ್ತೂರಿ ನಾಕಾ (ಅಮನ್ ಲಾಡ್ಜ್)-ಮಾಥೆರನ್ ಹದಿನೆಂಟು ನಿಮಿಷಗಳ ರೈಲು ಸೇವೆಗಳ ಉಪಯೋಗವನ್ನು ಪಡೆದಿದ್ದು, ಮಧ್ಯ ರೈಲ್ವೇ 14,73,503 ರೂ. ಗಳ ಆದಾಯ ಗಳಿಸಿದೆ. ಅಮನ್ ಲಾಡ್ಜ್ ನಿಂದ ಬರುವ ಮಾರ್ಗವು ಪ್ರವಾಸಿಗರನ್ನು ಆಕರ್ಷಿಸುತ್ತಿದ್ದು, ಇದು ಮಾಥೆರನ್ ನಿವಾಸಿಗಳಿಗೆ ಒಂದು ಪ್ರಮುಖ ಮತ್ತು ಅಗತ್ಯವಾದ ಸಾರಿಗೆ ವಿಧಾನವಾಗಿದೆ ಎಂದು ಮಧ್ಯ ರೈಲ್ವೇಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಅನಾÉಕ್ ಪ್ರಾರಂಭವಾದಾಗಿನಿಂದ ಸೇವೆಗಳನ್ನು ಹೆಚ್ಚಿಸಲಾಗಿದೆ. ನ. 4ರಂದು ಅಮನ್ ಲಾಡ್ಜ್ ಮತ್ತು ಮ್ಯಾಥೆರನ್ ನಡುವೆ ದೈನಂದಿನ ನಾಲ್ಕು ಸೇವೆಗಳೊಂದಿಗೆ ಪುನರಾರಂಭಿಸಿದ್ದೇವೆ. ಪ್ರಯಾಣಿ ಕರು ಹೆಚ್ಚುತ್ತಿರುವ ಪ್ರತಿಕ್ರಿಯೆ ನೋಡಿ, ನ. 14ರಿಂದ ಇನ್ನೂ ನಾಲ್ಕು ಸೇವೆಗಳನ್ನು ಸೇರಿಸಲಾಗಿದೆ. ನ. 18ರಿಂದ ಇನ್ನೂ ನಾಲ್ಕು ಸೇವೆಗಳನ್ನು ಸೇರಿಸಲಾಗಿದ್ದು, ಒಟ್ಟು ಸೇವೆಗಳ ಸಂಖ್ಯೆಯನ್ನು 12ಕ್ಕೆ ತಲುಪಿದೆ ಎಂದು ಮಧ್ಯ ರೈಲ್ವೇಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಶಿವಾಜಿ ಸುತಾರ್ ಹೇಳಿದ್ದಾರೆ.
ನೇರಲ್ ಮತ್ತು ಮಾಥೆರನ್ ನಡುವಿನ ಸಂಪೂರ್ಣ ವಿಸ್ತಾರದಲ್ಲಿ ರೈಲುಗಳು ಪ್ರಾರಂಭವಾಗ ಬೇಕು ಎಂದು ಮಾಥೆರನ್ ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ಪ್ರೇರಣಾ ಸಾವಂತ್ ಹೇಳಿದ್ದಾರೆ. ನೇರಲ್ ಮತ್ತು ಮಾಥೆರನ್ ನಡುವಿನ ಸಂಪೂರ್ಣ ವಿಸ್ತರಣೆ ಯನ್ನು ತ್ವರಿತವಾಗಿ ಮರುಸ್ಥಾಪನೆಗೆ ಕೋರಿ ಕೇಂದ್ರ ರೈಲ್ವೇಯ ಜನರಲ್ ಮ್ಯಾನೇಜರ್‌ಗೆ ಪತ್ರ ವನ್ನು ಕಳುಹಿಸಿದ್ದೇನೆ. ಐತಿಹಾಸಿಕ ಮತ್ತು ಪಾರಂಪರಿಕ ರೈಲು ಪುನಃ ಸ್ಥಾಪನೆಯು ಪ್ರವಾಸೋದ್ಯಮವನ್ನು ಮತ್ತಷ್ಟು ಹೆಚ್ಚಿಸಲು ಮತ್ತು ಪಟ್ಟ ಣದ ಪುನರುಜ್ಜೀವನಕ್ಕೆ ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.