Advertisement
ಬಂಟ್ವಾಳ ತಾಲೂಕು ನರಿಂಗಾನ ಗ್ರಾಮದ ತೌಡುಗೋಳಿ ಕ್ರಾಸ್‌ನ ಅಬ್ದುಲ್ ಅಜೀಜ್ (35) ಮತ್ತು ಮೊಹಮ್ಮದ್ ಮುಸ್ತಾಫ ಯಾನೆ ಗಿಡಿ (44) ಬಂಧಿತ ಆರೋಪಿಗಳು. (ಆರೋಪಿ ಅಬ್ದುಲ್ ಅಜೀಜ್ ಪ್ರಸ್ತುತ ನರಿಂಗಾನ ಗ್ರಾಮದ ಕೆದಂಬಾಡಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾನೆ).
ಆರೋಪಿಗಳಿಂದ 14 ಕೆ.ಜಿ ಗಾಂಜಾ ಮತ್ತು ಒಂದು ಮಾರುತಿ 800 ಕಾರು ಹಾಗೂ ಎರಡು ಮೊಬೈಲ್ ಪೋನ್‌ಗಳನ್ನು ವಶಪಡಿಸಿ ಕೊಂಡಿದ್ದಾರೆ. ಇವುಗಳ ಒಟ್ಟು ಮೌಲ್ಯ 3,35,400 ರೂ. ಆರೋಪಿಗಳು ತಾವು ಆಂಧ್ರ ಪ್ರದೇಶದ ಪಳಮನೀರ್ ನಲ್ಲಿರುವ ಶೇಖ್ ಸಲೀಂ ಭಾಷಾ ಎಂಬಾತನಿಂದ 14 ಕೆ.ಜಿ ಗಾಂಜಾವನ್ನು ಪಡೆದುಕೊಂಡು ಬಂದಿದ್ದು, ಅದನ್ನು ಇಲ್ಲಿನ ಜನರಿಗೆ ಹಾಗೂ ಕೇರಳದ ಮಂಜೇಶ್ವರ, ಉಪ್ಪಳಕ್ಕೆ ಮಾರಾಟ ಮಾಡಲು ಹೊರಟಿದ್ದಾಗಿ ತಿಳಿಸಿದ್ದಾರೆ. ಆರೋಪಿ ಅಬ್ದುಲ್ ಅಜೀಜ್ ಈ ಹಿಂದೆ 2016 ರಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದಾಗ ಉಳ್ಳಾಲ ಪೊಲೀಸರಿಂದ ಬಂಧಿತನಾಗಿದ್ದು, ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ಮಂಗಳೂರು ಪೊಲೀಸ್ ಆಯುಕ್ತ ಎಂ.ಚಂದ್ರಶೇಖರ್ ಅವರ ಆದೇಶದಂತೆ ಡಿಸಿಪಿ ಡಾ | ಸಂಜೀವ ಎಂ.ಪಾಟೀಲ್ ಅವರ ನಿರ್ದೇಶನದಲ್ಲಿ ಈ ಕಾರ್ಯಾಚರಣೆ ನಡೆದಿದ್ದು ಸಿಸಿಬಿ ಘಟಕದ ಸಿಬಂದಿ ಭಾಗವಹಿಸಿದ್ದರು.