ಮಹಾನಗರ: ನಗರದಲ್ಲಿ ವಾಹನ ಸಂಚಾರ ವ್ಯವಸ್ಥೆ ಸುಧಾರಿಸುವ ನಿಟ್ಟಿನಲ್ಲಿ ನಗರದ ನಾಲ್ಕು ಜಂಕ್ಷನ್‌ಗಳನ್ನು ಸುಮಾರು 14 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಮಹಾನಗರ ಪಾಲಿಕೆ ಮುಂದಾಗಿದೆ.
ಪ್ರೀಮಿಯಂ ಎಫ್.ಎ.ಆರ್. ನಿಧಿ ಯಲ್ಲಿ ಕೊಟ್ಟಾರಚೌಕಿ ಜಂಕ್ಷನ್, ಕೆಎಸ್ಸಾ ರ್ಟಿಸಿ ಜಂಕ್ಷನ್, ಹೊನ್ನಕಟ್ಟೆ ಜಂಕ್ಷನ್ ಮತ್ತು ಸುರತ್ಕಲ್ ಜಂಕ್ಷನ್ ಅಭಿವೃದ್ಧಿಯಾಗಲಿದೆ. ನಗರದ ಕೆಲವೊಂದು ಜಂಕ್ಷನ್‌ಗಳು ಅವೈಜ್ಞಾನಿಕವಾಗಿದ್ದು, ಅವುಗಳಿಂದಲೇ ನಗರದಲ್ಲಿ ವಾಹನ ದಟ್ಟಣೆಗೆ ಕಾರಣವಾಗು ತ್ತದೆ. ಕೆಲವೊಂದು ಜಂಕ್ಷನ್‌ಗಳು ಅಪಘಾತ ವಲಯವಾಗಿ ರೂಪುಗೊಂಡಿದೆ. ಈ ಹಿನ್ನೆಲೆಯಲ್ಲಿ ವೈಜ್ಞಾನಿಕ ಜಂಕ್ಷನ್ ನಿರ್ಮಾಣ ಕುರಿತಂತೆ ನಾಗರಿಕರಿಂದ ಬೇಡಿಕೆ ಬಂದಿತ್ತು. ಇದೀಗ ರಾಜ್ಯ ಸರಕಾರದ ಪ್ರೀಮಿಯಂ ಎಫ್.ಎ.ಆರ್. ನಿಧಿಯಲ್ಲಿ ಮೊದ ಲನೇ ಹಂತದಲ್ಲಿ ನಗರದ ಪ್ರಮುಖ ನಾಲ್ಕು ಜಂಕ್ಷನ್ ಅಭಿವೃದ್ಧಿಗೊಳ್ಳಲಿದೆ.
ರಾಷ್ಟ್ರೀಯ ಹೆದ್ದಾರಿ ಯಿಂದ ನಗರಕ್ಕೆ ಪ್ರವೇಶ ಪಡೆಯುವ ಕೊಟ್ಟಾರ ಚೌಕಿ ಜಂಕ್ಷನ್ ಸಂಚಾರ ದಟ್ಟಣೆ, ಅಪಘಾತ ವಲಯವಾಗಿ ರೂಪಿತವಾಗುತ್ತಿದೆ. ಜೋರಾಗಿ ಮಳೆ ಸುರಿದಾಗ ಈ ಭಾಗದ ನೀರು ಹರಿಯದೆ, ರಸ್ತೆಯಲ್ಲೇ ನಿಂತು ಅಧ್ವಾನಕ್ಕೆ ಕಾರಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಚರಂಡಿ ನಿರ್ಮಾಣ, ಫುಟ್‌ಪಾತ್ ಕಾಮಗಾರಿಗೂ ಆದ್ಯತೆ ನೀಡಲು ನಿರ್ಧರಿಸಲಾ ಗಿದೆ. ಅಗತ್ಯವಿದ್ದ ಕಡೆಗಳಲ್ಲಿ ಟ್ರಾಫಿಕ್ ಐಲ್ಯಾಂಡ್ ನಿರ್ಮಾಣ ಮಾಡಿ, ಅಲ್ಲಿ ಹಸುರು ಬೆಳೆಸುವ ಉದ್ದೇಶ ಪಾಲಿಕೆಗೆ ಇದೆ. ಲಾಲ್‌ಬಾಗ್ ಜಂಕ್ಷನ್ ಅಭಿವೃದ್ಧಿಗೊಂಡಿದ್ದು, ಬಿಜೈಯ ಕೆಎಸ್ಸಾ ರ್ಟಿಸಿ ಅಭಿವೃದ್ಧಿಯಾಗಬೇಕಿದೆ. ಈ ಭಾಗದಲ್ಲಿ ಕಾಪಿಕಾಡ್-ಲಾಲ್‌ಬಾಗ್-ನಂತೂರು ಕಡೆಗೆ ರಸ್ತೆ ಕವಲು ಪಡೆದರೆ ಒಂದು ರಸ್ತೆ ನೇರವಾಗಿ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ಪ್ರವೇಶ ಪಡೆಯುತ್ತದೆ. ಈ ಜಂಕ್ಷನ್ ಅಭಿವೃದ್ಧಿಗೆ ಆದ್ಯತೆ ನೀಡಲು ನಿರ್ಧರಿಸಲಾಗಿದೆ.
ನಗರದ ಹೊರ ವಲಯ ದಲ್ಲಿರುವ ಸುರತ್ಕಲ್ ಜಂಕ್ಷನ್ ಅಭಿವೃದ್ಧಿ ಹೊಂದಲಿದೆ. ಇಲ್ಲಿ ಉಡುಪಿ – ಮಂಗಳೂರು, ಕೃಷ್ಣಾಪುರ ಕಡೆಗೆ ಸಂಚರಿಸಡುವ ವಾಹನಗಳು ಅಡಾದಿಡ್ಡಿ ನಿಲ್ಲುತ್ತಿದೆ. ಇನ್ನು, ಜಂಕ್ಷನ್ ದಾಟಿ ಸರ್ವಿಸ್ ರಸ್ತೆಯೂ ಕವಲೊಡೆದಿದೆ. ಇದೇ ಕಾರಣಕ್ಕೆ ಈ ಪ್ರದೇಶ ಅಪಘಾತ ವಲಯವಾಗಿ ಪರಿಣಮಿಸಿದೆ. ಅಭಿವೃದ್ಧಿ ಹೊಂದಲಿರುವ ಹೊನ್ನಕಟ್ಟೆ ಜಂಕ್ಷನ್‌ನಿಂದ ಎಂಆರ್‌ಪಿಎಲ್, ಕಾನ, ಬಾಳ ಸಂಪರ್ಕಿಸುವ ಒಳ ರಸ್ತೆ ಇಲ್ಲಿಂದಲೇ ಆರಂಭವಾಗುತ್ತದೆ. ಇಲ್ಲಿನ ಸುತ್ತಮುತ್ತ ಕೈಗಾರಿಕೆ ಪ್ರದೇಶವಿದ್ದು, ಕಾರ್ಮಿಕರ, ಸಂಸ್ಥೆಗಳ ವಾಹನಗಳು ಅತ್ತಿಂದಿತ್ತ ಸಂಚರಿಸುತ್ತಿರುತ್ತವೆ. ಈ ಭಾಗದಲ್ಲಿ ಫ್ರೀ ಲೆಫ್ಟ್ ಸೇರಿ ಮತ್ತಷ್ಟು ಮೂಲ ಸೌಲಭ್ಯ ಕಲ್ಪಿಸುವ ಅಗತ್ಯವಿದೆ.
ಅಭಿವೃದ್ಧಿಗೆ ಆದ್ಯತೆ
ನಗರದ ನಾಲ್ಕು ಜಂಕ್ಷನ್‌ಗಳನ್ನು ಅಭಿವೃದ್ಧಿ ಪಡಿಸಲು ಪಾಲಿಕೆ ಮುಂದಾಗಿದೆ. ರಾಜ್ಯ ಸರಕಾರದ ಪ್ರೀಮಿಯಂ ಎಫ್. ಎ.ಆರ್. ನಿಧಿಯಲ್ಲಿ ಅಭಿವೃದ್ಧಿ ಹೊಂದಲಿದ್ದು, ಅಗತ್ಯ ಬಿದ್ದಲ್ಲಿ ಟ್ರಾಫಿಕ್ ಐಲ್ಯಾಂಡ್ ನಿರ್ಮಾಣ ಮಾಡುತ್ತೇವೆ. ಉಳಿದ ಅಗತ್ಯ ಕೆಲಸಗಳಿಗೂ ಆದ್ಯತೆ ನೀಡುತ್ತೇವೆ. ಇದರೊಂದಿಗೆ ಸುಗಮ ವಾಹನ ಸಂಚಾರಕ್ಕೆ ಆದ್ಯತೆ ನೀಡುತ್ತೇವೆ.
– ಪ್ರೇಮಾನಂದ ಶೆಟ್ಟಿ,
ಮನಪಾ ಮೇಯರ್
-ನವೀನ್ ಭಟ್ ಇಳಂತಿಲ