Advertisement

ಕೊರಟಗೆರೆಯಲ್ಲಿ ಮಾ.13 ರಂದು ಡಾ.ಜಿ.ಪರಮೇಶ್ವರ್ ಬೆಂಬಲಿತ ಒಕ್ಕಲಿಗರ ಸಮಾವೇಶ

07:32 PM Mar 11, 2023 | Team Udayavani |

ಕೊರಟಗೆರೆ: ಮಾ.13 ರಂದು ಕೊರಟಗೆರೆಯಲ್ಲಿ ಡಾ.ಜಿ.ಪರಮೇಶ್ವರವರ ಬೆಂಬಲಿತ ಒಕ್ಕಗಲಿಗರ ಸಮಾವೇಶ ಏರ್ಪಡಿಸಲಾಗಿದ್ದು ತಾಲೂಕಿನ ಎಲ್ಲಾ ಕಾಂಗ್ರೆಸ್ ಪಕ್ಷದ ಹಾಗೂ ಡಾ.ಜಿ.ಪರಮೇಶ್ವರ ರವರ ಬೆಂಬಲಿತ ಒಕ್ಕಗಲಿಗರು ಹಾಗೂ ಅಭಿಮಾನಿಗಳು ಸಮಾವೇಶಕ್ಕೆ ಹಾಜರಾಗುವಂತೆ ಮಾಜಿ ಜಿ.ಪಂ.ಸದಸ್ಯ ಪ್ರಸನ್ನಕುಮರ್ ಮನವಿ ಮಾಡಿದ್ದಾರೆ.

Advertisement

ಕೊರಟಗೆರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ಕೊರಟಗೆರೆ ವಿಧಾನ ಸಭಾ ಕ್ಷೇತ್ರದಲ್ಲಿ ಉತ್ತುಮವಾದ ಶಾಶ್ವತ ಅಭಿವೃದ್ದಿ ಕೆಲಸಗಳನ್ನು ಮಾಡಿರುವ ಡಾ.ಜಿ.ಪರಮೇಶ್ವರ ರವರನ್ನು ಬೆಂಬಲಿಸಿ ಮುಂದಿನ ತಿಂಗಳು ನಡೆಯುವ ವಿಧಾನ ಸಭಾ ಚುನಾವಣೆಯಲ್ಲಿ ಹೆಚ್ಚು ಮತಗಳ ಮೂಲಕ ಮತ್ತೆ ಆಯ್ಕೆ ಮಾಡಿ ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿ ಇನ್ನೂ ಹೆಚ್ಚು ಅಭಿವೃದ್ದಿ ಕೆಲಸಗಳನ್ನು ಮಾಡಿ ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿ ಮಾಡಿಸುವ ದೃಷ್ಠಿಯಿಂದ ಮಾ.13 ರಂದು ಸೋಮವಾರ 11 ಗಂಟೆಗೆ ಪಟ್ಟಣದ ಮಾರುತಿ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿರುವ ಸಮಾವೇಶಕ್ಕೆ ತಾಲೂಕಿನ ಎಲ್ಲಾ ಡಾ.ಜಿ.ಪರಮೇಶ್ವರ ಬೆಂಬಲಿತ ಒಕ್ಕಲಿಗರು ಹಾಗೂ ಅಭಿಮಾನಿಗಳು ಹಾಜರಾಗುವಂತೆ ಮವನಿ ಮಾಡಿದ್ದಾರೆ.

ಕಾಂಗ್ರೆಸ್ ಮುಖಂಡ ಗಟ್ಲಹಳ್ಳಿ ಕುಮಾರ್ ಮಾತನಾಡಿ ಕಳೆದ 5 ವರ್ಷಗಳಲ್ಲಿ ಕೊರಟಗೆರೆ ವಿಧಾನ ಸಭಾ ಕ್ಷೇತ್ರದಲ್ಲಿನ ಯುವಕರನ್ನು ಶೈಕ್ಷಣಿಕವಾಗಿ ಉತ್ತಮಗೊಳಿಸಲು ಕೋಟ್ಯಾಂತ ರೂಗಳ ವೆಚ್ಚದಲ್ಲಿ 7 ವಸತಿ ಶಾಲೆಗಳನ್ನು, ಕ್ಷೇತ್ರದ ಗ್ರಾಮೀಣ ಜನತೆಯ ಆರೋಗ್ಯ ಚಿಕಿತ್ಸೆಗಾಗಿ ಉನ್ನತ ಮಟ್ಟದ ಆಸ್ಪತ್ರೆಗಳನ್ನು ಹಾಗೂ ತೋವಿನಕೆರೆಯಲ್ಲಿ12 ಲಕ್ಷ ರೂ ವೆಚ್ಚದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಉನ್ನತಿಕರಿಸಲು ಮಂಜೂರಾತಿ ಮಾಡಿಸಲಾಗಿದೆ, ತಾಲೂಕಿನಲ್ಲಿ ರೈತರಿಗೆ ಉತ್ತಮ ವಿದ್ಯುತ್ ಸರಬರಾಜಿಗೆ ವಿದ್ಯುತ್ ಸ್ತಾವರಗಳನ್ನು ಸ್ಥಾಪನೆ ಮತ್ತು ಎಲ್ಲಾ ಗ್ರಾಮಗಳಲ್ಲಿ ಸಿಸಿ ರಸ್ತೆ ಸೇರಿದಂತೆ ಸುಮಾರು 2743 ಕೋಟಿ ರೂಗಳ ವೆಚ್ಚದಲ್ಲಿ ಪ್ರತಿ ಹಳ್ಳಿಯಲ್ಲೂ ಅವಶ್ಯಕತೆ ಇರುವ ಅಭಿವೃದ್ದಿ ಕಾಮಗಾರಿ ಮಾಡಿಸಲಾಗಿದ್ದು, ಇದರೊಂದಿಗೆ ಕೊರೋನಾ ಸಮಯದಲ್ಲಿ ತಮ್ಮ ಆಸ್ಪತ್ರೆಯಿಂದ ವ್ಯದ್ಯರುಗಳ ತಂಡವನ್ನು ರಚಿಸಿ ವೈದ್ಯರ ನಡೆ ಹಳ್ಳಿಯ ಕಡೆ ಎಂದು ಪ್ರತಿ ಗ್ರಾಮಗಳಿಗೂ ಕಳುಹಿಸಿ ಪ್ರತಿ ಮನೆಗೂ ಬೇಟಿ ನೀಡಿ ಚಿಕಿತ್ಸೆ ನೀಡಿದ ಅಭಿವೃದ್ದಿಯ ಹರಿಕಾರ ಎನ್ನಿಸಿಕೊಂಡಿರುವ ಡಾ.ಜಿ.ಪರಮೇಶ್ವರ ಮುಂದಿನ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳಿಸುವ ಮೂಲಕ ಮತ್ತೆ ಆಯ್ಕೆ ಮಾಡುಲು ಸಂಕಲ್ಪ ಮಾಡಲಾಗಿದ್ದು ಡಾ,ಜಿ.ಪರಮೇಶ್ವರ ಬೆಂಬಲಿತ ಹಾಗೂ ಅಭಿಮಾನಿ ಒಕ್ಕಲಿಗರ ಸಮಾವೇಶಕ್ಕೆ ಅತಿ ಹೆಚ್ಚು ಸಂಖ್ಯೆಯಲ್ಲಿ ಬಂದು ಬೆಂಬಲಿಸಬೇಕೆಂದು ಮನವಿ ಮಾಡಿದರು.

ಪತ್ರಿಕಾ ಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರುಗಳಾದ ರಾಮಚಂದ್ರಪ್ಪ, ಗಂಗಾಧರಪ್ಪ, ತಾ.ಪಂ.ಮಾಜಿ ಸದಸ್ಯ ರವಿಕುಮಾರ್, ಮುಖಂಡರುಗಳಾದ ವೆಂಕಟೇಶ್, ಪುಟ್ಟರಿಯಪ್ಪ, ಹನುಮಂತರಾಯಪ್ಪ, ದಾಸರಹಳ್ಳಿ ರಮೇಶ್, ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಜಯಮ್ಮ ಸೇರಿದಂತೆ ಇನ್ನಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next