Advertisement

ಇಬ್ಬಗೆ ನೀತಿ ಬಿಡಿ; ಕಿಡಿಗೇಡಿಗಳ ಶಿಕ್ಷಿಸಿ; ಪಾಕಿಸ್ತಾನ ವಿರುದ್ಧ ಕೇಂದ್ರದ ತರಾಟೆ

09:09 PM Nov 26, 2021 | Team Udayavani |

ಮುಂಬೈ/ನವದೆಹಲಿ: ಮುಂಬೈ ಮೇಲೆ ಭೀಕರ ಉಗ್ರರ ದಾಳಿ ನಡೆದು 13 ವರ್ಷಗಳು ಉರುಳಿದೆ. ಈ ಕುಕೃತ್ಯದಲ್ಲಿ ಭಾಗಿಯಾಗಿದ್ದ ಉಗ್ರರ ಮೇಲೆ ಪಾಕಿಸ್ತಾನದಲ್ಲಿ ನಡೆಯುತ್ತಿರುವ ವಿಚಾರಣೆಗಳು ಇನ್ನೂ ನಿರ್ಣಾಯ ಹಂತ ತಲುಪದೇ ಇದ್ದ ಬಗ್ಗೆ ಕೇಂದ್ರ ಸರ್ಕಾರ ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡಿದೆ.

Advertisement

ಈ ಬಗ್ಗೆ ನವದೆಹಲಿಯಲ್ಲಿರುವ ಪಾಕಿಸ್ತಾನದ ರಾಯಭಾರ ಕಚೇರಿಗೆ ಕಟು ಶಬ್ದಗಳಿಂದ ಖಂಡಿಸಲಾಗಿರುವ ಪತ್ರ ಹಸ್ತಾಂತರಿಸಲಾಗಿದೆ.

“ಮುಂಬೈ ದಾಳಿಯ ವಿಚಾರದಲ್ಲಿ ಇಬ್ಬಗೆಯ ನೀತಿಯನ್ನು ಅನುಸರಿಸುವುದನ್ನು ಬಿಡಿ. ಉಗ್ರರ ದಾಳಿ ನಡೆದು 13 ವರ್ಷಗಳಾದರೂ ಇನ್ನೂ ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮ ಜಾರಿಗೊಳ್ಳದೇ ಇರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಮುಂಬೈ ದಾಳಿಯಲ್ಲಿ ಬಲಿಯಾದ ತಮ್ಮವರ ಸಾವಿಗೆ ನ್ಯಾಯ ಸಿಗಬೇಕೆಂದು ಜಗತ್ತಿನ 15 ದೇಶಗಳ 166 ಕುಟುಂಬಗಳು ಕಾಯುತ್ತಿವೆ’ ಎಂದು ಆಕ್ಷೇಪಿಸಲಾಗಿದೆ.

ಗಾಯಗಳನ್ನು ಮರೆಯಲ್ಲ: ಮೋದಿ
ಮುಂಬೈ ದಾಳಿಯಿಂದ ಭಾರತದ ಅಸ್ಮಿತೆಯ ಮೇಲಾಗಿರುವ ಗಾಯಗಳನ್ನು ಭಾರತೀಯರು ಎಂದಿಂಗೂ ಮರೆಯಲಾರರು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಇದನ್ನೂ ಓದಿ:ಆನ್‌ಲೈನ್‌ ಅಟೋಸೇವೆಗೆ ಶೇ.5 ಜಿಎಸ್‌ಟಿ

Advertisement

ಣ್ಯರು, ಸಾರ್ವಜನಿಕರ ಶ್ರದ್ಧಾಂಜಲಿ
ಮುಂಬೈ ದಾಳಿಗೆ 13 ವರ್ಷ ತುಂಬಿದ ಹಿನ್ನೆಲೆಯಲ್ಲಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಮಹಾರಾಷ್ಟ್ರ ರಾಜ್ಯಪಾಲ ಭಗತ್‌ ಸಿಂಗ್‌ ಕೋಶಿಯಾರಿ, ಮಹಾರಾಷ್ಟ್ರ ಸಿಎಂ ಉದ್ಧವ್‌ ಠಾಕ್ರೆ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸೇರಿದಂತೆ ವಿವಿಧ ಗಣ್ಯರು, ಘಟನೆಯಲ್ಲಿ ಮಡಿದವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಹಲವಾರು ಜನರು, ದಾಳಿ ನಡೆದಿದ್ದ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್‌ ಟರ್ಮಿನಸ್‌, ಓಬೆರಾಯ್‌ ಟ್ರೈಡೆಂಟ್‌, ತಾಜ್‌ ಮಹಲ್‌ ಹೋಟೆಲ್‌, ಗೇಟ್‌ವೇ ಆಫ್ ಇಂಡಿಯಾ ಮುಂತಾದೆಡೆ ಹೂವುಗಳ ತಂದು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಇಸ್ರೇಲ್‌ನಲ್ಲಿರುವ ಭಾರತೀಯರು, ಮುಂಬೈ ದಾಳಿಯಲ್ಲಿ ಮೃತರಾದವರಿಗೆ ಶ್ರದ್ಧಾಂಜಲಿ ಸಲ್ಲಿಸಿ, ಪಾಕಿಸ್ತಾನವು, ಈ ದಾಳಿಯ ರೂವಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next