Advertisement
ಫೆ. 4 ರಂದು ವಿರಾರ್ ಪಶ್ಚಿಮದ ಹಳೆ ವಿವಾ ಕಾಲೇಜು ಸಭಾಗೃಹದಲ್ಲಿ ವಿರಾರ್ ನಲಸೋಪರ ಕರ್ನಾಟಕ ಸಂಸ್ಥೆಯ 13ನೇ ವಾರ್ಷಿಕೋತ್ಸವ, ಸಮ್ಮಾನ, ಸಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದ ಇವರು, ವೈಯಕ್ತಿಕವಾಗಿ ಸಾಧ್ಯವಾಗದ ಕಾರ್ಯ ಸಂಘಟನೆಯಿಂದ ಪೂರ್ಣಗೊಳಿಸಬಹುದು ಎಂಬುವುದಕ್ಕೆ ಇಂದಿನ ದಟ್ಟ ಜನ ಸಂದಣಿಯ ತುಳು-ಕನ್ನಡಿಗರು ಸಾಭೀತುಪಡಿಸಿದ್ದಾರೆ. ನಿಮ್ಮ ಯಾವುದೇ ಕಷ್ಟ ಕಾರ್ಪಣ್ಯಗಳಿಗೆ ಜತೆ ನಿಂತು ಸಹಕರಿಸುತ್ತೇನೆ ಎಂದರು.
ಇದೇ ಸಂದರ್ಭದಲ್ಲಿ ವಸಾಯಿ-ವಿರಾರ್ ನಗರ ಪಾಲಿಕೆಯ ಮೇಯರ್ ರೂಪೇಶ್ ಜಾಧವ್, ಸಂಸ್ಥೆಯ ಮಾಜಿ ಕಾರ್ಯಾಧ್ಯಕ್ಷೆಯರಾದ ಶುಭಾ ಸತೀಶ್ ಶೆಟ್ಟಿ, ಸಹನಿ ವಾಮನ್ ಶೆಟ್ಟಿ ಅವರನ್ನು ವೇದಿಕೆಯ ಗಣ್ಯರು ಸಮ್ಮಾನಿಸಿದರು.
ಸಮಾಜ ಸೇವಕ ರಾಜೀವಿ ನಾನಾ ಪಾಟೀಲ್ ಮಾತನಾಡಿ, ಸಾಂಸ್ಕೃತಿಕ ಚಟುವಟಿಕೆಯೊಂದಿಗೆ ರಾಷ್ಟ್ರೀಯ ಹಬ್ಬಗಳನ್ನು ಆಚರಿಸಬೇಕು. ಮನೆ, ಕಚೇರಿ ಹಾಗೂ ಹೊಟೇಲ್‌ಗಳನ್ನು ಶುಚಿಗೊಳಿಸುವಂತೆ ಹಾಗೂ ಪರಿಸರದ ನೈರ್ಮಲ್ಯದ ಬಗ್ಗೆ ಗಮನ ನೀಡುವಂತೆ ವಿನಂತಿಸಿದರು.
Related Articles
Advertisement
ಸಾಂಸ್ಕೃತಿಕ ಕಾರ್ಯಕ್ರಮವಾಗಿ ಸ್ಥಳೀಯ ಮಕ್ಕಳಿಂದ ನೃತ್ಯ ವೈಭವ, ಮಹಿಳಾ ಸದಸ್ಯೆಯರಿಂದ ಕಿರು ನಾಟಕ, ನಾದ ಲಹರಿ ಹೇಮಚಂದ್ರ ಎರ್ಮಾಳ್ ತಂಡದವರಿಂದ ಭಕ್ತಿ ರಸಮಂಜರಿ, ಸದಸ್ಯರುಗಳಿಂದ ಲೇಖಕ ನಾಗರಾಜ ಗುರುಪುರ ರಚಿಸಿರುವ ಎಂಕ್ ಪುರ್ಸೊತ್ತಿಜ್ಜಿ ತುಳು ನಾಟಕವು ರಹೀಂ ಸಚ್ಚರೀಪೇಟೆ ಅವರ ನಿರ್ದೇಶನದಲ್ಲಿ ಪ್ರದರ್ಶನಗೊಂಡಿತು. ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.
ಸಾಂಪ್ರದಾಯಿಕ ಮೌಲ್ಯಗಳಿಂದ ಕೂಡಿದ, ಸಂಘಟನಾತ್ಮಕ ವಾತಾವರಣದಲ್ಲಿ ನಮ್ಮ ಸಂಸ್ಥೆಯ 13 ವರ್ಷ ಯಶಸ್ವಿಯಾಗಿ ಪೂರೈಸಿದೆ. ಶೈಕ್ಷಣಿಕ, ವೈದ್ಯಕೀಯ, ಆರ್ಥಿಕ, ಸಾಂಸ್ಕೃತಿಕವಾಗಿ ಸಹಾಯ ಯಾಚಿಸಿದವರಿಗೆ ನೆರವು ನೀಡಿ ಸಹಕರಿಸಿದೆ. ಗೌರವಾಧ್ಯಕ್ಷ ವಿರಾರ್ ಶಂಕರ್ ಶೆಟ್ಟಿ, ಮಾಜಿ ಅಧ್ಯಕ್ಷರುಗಳಾದ ಜಗನ್ನಾಥ ರೈ, ಲಯನ್ ಶಂಕರ್ ಕೆ. ಟಿ. ಅವರ ಸಲಹೆ-ಸೂಚನೆಯೊಂದಿಗೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದ್ದೇನೆ. ಕಾರ್ಯಕಾರಿ ಸಮಿತಿಯ ಸದಸ್ಯರು, ಮಹಿಳಾ ವಿಭಾಗ, ಶಿಕ್ಷಣ ಸಮಿತಿ, ಯುವ ವಿಭಾಗ, ಪೂಜಾ ಸಮಿತಿ, ನಿಧಿ ಸಂಗ್ರಹ ಸಮಿತಿಯವರ ಅವಿಶ್ರಾಂತ ಶ್ರಮ ಹಾಗೂ ತುಳು-ಕನ್ನಡಿಗರ ಸಹಕಾರಕ್ಕೆ ಮನದಾಳದ ಕೃತಜ್ಞತೆಗಳು – ಸದಾಶಿವ ಎ. ಕರ್ಕೇರ (ಅಧ್ಯಕ್ಷರು : ವಿರಾರ್-ನಲಸೋಪರ ಕರ್ನಾಟಕ ಸಂಸ್ಥೆ). ಸಂಸ್ಥೆಯ ಗೌರವಾಧ್ಯಕ್ಷ ವಿರಾರ್ ಶಂಕರ್ ಶೆಟ್ಟಿ ಅವರ ಮಾರ್ಗದರ್ಶನ ಹಾಗೂ ಸಲಹೆಯಿಂದ ನಗರ ಸೇವಕನಾಗಿ ಚುನಾಯಿತನಾದೆ. ಅವರು ಸಂಘ-ಸಂಸ್ಥೆಗಳಿಗೆ ನೀಡಿದ ಕೊಡುಗೆ ಅಪಾರವಾಗಿದ್ದು, ಅನುಭವ, ಪ್ರೇರಣೆ, ಸಂಸ್ಕಾರಗಳಿಂದ ನಮ್ಮಲ್ಲಿ ಸಾಮಾಜಿಕ ಪ್ರಜ್ಞೆ ಜಾಗೃತಗೊಳ್ಳುತ್ತದೆ. ಬಿಡುವಿನ ಸಮಯವನ್ನು ಸಾಮಾಜಿಕ ಚಟುವಟಿಕೆಗಳಿಗೆ ಮೀಸಲಿಟ್ಟು ಸಂಘಟನೆಯನ್ನು ಬಲಪಡಿಸಬೇಕು
– ಅರವಿಂದ ಶೆಟ್ಟಿ (ನಗರ ಸೇವಕರು: ಮೀರಾ-ಭಾಯಂದರ್
ಮಹಾನಗರ ಪಾಲಿಕೆ). ಚಿತ್ರ-ವರದಿ : ರಮೇಶ್ ಅಮೀನ್