Advertisement

ಕೋವಿಡ್:ರಾಜ್ಯದಲ್ಲಿಂದು 3204 ಸೋಂಕಿತರು ಗುಣಮುಖ;1386 ಹೊಸ ಪ್ರಕರಣ ಪತ್ತೆ

07:14 PM Jul 12, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳ ಅವಧಿ( ದಿನಾಂಕ: 11.07.2021, 00:00 ರಿಂದ 23:59 ರವರೆಗೆ)ಯಲ್ಲಿ ಹೊಸದಾಗಿ 1386 ಕೋವಿಡ್ ಹೊಸ ಪ್ರಕರಣಗಳು ವರದಿಯಾಗಿವೆ ಹಾಗೂ 61 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು ( ಜುಲೈ 12) ಸಂಜೆ ಬಿಡುಗಡೆ ಮಾಡಿರುವ ವರದಿಗಳು ತಿಳಿಸಿವೆ.

Advertisement

ಮೇಲೆ ತಿಳಿಸಿದ ಕಾಲಾವಧಿಯಲ್ಲಿ 3204 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ಇದುವರೆಗೆ ರಾಜ್ಯದಲ್ಲಿ ಸೋಂಕಿನಿಂದ ಗುಣಮುಖದಾವರ ಸಂಖ್ಯೆ 2801907ಕ್ಕೆ ತಲುಪಿದೆ.

ಜಿಲ್ಲಾವಾರು ಪ್ರಕರಣಗಳ ಸಂಖ್ಯೆ :

ಬಾಗಲಕೋಟೆ-3, ಬಳ್ಳಾರಿ-10, ಬೆಳಗಾವಿ-32, ಬೆಂಗಳೂರು ‍ಗ್ರಾಮಾಂತರ-47, ಬೆಂಗಳೂರು ನಗರ-319, ಬೀದರ್-5, ಚಾಮರಾಜನಗರ-24,  ಚಿಕ್ಕಬಳ್ಳಾಪುರ-9, ಚಿಕ್ಕಮಗಳೂರು-46, ಚಿತ್ರದುರ್ಗ-13,  ದಕ್ಷಿಣ ಕನ್ನಡ-126, ದಾವಣಗೆರೆ-15, ಗದಗ-5, ಹಾಸನ-108, ಹಾವೇರಿ-5, ಕಲಬುರಗಿ-16, ಕೊಡಗು-73, ಕೋಲಾರ-31, ಕೊಪ್ಪಳ-3, ಮಂಡ್ಯ-44, ಮೈಸೂರು-177, ರಾಯಚೂರು-1, ರಾಮನಗರ-14,  ಶಿವಮೊಗ್ಗ-68, ತುಮಕೂರು-69, ಉಡುಪಿ-66, ಉತ್ತರ ಕನ್ನಡ-32, ವಿಜಯಪುರ-4, ಯಾದಗಿರಿ-5.

Advertisement

Udayavani is now on Telegram. Click here to join our channel and stay updated with the latest news.

Next