ಕೋಲಾರ: ಜಿಲ್ಲೆಯಲ್ಲಿ ಭಾನುವಾರ ಹೊಸದಾಗಿ 49 ಕೋವಿಡ್-19 ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಇದರಿಂದ ಒಟ್ಟು ಪ್ರಕರಣಗಳ ಸಂಖ್ಯೆ 1409 ಕ್ಕೆ ಏರಿದೆ. ಜತೆಗೆ ಭಾನುವಾರ ಒಂದೇ ದಿನ ದಾಖಲೆಯ 135 ಮಂದಿ ಗುಣಮುಖರಾಗಿ ಬಿಡುಗಡೆಯಾಗಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.
ಹೊಸದಾಗಿ ಪಾಸಿಟಿವ್ ಬಂದಿರುವ ಎಲ್ಲರೂ ಜಿಲ್ಲಾಸ್ಪತ್ರೆ ಮತ್ತು ಜಾಲಪ್ಪ ಆಸ್ಪತ್ರೆ ಹಾಗೂ ತಾಲೂಕು ಕೇಂದ್ರಗಳಲ್ಲಿ ಆರಂಭವಾಗಿರುವ ಹಾಸ್ಟೆಲ್ ಕಟ್ಟಡಗಳಲ್ಲಿ ದಾಖಲಾಗಿದ್ದು, ಎಲ್ಲರ ಆರೋಗ್ಯವೂ ಸ್ಥಿರವಾಗಿದೆ.
ಬಿಡುಗಡೆಯಾದವರು 701: ಕೋಲಾರ ತಾಲೂಕಿನಲ್ಲಿ 18, ಮಾಲೂರು 19, ಬಂಗಾರಪೇಟೆ 3, ಕೆಜಿಎಫ್‌ನಲ್ಲಿ 1, ಮುಳಬಾಗಿಲಿನಲ್ಲಿ 4 ಹಾಗೂ ಶ್ರೀನಿವಾಸಪುರದಲ್ಲಿ 4 ಪಾಸಿಟಿವ್ ಪ್ರಕರಣ ವರದಿಯಾಗಿದೆ. ಇದುವರೆಗೆ ಒಟ್ಟು ಬಿಡುಗಡೆಯಾದವರ ಸಂಖ್ಯೆ 701 ಆಗಿದೆ. ಕೋಲಾರ ತಾಲೂಕಿನಿಂದ 53, ಮಾಲೂರು 24, ಬಂಗಾರಪೇಟೆ 15, ಕೆಜಿಎಫ್‌ನಿಂದ 20, ಮುಳಬಾಗಿಲಿನಿಂದ 10, ಶ್ರೀನಿವಾಸಪುರದಿಂದ 13 ಮಂದಿ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ.
ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 683 ಆಗಿದೆ. ತುರ್ತು ನಿಗಾ ಘಟಕದಲ್ಲಿ 24 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಭಾನುವಾರ ಸಾವಿನ ಪ್ರಕರಣ ವರದಿಯಾಗಿಲ್ಲ. ಒಟ್ಟು ಈವರೆಗೂ ಸತ್ತವರ ಸಂಖ್ಯೆ 25ಆಗಿದೆ. ಜಿಲ್ಲೆಯಲ್ಲಿ ಈಗ ಪ್ರಸ್ತುತ 12,751 ಮಂದಿಯನ್ನು ನಿಗಾವಣೆಯಲ್ಲಿ ಇಡಲಾಗಿದೆ. ಈವರೆಗೂ ಜಿಲ್ಲೆಯಲ್ಲಿ25,754 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, 24165 ಮಾದರಿಗಳು ನೆಗೆಟಿವ್ ಎಂದು ವರದಿಯಾಗಿದೆ.