Advertisement
ಮೋದಿ ಸಿನೆಮಾಗೆ ತಡೆ ಆದೇಶ ನೀಡಲಾಗದುಪ್ರಧಾನಿ ಮೋದಿ ಜೀವನಚರಿತ್ರೆ ಆಧಾರಿತ “ಪಿಎಂ ನರೇಂದ್ರ ಮೋದಿ’ ಸಿನೆಮಾ ಬಿಡುಗಡೆಗೆ ಸದ್ಯಕ್ಕೆ ತಡೆ ತರಲಾಗದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ಸಿನೆಮಾಗೆ ಇನ್ನೂ ಸಿಬಿಎಫ್ಸಿ ಪ್ರಮಾಣಪತ್ರ ನೀಡಿಲ್ಲ. ಹೀಗಾಗಿ ಈಗಲೇ ಚಿತ್ರಕ್ಕೆ ತಡೆ ತಂದು ಆದೇಶ ಹೊರಡಿಸಲಿಕ್ಕಾಗು ವುದಿಲ್ಲ. ಮಂಗಳವಾರದ ವಿಚಾರಣೆ ವೇಳೆ, ಸಿನೆಮಾದಲ್ಲಿನ ಆಕ್ಷೇಪಾರ್ಹ ಅಂಶಗಳ ಬಗ್ಗೆ ಅರ್ಜಿದಾರರು ನಮ್ಮ ಗಮನಕ್ಕೆ ತಂದರೆ ಆಗ ಆದೇಶ ಹೊರಡಿಸುವ ಕುರಿತು ಚಿಂತನೆ ನಡೆ ಸುತ್ತೇವೆ ಎಂದು ಸಿಜೆಐ ರಂಜನ್ ಗೊಗೋಯ್ ಹೇಳಿದ್ದಾರೆ. ಇದೇ ವೇಳೆ, ಸಿನೆಮಾದ ಪ್ರತಿಯನ್ನು ನೀಡಬೇಕೆಂಬ ಅರ್ಜಿದಾರರ ಕೋರಿಕೆಯನ್ನೂ ಕೋರ್ಟ್ ತಿರಸ್ಕರಿಸಿತು.
ಮಧ್ಯಪ್ರದೇಶ ಸಿಎಂ ಕಮಲ್‌ನಾಥ್ ಆಪ್ತರ ಮನೆ, ನಿವಾಸಗಳ ಮೇಲಿನ ಐಟಿ ದಾಳಿ ಸೋಮವಾರವೂ ಮುಂದುವರಿದಿದೆ. ಚುನಾವಣೆ ಸಮಯ ದಲ್ಲಿ ತೆರಿಗೆ ತಪ್ಪಿಸುವಿಕೆ ಹಾಗೂ ಹವಾಲಾ ವ್ಯವಹಾರಗಳ ಆರೋಪ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಾಳಿ ಸಂದರ್ಭದಲ್ಲಿ ಲೆಕ್ಕ ಸಿಗದ 14.6 ಕೋಟಿ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಐಟಿ ಇಲಾಖೆ ಹೇಳಿದೆ. ಇದೇ ವೇಳೆ, ದಾಳಿ ಕುರಿತು ನಮಗೆ ಐಟಿ ಇಲಾಖೆಯಿಂದ ಯಾವುದೇ ಮಾಹಿತಿ ಬಂದಿರಲಿಲ್ಲ ಎಂದು ಮಧ್ಯಪ್ರದೇಶ ಮುಖ್ಯ ಚುನಾವಣಾ ಅಧಿಕಾರಿ ತಿಳಿಸಿದ್ದಾರೆ. ಅಲ್ಲದೆ, ಈ ಕುರಿತು ಚುನಾ ವಣಾ ಆಯೋಗದ ಗಮನಕ್ಕೆ ತಂದಿದ್ದೇನೆ ಎಂದೂ ಅವರು ಹೇಳಿದ್ದಾರೆ. ಕುದುರೆ ಏರಿ ಬಂದ ಮದುಮಗನ ನಾಮಪತ್ರ!
ಆತ ಶೆರ್ವಾನಿ ಧರಿಸಿಕೊಂಡು, ತಲೆಗೊಂದು ಟರ್ಬನ್ ಸುತ್ತಿಕೊಂಡು, ಕುದುರೆ ಏರಿ ಬಂದಿದ್ದ. ಅವನ ಸುತ್ತಲೂ ನೂರಾರು ಜನರು ಬಾಲಿವುಡ್ ಹಾಡಿಗೆ ಹೆಜ್ಜೆ ಹಾಕುತ್ತಾ ಕುಣಿದು ಕುಪ್ಪಳಿಸುತ್ತಿದ್ದರು. ಈ “ಮದುಮಗ’ ಮೆರವಣಿಗೆ ಮೂಲಕ ತೆರಳಿದ್ದು ಕಲ್ಯಾಣ ಮಂಟಪಕ್ಕಲ್ಲ, ಬದಲಿಗೆ ನಾಮಪತ್ರ ಸಲ್ಲಿಕೆಗೆ! ಉತ್ತರಪ್ರದೇಶದ ಶಹಜಹಾನ್‌ಪುರದಲ್ಲಿ ಸಂಯುಕ್¤ ವಿಕಾಸ್ ಪಕ್ಷದಿಂದ ಕಣಕ್ಕಿಳಿದಿರುವ ಅಭ್ಯರ್ಥಿ ವೈಧ್ ರಾಜ್‌ಕಿಶನ್ ವಿಶಿಷ್ಟ ರೀತಿಯಲ್ಲಿ ಬಂದು ಉಮೇದುವಾರಿಕೆ ಸಲ್ಲಿಸಿದ್ದಾರೆ. ಈ ಬಗ್ಗೆ ಪ್ರಶ್ನಿಸಿದಾಗ, “ಇವತ್ತು ನನ್ನ ವಿವಾಹ ವಾರ್ಷಿಕೋತ್ಸವ. ಹಾಗಾಗಿ “ನಾನು ರಾಜನೀತಿಯ ಅಳಿಯ’ನೆಂದು ಪರಿಗಣಿಸಿಕೊಂಡು ಮದುಮಗನ ವೇಷ ಧರಿಸಿಕೊಂಡು ಬಂದು ನಾಮಪತ್ರ ಸಲ್ಲಿಸಿದೆ’ ಎಂದಿದ್ದಾರೆ.
Related Articles
ಕೇಂದ್ರ ಸರಕಾರದ ಯೋಜನೆಗಳು ಮತ್ತು ಆಡಳಿತ ಪಕ್ಷದ ನಾಯಕರನ್ನು ಹೊಗಳುವ ಮೂಲಕ ನೀತಿ ಸಂಹಿತೆಯನ್ನು ಎರಡು ಖಾಸಗಿ ಸುದ್ದಿ ವಾಹಿನಿಗಳು ಉಲ್ಲಂ ಸುತ್ತಿವೆ ಎಂದು ಆರೋಪಿಸಿರುವ ಕಾಂಗ್ರೆಸ್, ಈ ಚಾನೆಲ್‌ಗಳನ್ನು ನಿಷೇಧಿಸಬೇಕು ಎಂದು ಸೋಮವಾರ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಮಹಾರಾಷ್ಟ್ರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಚಿನ್ ಸಾವಂತ್ ನೇತೃತ್ವದ ನಿಯೋಗ ಈ ಸಂಬಂಧ ದೂರು ನೀಡಿದೆ. ಅಲ್ಲದೆ, ಟಿವಿ ಸೀರಿಯಲ್‌ಗಳನ್ನು ಬಳಸಿಕೊಂಡು ಬಿಜೆಪಿ ನಾಯಕರ ಪ್ರಚಾರ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಆರೋಪಕ್ಕೆ ಸಂಬಂಧಿಸಿದಂತೆ ಎರಡು ಧಾರಾವಾಹಿಗಳ ದೃಶ್ಯದ ತುಣುಕುಗಳನ್ನೂ ಅವರು ನೀಡಿದ್ದಾರೆ.
Advertisement
ಪರೀಕ್ಷಾ ಶುಲ್ಕ ರದ್ದು: ರಾಹುಲ್ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದರೆ, ಸರಕಾರಿ ಹುದ್ದೆಗಳಿಗೆ ನಡೆಯುವ ಪರೀಕ್ಷಾ ಶುಲ್ಕ ರದ್ದು ಮಾಡಲಾಗುವುದು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ಗಾಂಧಿ ಆಶ್ವಾಸನೆ ನೀಡಿದ್ದಾರೆ. ಜತೆಗೆ, ಕಾಂಗ್ರೆಸ್ ಸರಕಾರವು ಆರೋಗ್ಯಸೇವೆ ಹಕ್ಕು ಕಾಯ್ದೆ ಜಾರಿ ಮಾಡುವ ಮೂಲಕ, ಪ್ರತಿ ಯೊಬ್ಬ ನಾಗರಿಕನಿಗೂ ಆರೋಗ್ಯಸೇವೆಯನ್ನು ಕಡ್ಡಾಯವಾಗಿ ಒದಗಿಸಲಾ ಗುವುದು. ಆರೋಗ್ಯಸೇವೆಗೆ ಮಾಡಲಾಗುವ ವೆಚ್ಚವನ್ನು ಜಿಡಿಪಿಯ ಶೇ.3ಕ್ಕೇರಿಸ ಲಾಗುವುದು ಎಂದೂ ಫೇಸ್‌ಬುಕ್ ಪೋಸ್ಟ್‌ನಲ್ಲಿ ರಾಹುಲ್ ಹೇಳಿದ್ದಾರೆ. ನಾಮಪತ್ರ ವಾಪಸ್: ಪಾಟಿದಾರ್ ಅನಾಮತ್ ಆಂದೋಲನ್ ಸಮಿತಿ ನಾಯಕ ದಿಲೀಪ್ ಸಬಾ ಅವರು ಹೈಪ್ರೊಫೈಲ್ ಗಾಂಧಿನಗರ ಕ್ಷೇತ್ರದಲ್ಲಿ ಸಲ್ಲಿಸಿದ್ದ ನಾಮಪತ್ರವನ್ನು ಸೋಮವಾರ ವಾಪಸ್ ಪಡೆದಿದ್ದಾರೆ. ಬಿಜೆಪಿ ಹಿರಿಯ ನಾಯಕ ಆಡ್ವಾಣಿ ಪ್ರತಿನಿಧಿಸುತ್ತಿದ್ದ ಈ ಕ್ಷೇತ್ರದಲ್ಲಿ ಈ ಬಾರಿ ಅಮಿತ್ ಶಾ ಕಣಕ್ಕಿಳಿದಿದ್ದಾರೆ. ಬಿಜೆಪಿ ವಿರೋಧಿ ಮತಗಳನ್ನು ವಿಭಜನೆ ಮಾಡಿದೆ ಎಂಬ ಆರೋಪ ನನ್ನ ಮೇಲೆ ಬರುವುದು ಬೇಡ ಎಂಬ ಕಾರಣಕ್ಕೆ ನಾಮಪತ್ರ ವಾಪಸ್ ಪಡೆದಿದ್ದಾಗಿ ಸಬಾ ಹೇಳಿದ್ದಾರೆ. ಇಲ್ಲಿ ಕಾಂಗ್ರೆಸ್‌ನಿಂದ ಶಾಸಕ ಸಿ.ಜೆ. ಚಾವಡಾ ಸ್ಪರ್ಧಿಸುತ್ತಿದ್ದಾರೆ. ಮೋದಿ ಡಕಾಯಿತ ಎಂದ ಮಮತಾ
ಚುನಾವಣಾ ಕ್ಯಾಂಪೇನ್ ದಿನದಿಂದ ದಿನಕ್ಕೆ ತುರುಸುಗೊಳ್ಳುತ್ತಿದ್ದಂತೆಯೇ, ಆರೋಪ ಗಳ ಸುರಿಮಳೆಯೂ ಆಗುತ್ತಿದೆ. ಸೋಮವಾರ ಪ್ರಧಾನಿ ನರೇಂದ್ರ ಮೋದಿಯ ವಿರುದ್ಧ ಪಶ್ಚಿಮ ಬಂಗಾಲ ಸಿಎಂ ಮಮತಾ ಬ್ಯಾನರ್ಜಿ ಭಾರೀ ವಾಗ್ಧಾಳಿ ನಡೆಸಿದ್ದು, ಫ್ಯಾಸಿಸ್ಟ್, ಸುಳ್ಳುಗಾರ ಹಾಗೂ ಡಕಾಯಿತ ಮೋದಿಯನ್ನು ಅಧಿಕಾರದಿಂದ ಕೆಳಗಿಳಿಸಲು ಪಶ್ಚಿಮ ಬಂಗಾಲ ಮಹತ್ವದ ಪಾತ್ರ ವಹಿಸಲಿದೆ ಎಂದಿದ್ದಾರೆ. ಅಲ್ಲದೆ, ಅಧಿಕಾರ ಹಾಗೂ ರಾಜಕೀಯ ದಿಂದ ಅವರನ್ನು ಒಧ್ದೋಡಿಸಬೇಕು. ಸುಳ್ಳು ಹೇಳದಂತೆ ಅವರ ಬಾಯಿಗೆ ಟೇಪ್ ಹಚ್ಚಬೇಕು ಎಂದೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ, ಇದು ಮಮತಾ ಅವರ ಹತಾಶೆಯನ್ನು ಪ್ರದರ್ಶಿಸುತ್ತಿದೆ. ಜನರು ಚುನಾವಣೆಯಲ್ಲಿ ಸೂಕ್ತ ರೀತಿಯಲ್ಲಿ ಪ್ರತಿಕ್ರಿಯಿಸಲಿದ್ದಾರೆ ಎಂದಿದೆ.