ಬೆಂಗಳೂರು : ಪೋಷಕರೇ ಎಚ್ಚರ..! ನಿಮ್ಮ ಹದಿಹರೆಯಕ್ಕೆ ಕಾಲಿಟ್ಟ ಮಕ್ಕಳಿಗೆ ಸ್ಮಾರ್ಟ್‌ಪೋನ್ ನೀಡಿದ್ದೀರಾ ? ಇಂಟರ್ನೆಟ್ ಹಾಕಿ ಕೊಟ್ಟಿದ್ದೀರಾ? ಫೇಸುಬುಕ್,ವಾಟ್ಸಾಪ್ ಬಳಸುತ್ತಿದ್ದಾರಾ? ಹೌದು ಎಂದಾದಲ್ಲಿ ನೀವು ಅಗತ್ಯವಾಗಿ ಎಚ್ಚರ ವಹಿಸುವುದು ಅಗತ್ಯ. ಹದಿ ಹರೆಯಕ್ಕೆ ಕಾಲಿಟ್ಟ ಮಗನಿಗೆ ಮೊಬೈಲ್ ಕೊಟ್ಟು ಬೆಂಗಳೂರಿನ ದಂಪತಿಗಳಿಬ್ಬರು ತಮ್ಮ ಮಾನವನ್ನು ಹರಾಜು ಮಾಡಿಕೊಂಡಂತಾಗಿದೆ.
ಮೊಬೈಲ್‌ನಲ್ಲಿ ಮುಳುಗಿ ಹೋಗಿದ್ದ 13 ವರ್ಷದ ಬಾಲಕನೊಬ್ಬ ತನ್ನ ವಯಸ್ಸಿಗೆ ಮೀರಿದ ಕೆಲಸ ಮಾಡಿದ್ದು, ತಂದೆ ತಾಯಿಯ ಖಾಸಗಿ ಕ್ಷಣದ ವಿಡಿಯೋವನ್ನು ಚಿತ್ರೀಕರಿಸಿ ಸ್ನೇಹಿತನಿಗೆ ಕಳುಹಿಸಿ ಇದೀಗ ಪೇಚಿಗೆ ತಂದಿಟ್ಟಿದ್ದಾನೆ.
ದಿನದ 10 ಗಂಟೆಗೂ ಹೆಚ್ಚು ಕಾಲ ಫೇಸ್‌ಬುಕ್ , ವಾಟ್ಸಾಪ್‌ನಲ್ಲಿ ಮಗ್ನನಾಗಿರುತ್ತಿದ್ದ ಬಾಲಕನಿಗೆ ಫೇಸ್‌ಬುಕ್‌ನಲ್ಲಿ ತೇಜಲ್ ಪಟೇಲ್ ಎಂಬ ಯುವಕ ಸ್ನೇಹಿತನಾಗಿದ್ದ. ಅಶ್ಲೀಲ ಸಂಭಾಷಣೆ, ಅಶ್ಲೀಲ ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದ ತೇಜಲ್ ಮೊದಲು ಬಾಲಕನ ಅಶ್ಲೀಲ ಚಿತ್ರಗಳನ್ನು ಕಳುಹಿಸಲು ಹೇಳಿದ್ದಾನೆ. ಬಳಿಕ ಮನೆಯವರ ನಗ್ನ ಚಿತ್ರಗಳನ್ನು ಕಳುಹಿಸಲು ಹೇಳಿದ್ದು ,ತೇಜಲ್ ಪ್ರಚೋದನೆಯಂತೆ ತಂದೆ ತಾಯಿಯ ಖಾಸಗಿ ಕ್ಷಣದ ವಿಡಿಯೋವನ್ನೇ ಚಿತ್ರೀಕರಿಸಿ ಕಳುಹಿಸಿದ್ದಾನೆ.
ವಿಡಿಯೋ ಸಿಕ್ಕಿದ ಕೂಡಲೇ ತೇಜಲ್ ಮನೆಯವರ ನಂಬರ್ ಪಡೆದು ವಿಡಿಯೋ ಸಿಕ್ಕಿದೆ 1 ಕೋಟಿ ರೂಪಾಯಿ ನೀಡಿ ,ಇಲ್ಲವಾದಲ್ಲಿ ವೈರಲ್ ಆಗುವಂತೆ ಮಾಡುತ್ತೇನೆ ಎಂದು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾನೆ.
ಈ ಸಂಬಂಧ ದಂಪತಿ ಮೇ 24 ರಂದು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದು , ಇದೊಂದು ಅಚ್ಚರಿಯ ಪ್ರಕರಣವಾದುದರಿಂದ ಪೊಲೀಸರೂ ಶಾಕ್ ಆದರು. ಪ್ರಕರಣ ಸಂಬಂಧ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.