ವಿಜಯಪುರ: ಮಹಾರಾಷ್ಟ್ರದಿಂದ ಜಿಲ್ಲೆಗೆ ಮರಳಿದ 13 ಜನರಲ್ಲಿ ಬುಧವಾರ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 217ಕ್ಕೆ ಏರಿಕೆಯಾಗಿದೆ. ಮತ್ತೂಂದೆಡೆ ಸೋಂಕಿತರಲ್ಲಿ ಮತ್ತೆ ಇಬ್ಬರು ಗುಣಮುಖರಾಗಿ ಮನೆಗೆ ಮರಳಿದ್ದಾರೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ತಿಳಿಸಿದ್ದಾರೆ.
ಹೊಸದಾಗಿ ಸೋಂಕು ದೃಢಪಟ್ಟ 13 ಜನರಲ್ಲಿ 6 ಮಕ್ಕಳೇ ಇದ್ದಾರೆ. ಜಿಲ್ಲೆಯಲ್ಲಿ ಈವರೆಗೆ 217 ಜನ ಸೋಂಕಿತರು ಪತ್ತೆಯಾಗಿದ್ದು, 131 ಜನರು ಕೋವಿಡ್ ಆಸ್ಪತ್ರೆಯಲ್ಲಿ ಗುಣಮಟ್ಟದ ಚಿಕಿತ್ಸೆ ಫಲವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ 80 ಸಕ್ರೀಯ ರೋಗಿಗಳಿಗೆ ಚಿಕಿತ್ಸೆ ಮುಂದುವರೆದಿದ್ದು, ಸೋಂಕಿತರಲ್ಲಿ ಈ ವರೆಗೆ 6 ಜನರು ಮೃತಪಟ್ಟಿದ್ದಾರೆ ಎಂದು ವಿವರಿಸಿದ್ದಾರೆ.
ಜಿಲ್ಲೆಯಲ್ಲಿ ಹೊಸದಾಗಿ ಸೋಂಕು ದೃಢಟ್ಟವರನ್ನು 28 ವರ್ಷದ ವ್ಯಕ್ತಿ ಪಿ-5973, 5 ವರ್ಷದ ಬಾಲಕಿ ಪಿ-5974, 3 ವರ್ಷದ ಬಾಲಕಿ ಪಿ-5975, 50 ವರ್ಷದ ವ್ಯಕ್ತಿ ಪಿ-5976, 25 ವರ್ಷದ ವ್ಯಕ್ತಿ ಪಿ-5977, 24 ವರ್ಷದ ವ್ಯಕ್ತಿ ಪಿ-5978, 23 ವರ್ಷದ ಮಹಿಳೆ ಪಿ-5979, 7 ವರ್ಷದ ಬಾಲಕ ಪಿ-5980, 2 ವರ್ಷದ ಹೆಣ್ಣು ಮಗು ಪಿ-5981, 1 ವರ್ಷದ ಗಂಡು ಮಗು ಪಿ-5982, 10 ವರ್ಷದ ಬಾಲಕ ಪಿ-5983, 25 ವರ್ಷದ ಮಹಿಳೆ ಪಿ-5984, 28 ವರ್ಷದ ವ್ಯಕ್ತಿ ಪಿ-5994 ಎಂದು ಗುರುತಿಸಲಾಗಿದೆ. ಮತ್ತೂಂದೆಡೆ 22 ವರ್ಷದ ವ್ಯಕ್ತಿ ಪಿ-3157 ಹಾಗೂ 20 ವರ್ಷದ ಮಹಿಳೆ ಪಿ-4603 ಇವರು ಕೋವಿಡ್ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆಯ ಫಲವಾಗಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ 26,506 ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳಿಸಿದ್ದು, 26,139 ಜನರ ವರದಿ ನೆಗೆಟಿವ್ ಬಂದಿದೆ. 150 ಜನರ ವರದಿ ನಿರೀಕ್ಷೆಯಲ್ಲಿದ್ದೇವೆ. ಈ ವರೆಗೆ 217 ಜನರಲ್ಲಿ ಕೋವಿಡ್ ಸೋಂಕು ದೃಢಪಟ್ಟಿದ್ದು,131 ಜನರು ಸೋಂಕುಮುಕ್ತರಾಗಿ ಕೋವಿಡ್ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ.
ಈ ವರೆಗೆ ವಿದೇಶ ಹಾಗೂ ಇತರೆ ಸ್ಥಳಗಳಿಂದ ಜಿಲ್ಲೆಗೆ ಮರಳಿರುವ 29021 ಜನರ ಮೇಲೆ ನಿಗಾ ಇರಿಸಿದ್ದು, 8589 ಜನರು 28 ದಿನಗಳ ಐಸೋಲೇಶನ್ ಅವಧಿ ಮುಗಿಸಿದ್ದಾರೆ. 20295 ಜನರು 28 ದಿನಗಳ ರಿಪೋರ್ಟಿಂಗ್ ಅವಧಿಯಲ್ಲಿದ್ದಾರೆ ಎಂದು ಜಿಲ್ಲಾ ಧಿಕಾರಿಗಳು ವಿವರಿಸಿದ್ದಾರೆ.